ಬೆಂಗಳೂರು: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎಬಿ) 2019ರಲ್ಲಿ 3.65 ಕೋಟಿ ಪ್ರಯಾಣಿಕರನ್ನು ಸ್ವಾಗತಿಸಿದೆ. ಅಂದರೆ, ಈ ವರ್ಷ ಇಷ್ಟು ಪ್ರಯಾಣಿಕರು ಕೆಐಎಬಿ ಮೂಲಕ ಪ್ರಯಾಣ ಮಾಡಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಪ್ರಮಾಣದಲ್ಲಿ ಶೇ 4.1ರಷ್ಟು ಏರಿಕೆಯಾಗಿದೆ. 2018ರಲ್ಲಿ 3.2 ಕೋಟಿ ಪ್ರಯಾಣಿಕರು ಈ ನಿಲ್ದಾಣದ ಮೂಲಕ ಸಂಚರಿಸಿದ್ದರು.

ಈ ವರ್ಷದಲ್ಲಿ ಬೃಹತ್ ವಿಮಾನ ಯಾನ ಸಂಸ್ಥೆಗಳು ಮುಚ್ಚಿದ್ದರಿಂದ ಭಾರತೀಯ ವಿಮಾನಯಾನ ಉದ್ಯಮ ಸಂಕಷ್ಟದಲ್ಲಿತ್ತು. ಆದರೂ, ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದು ಸಂತಸ ಮೂಡಿಸಿದೆ ಎಂದು ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮ (ಬಿಐಎಎಲ್) ಹೇಳಿದೆ.

ಶೇ 14 :ಅಂತರರಾಷ್ಟ್ರೀಯ ಪ್ರಯಾಣಿಕರು. ಈ ಪ್ರಮಾಣದಲ್ಲಿ ಶೇ 2.6ರಷ್ಟು ಬೆಳವಣಿಗೆ

2.35 ಲಕ್ಷ:ವರ್ಷದಲ್ಲಿ ಒಟ್ಟು ವಿಮಾನ ಹಾರಾಟ

644 :ದಿನಕ್ಕೆ ಸರಾಸರಿ ಒಟ್ಟು ವಿಮಾನ ಹಾರಾಟ

3.79 ಲಕ್ಷ ಟನ್:ವರ್ಷದಲ್ಲಿ ಸಾಗಿಸಲಾದ ಸರಕು ಪ್ರಮಾಣ

36:ಕಾರ್ಯಾಚರಿಸಿದ ಪ್ರಯಾಣಿಕ ವಿಮಾನಯಾನ ಸಂಸ್ಥೆಗಳು

14 :ಕಾರ್ಯಾಚರಿಸಿದ ಸರಕು ಸಾಗಣೆ ವಿಮಾನಯಾನ ಸಂಸ್ಥೆಗಳು

57 :ದೇಶದಲ್ಲಿನ ಸ್ಥಳಗಳಿಗೆ ಹಾರಾಟ

25 :ವಿದೇಶಗಳಲ್ಲಿನ ಸ್ಥಳಗಳಿಗೆ ಹಾರಾಟ

ಹೆಚ್ಚು ಜನ ಪ್ರಯಾಣಿಸಿದ ಪ್ರಮುಖ ಮೂರು ನಗರ

ದೇಶ:ದೆಹಲಿ, ಮುಂಬೈ, ಹೈದರಾಬಾದ್

ವಿದೇಶ:ಸಿಂಗಪುರ, ದುಬೈ, ಕೌಲಲಾಂಪುರ

ಜ.20 :2019ರ ಈ ಒಂದೇ ದಿನ ವಿಮಾನ ನಿಲ್ದಾಣದ ಮೂಲಕ 1.17 ಲಕ್ಷ ಜನ ಪ್ರಯಾಣಿಸಿದ್ದಾರೆ

ಜ.11 :2019ರಲ್ಲಿ ಈ ಒಂದೇ ದಿನದಲ್ಲಾದ ಒಟ್ಟು ವಿಮಾನ ಹಾರಾಟ

ಮುಂದಿನ ಐದು ವರ್ಷಗಳಲ್ಲಿ ಪ್ರಯಾಣಿಕರ ಸಂಖ್ಯೆ ವರ್ಷಕ್ಕೆ 5.5 ಕೋಟಿಯಿಂದ 6.5 ಕೋಟಿಗೆ ಏರುವ ನಿರೀಕ್ಷೆ ಇದೆ. ಇದಕ್ಕೆ ಪೂರಕವಾಗಿ ಬಿಐಎಎಲ್‌ನಿಂದ ಮೂಲಸೌಕರ್ಯ ವಿಸ್ತರಣೆಗಾಗಿ ₹13 ಸಾವಿರ ಕೋಟಿ ಹೂಡಿಕೆ ಮಾಡಲಾಗುತ್ತಿದೆ

- ಹರಿ ಮಾರರ್, ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.