ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂವ್ಯಾಜ್ಯ: ಡಿಸಿಗೆ ಇಲ್ಲ ಅಧಿಕಾರ

Last Updated 27 ಜನವರಿ 2020, 19:53 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ಥಿರಾಸ್ತಿಗೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ಸ್ವತ್ತಿನ ಅಧಿಕಾರ ನಿರ್ಧರಿಸುವ ಹಕ್ಕು ಅರೆನ್ಯಾಯಿಕ ವಿಚಾರಣೆಯ ತಹಶೀಲ್ದಾರ್, ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳಿಗೆ ಇಲ್ಲ. ಕೇವಲ ಸಿವಿಲ್ ನ್ಯಾಯಾಲಯಗಳಿಗೆ ಮಾತ್ರವೇ ಇದೆ’ ಎಂದು ಹೈಕೋರ್ಟ್‌ ಪೂರ್ಣಪೀಠ ಮಹತ್ವದ ತೀರ್ಪು ನೀಡಿದೆ.

ಈ ಕುರಿತಂತೆ ನ್ಯಾಯಮೂರ್ತಿ ಎಸ್‌.ಎನ್‌.ಸತ್ಯನಾರಾಯಣ ನೇತೃತ್ವದ ನ್ಯಾಯಮೂರ್ತಿ ಬಿ.ವೀರಪ್ಪ ಹಾಗೂ ನ್ಯಾಯಮೂರ್ತಿ ಕೆ.ನಟರಾಜನ್‌ ಅವರಿದ್ದ ತ್ರಿಸದಸ್ಯ ನ್ಯಾಯಪೀಠವು ಕಾಯ್ದಿರಿಸಿದ್ದ ವಿಸ್ತೃತ ತೀರ್ಪನ್ನು ಪ್ರಕಟಿಸಿದೆ.

‘ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 129ರ ಅನುಸಾರ ಸ್ಥಿರಾಸ್ತಿ ವ್ಯಾಜ್ಯಗಳಲ್ಲಿ ಹಕ್ಕುದಾರಿಕೆಯ ಅಧಿಕಾರವನ್ನು ನಿರ್ಧರಿಸುವ ತಹಶೀಲ್ದಾರ್‌ ಆದೇಶ ಪ್ರಶ್ನಿಸಿ ವ್ಯಾಜ್ಯಕರ್ತರು, ಉಪವಿಭಾಗಾಧಿಕಾರಿ ಅಥವಾ ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸುವ ಬದಲಿಗೆ ನೇರವಾಗಿ ಸಕ್ಷಮ ಪ್ರಾಧಿಕಾರವಾದ ಸಿವಿಲ್‌ ಕೋರ್ಟ್ ಮೊರೆ ಹೋಗಬಹುದು. ಸಿವಿಲ್‌ ಕೋರ್ಟ್ ನೀಡುವ ಡಿಕ್ರಿ ಅನುಸಾರವೇ ಸ್ವತ್ತಿನ ಹಕ್ಕುದಾರಿಕೆ ಮಾನ್ಯವಾಗುತ್ತದೆ’ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT