ಜನರ ಅಳಲು: ಅಧಿಕಾರಿ, ಜನಪ್ರತಿನಿಧಿ, ಸೇನೆ, ಹೆಲಿಕಾಪ್ಟರ್‌, ಪರಿಹಾರ ಬರೀ ಬೊಗಳೆ

7

ಜನರ ಅಳಲು: ಅಧಿಕಾರಿ, ಜನಪ್ರತಿನಿಧಿ, ಸೇನೆ, ಹೆಲಿಕಾಪ್ಟರ್‌, ಪರಿಹಾರ ಬರೀ ಬೊಗಳೆ

Published:
Updated:

ಬೆಂಗಳೂರು: ‘ಎಲ್ಲ ಬರೀ ಬೊಗಳೆ...ಪರಿಹಾರ, ಹೆಲಿಕಾಪ್ಟರ್, ಸೈನ್ಯ, ಅಧಿಕಾರಿ, ಜನಪ್ರತಿನಿಧಿ..ಯಾರೊಬ್ಬರಿಂದಲೂ ನಯಾಪೈಸೆ ಪ್ರಯೋಜನ ಇಲ್ಲ..’ ಹೀಗೆಂದು ಪ್ರವಾಹ ಪೀಡಿತ ಪ್ರದೇಶದ ಜನರು ಆಡಳಿತ ವರ್ಗದ ವಿರುದ್ಧ ಕಿಡಿಕಾರುತ್ತಿ‌ದ್ದಾರೆ. 

ಸಂತ್ರಸ್ತ ಪ್ರದೇಶದಲ್ಲಿನ ದುಸ್ಥಿತಿಯ ಚಿತ್ರ, ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡುತ್ತಿರುವ ಹಲವಾರು ಜನರು ಭೂಕುಸಿತದಿಂದ ಬೆಟ್ಟಗಳಲ್ಲಿ ಸಿಲುಕಿರುವವರು ಸುರಕ್ಷಿತವಾಗಿ ಹೊರಬರಲು ಸೂಕ್ತ ಕ್ರಮಗಳನ್ನು ಆಡಳಿತ ವರ್ಗ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 
 

‘ನಮ್ಮನ ಕಾಪಾಡೋಕೆ ಈಗ ಬರ್ತಾರೆ, ಆಗ ಬರ್ತಾರೆ ಅಂತ ಕಾದು ಕಾದು ಸಾಕಾಗಿ ಇಂದು ಬೆಳಗ್ಗೆ(ಶನಿವಾರ) ಕುಸಿಯುತ್ತಿರುವ ಬೆಟ್ಟ ಹತ್ತುತ್ತಾ ಮಾದಾಪುರ ಕಡೆಗೆ ನಡೆಯುತ್ತಿದ್ದೇವೆ’ ಎಂಬ ಮುಕ್ಕೋಡ್ಲು ಮಂದಿಯ ಮನದಾಳವನ್ನು ಸ್ಥಳೀಯರೊಬ್ಬರು ಹಂಚಿಕೊಂಡಿದ್ದಾರೆ. 

‘ಸುಮಾರು 50 ಗ್ರಾಮಸ್ಥರು ಸುರಿಯುವ ಮಳೆ, ಮೈತುಂಬಾ ಕಚ್ಚುವ ಜಿಗಣೆ ಮಧ್ಯೆ ಪ್ರಾಣ ಉಳಿದರೆ ಸಾಕೆಂದು ಮನೆ, ಮಠ, ಪ್ರೀತಿಯ ಸಾಕುಪ್ರಾಣಿಗಳನ್ನು ಬಿಟ್ಟು ಹೊರಟಿರುವ ಇಂಥಹ ಸ್ಥಿತಿ ಯಾರಿಗೂ ಬಾರದಿರಲಿ...." ಎಂದು ನೆರೆಯಲ್ಲಿ ಸಿಲುಕಿರುವವರು ದೇವರಲ್ಲಿ ಮೊರೆಯಿಡುತ್ತಿದ್ದಾರೆ. 
 

***
 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 2

  Sad
 • 0

  Frustrated
 • 3

  Angry

Comments:

0 comments

Write the first review for this !