ಶನಿವಾರ, ಜೂನ್ 6, 2020
27 °C
ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಪ್ರಧಾನಿ, ರಾಷ್ಟ್ರಪತಿಗೆ ಮನವಿ: ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತೋಟಗಾರಿಕೆ ಇಲಾಖೆ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಶುಕ್ರವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದಗಂಗಾಶ್ರೀಗಳಿಗೆ ಭಾರತ ರತ್ನ ನೀಡುವಂತೆ ಮತ್ತೊಮ್ಮೆ ಪ್ರಧಾನಿ, ರಾಷ್ಟ್ರಪತಿಗಳಿಗೆ ಮನವಿ ಮಾಡುತ್ತೇನೆ. ಇಂದು ಮಧ್ಯಾಹ್ನ ಮಠಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತೇನೆ. ದೇವರ ದಯೆಯಿಂದ‌ ಅವರು ಬೇಗ ಗುಣಮುಖರಾಗಲಿ, ಬಹಳ ವರ್ಷಗಳು ನಮ್ಮ‌ ಜೊತೆ ಇರ‌ಲಿ’ ಎಂದು ಹೇಳಿದರು.

ಗುರುಗ್ರಾಮದಲ್ಲಿರುವ ರಾಜ್ಯ ಬಿಜೆಪಿ ಶಾಸಕರು ನಾಳೆ ವಾಪಸ್‌ ಬರುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅಯ್ಯೋ ಪಾಪ ಅವರೆಲ್ಲ ರೆಸ್ಟ್‌ಗೆ ಹೋಗಿದ್ದಾರೆ. ಈಗಲಾದರೂ ತಮ್ಮ ಕ್ಷೇತ್ರಗಳತ್ತ ಮುಖ ಮಾಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲಿ' ಎಂದು ವ್ಯಂಗ್ಯವಾಡಿದರು.

ಜ.27ರವರೆಗೆ ಸಾರ್ವಜನಿಕರಿಗೆ ಫಲಪುಷ್ಪ ಪ್ರದರ್ಶನ ಇರಲಿದೆ.

ಸಹಸ್ರಾರು ಹೂಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಬದುಕಿನ ಪ್ರಮುಖ ಘಟನೆಗಳು ತೆರೆದುಕೊಳ್ಳಲಿವೆ. ಪ್ರದರ್ಶನಕ್ಕೆ ಭೇಟಿ ನೀಡುವ ಸಸ್ಯ ಪ್ರೇಮಿಗಳಿಗೆ ಮತ್ತು ತೋಟಗಾರಿಕೆ ಆಸಕ್ತರಿಗಾಗಿ ಔಷಧಿ, ಆಲಂಕಾರಿಕ ಸಸ್ಯಗಳು ಹಾಗೂ ಬೊನ್ಸಾಯ್ ಗಿಡಗಳು, ತೋಟಗಾರಿಕೆ ಸಲಕರಣೆಗಳು ದೊರೆಯುತ್ತವೆ.


ಸಬರಮತಿ ಆಶ್ರಮದ‌ ಮುಂದೆ ಗಾಂಧಿ ವೇಷಧಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು