ನವದೆಹಲಿ: ದೇಶವ್ಯಾಪಿ ಲಾಕ್‌ಡೌನ್ ಅನ್ನು ಸೋಮವಾರದಿಂದ ಇನ್ನೆರಡು ವಾರ ವಿಸ್ತರಿಸಲಾಗಿದೆ. ಆದರೆ, ಮೂರನೇ ಅವಧಿಯ ಈ ದಿಗ್ಬಂಧನ ಸೀಮಿತವಾಗಿರುತ್ತದೆ. ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳು ಎಂದು ವರ್ಗೀಕರಿಸಲಾಗಿರುವ ಜಿಲ್ಲೆಗಳಲ್ಲಿ ಹಲವು ಚಟುವಟಿಕೆಗಳಿಗೆ ಅವಕಾಶ ದೊರೆಯಲಿದೆ. ಅಂತರ ರಾಜ್ಯ ವಾಹನ ಸಂಚಾರ, ವಿಮಾನ ಮತ್ತು ರೈಲು ಸೇವೆಗಳ ಮೇಲಿನ ದಿಗ್ಬಂಧನ ಮುಂದುವರಿಯಲಿದೆ.

ಕೇಂದ್ರದ ಆರೋಗ್ಯ ಸಚಿವಾಲಯವು ದೇಶದ 130 ಜಿಲ್ಲೆಗಳನ್ನು ಕೆಂಪು ವಲಯ, 284 ಜಿಲ್ಲೆಗಳನ್ನು ಕಿತ್ತಳೆ ವಲಯ ಹಾಗೂ 319 ಜಿಲ್ಲೆಗಳನ್ನು ಹಸಿರು ವಲಯ ಎಂದು ಪಟ್ಟಿ ಮಾಡಿದೆ.

ಏನೆಲ್ಲಾ ಇದೆ...

* ಅಗತ್ಯ ವಸ್ತುಗಳಪೂರೈಕೆ

* ಮೆಡಿಕಲ್ ಶಾಪ್

* ಆಯ್ದ ಉದ್ದೇಶಗಳಿಗೆ ಮತ್ತು ಕೇಂದ್ರ ಗೃಹ ಸಚಿವಾಲಯದಿಂದ ಅನುಮತಿ ಪಡೆದ ಉದ್ದೇಶಗಳಿಗೆ ಮಾತ್ರ ರೈಲು ಮತ್ತು ವಿಮಾನ ಸಂಚಾರಕ್ಕೆ ಅವಕಾಶ

* ಶೇ 33ರಷ್ಟು ಸಿಬ್ಬಂದಿಯೊಂದಿಗೆ ಖಾಸಗಿ ಕಂಪನಿಗಳ ಕಾರ್ಯಚಟುವಟಿಕೆ (ಕಿತ್ತಳೆ ವಲಯ)

* ಕಾರುಗಳಲ್ಲಿ ಇಬ್ಬರು ಮತ್ತು ದ್ವಿಚಕ್ರ ವಾಹನಗಳಲ್ಲಿ ಒಬ್ಬರು ಸಂಚರಿಸಲು ಮಾತ್ರ ಅವಕಾಶ

* ಎಲ್ಲ ಮೂರು ವಲಯಗಳಲ್ಲಿಯೂ ಆಸ್ಪತ್ರೆಗಳ ಹೊರ ರೋಗಿ ವಿಭಾಗಗಳು ಮತ್ತು ಕ್ಲಿನಿಕ್‌ಗಳನ್ನು ತೆರೆಯಲು ಅವಕಾಶ ಇದೆ

* ಮದ್ಯ, ತಂಬಾಕು, ಪಾನ್ ಮಾರಾಟಕ್ಕೆ ಅವಕಾಶ ಇದೆ. ಆದರೆ, ಅಂಗಡಿಯೊಳಗೆ ಒಬ್ಬರಿಂದ ಒಬ್ಬರಿಗೆ ಆರು ಅಡಿ ಅಂತರ ಇರಬೇಕು. ಒಮ್ಮೆಗೆ ಅಂಗಡಿಯೊಳಗೆ ಐದಕ್ಕಿಂತ ಹೆಚ್ಚು ಜನರು ಇರುವಂತಿಲ್ಲ.

ಏನೆಲ್ಲಾ ಇಲ್ಲ...
* ಬಸ್, ರೈಲು , ವಿಮಾನ ಸೇವೆ ಇರುವುದಿಲ್ಲ

* ಧಾರ್ಮಿಕ ಸ್ಥಳಗಳು, ಪ್ರಾರ್ಥನಾ ಸ್ಥಳಗಳು ತೆರೆಯುವಂತಿಲ್ಲ

* ಚಿತ್ರಮಂದಿರ, ಮಾಲ್, ಜಿಮ್,

* ರಾಜಕೀಯ ಪಕ್ಷಗಳ ಸಮಾವೇಶಗಳಿಗೆ ಅವಕಾಶ ಇಲ್ಲ

* ಶಿಕ್ಷಣ, ತರಬೇತಿ, ಕೋಚಿಂಗ್ ಸಂಸ್ಥೆಗಳು,

* ಹೋಟೆಲ್, ರೆಸ್ಟೊರೆಂಟ್, ಬಾರ್ ಸೇರಿ ಆತಿಥ್ಯ ಸೇವೆಗಳೆಲ್ಲವೂ ಬಂದ್

*ಕೆಂಪು ವಲಯದ ಒಳಗೆ ಮತ್ತು ಕಂಟೈನ್‌ಮೆಂಟ್ ವಲಯದ ಹೊರ ವಲಯಗಳಲ್ಲಿ ಸೈಕಲ್ ರಿಕ್ಷಾ, ಆಟೊ ರಿಕ್ಷಾ, ಟ್ಯಾಕ್ಸಿಸೇವೆಗೆ ಅವಕಾಶ ಇಲ್ಲ. ಸೆಲೂನ್‌ಗಳನ್ನೂ ತೆರೆಯಬಾರದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.