ಶನಿವಾರ, ಡಿಸೆಂಬರ್ 14, 2019
21 °C

5 ಕೆಎಎಸ್‌ ಅಧಿಕಾರಿಗಳ ವರ್ಗಾವಣೆ     

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸರ್ಕಾರ ಹಿರಿಯ ಮತ್ತು ಕಿರಿಯ ಶ್ರೇಣಿಯ ಐದು ಮಂದಿ ಕೆಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.

ಕೆಎಎಸ್‌ ಅಧಿಕಾರಿಗಳ ಪೈಕಿ ಎಂ.ಸತೀಶ್‌ ಕುಮಾರ್‌ ಅವರನ್ನು ಬೆಳಗಾವಿ ಅಪರ ಜಿಲ್ಲಾಧಿಕಾರಿಯಾಗಿ, ಬಿ. ಅಭಿಜಿನ್‌ ಅವರನ್ನು ಬೈಲಹೊಂಗಲ ಉಪ ವಿಭಾಗಾಧಿಕಾರಿಯಾಗಿ, ಹೆಚ್‌.ಜಿ. ಚಂದ್ರಶೇಖರಯ್ಯ ಅವರನ್ನು ಚಿಕ್ಕೊಡಿ ಉಪ ವಿಭಾಗಾಧಿಕಾರಿಯಾಗಿ, ರವೀಂದ್ರ ಕರಿಲಿಂಗಣ್ಣವರ್‌ ಅವರನ್ನು ಹಾವೇರಿ ಜಿಲ್ಲೆಯ ಆಹಾರ ಮತ್ತು ಸರಬರಾಜು ಇಲಾಖೆಯ ಉಪ ನಿರ್ದೇಶಕರಾಗಿ, ಬಿ.ಮಲ್ಲಿಕಾರ್ಜುನ ಅವರನ್ನು ಗೋಕಾಕ್‌ನ ನಗರ ಸಭೆ ಪೌರಾಯುಕ್ತರಾಗಿ ನೇಮಕ ಮಾಡಲಾಗಿದೆ. 

ಮುಂಬರುವ ವಿಧಾನಸಭಾ ಉಪಚುನಾವಣೆ ಹಿನ್ನೆಲೆ ವರ್ಗಾವಣೆ ಮಾಡಲಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು