ಸೋಮವಾರ, ಜನವರಿ 20, 2020
19 °C

ಸರ್ಕಾರಿ ಗೌರವದೊಂದಿಗೆ ಚಿದಾನಂದಮೂರ್ತಿ ಅಂತ್ಯಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿರಿಯ ಸಂಶೋಧಕ, ಶನಿವಾರ ನಿಧನರಾಗಿರುವ ಡಾ.ಎಂ.ಚಿದಾನಂದ ಮೂರ್ತಿ (88) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಗರದ ಸುಮನಳ್ಳಿ ವಿದ್ಯುತ್ ಚಿತಾಗಾರದಲ್ಲಿ ಭಾನುವಾರ ನೆರವೇರಿತು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು, ಚಿದಾನಂದಮೂರ್ತಿಯವರ ಬಂಧುಗಳು, ಅಪಾರ ಅಭಿಮಾನಿಗಳು ಹಾಜರಿದ್ದರು. ಅಂತ್ಯಕ್ರಿಯೆ ವೇಳೆ ‘ಅಮರರಾಗಲಿ ಚಿದಾನಂದಮೂರ್ತಿ’, ‘ಸಿರಿಗನ್ನಡಂ ಗೆಲ್ಗೆ’ ಎಂಬ ಘೋಷಣೆಗಳು ಕೇಳಿಬಂದವು.

ಇದನ್ನೂ ಓದಿ: ಹಿರಿಯ ಸಂಶೋಧಕ, ಬರಹಗಾರ ಡಾ. ಚಿದಾನಂದಮೂರ್ತಿ ಇನ್ನಿಲ್ಲ

ವೀರಶೈವ–ಲಿಂಗಾಯತ ಪದ್ಧತಿಯಲ್ಲಿ ದೇಹವನ್ನು ಸಮಾಧಿ ಮಾಡುವ ಸಂಪ್ರದಾಯ ಇದೆ. ಆದರೆ, ಚಿದಾನಂದಮೂರ್ತಿಯವರು ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸುವಂತೆ ಮೊದಲೇ ತಿಳಿಸಿದ್ದರು.

ಕನ್ನಡ ಶಕ್ತಿ ಕೇಂದ್ರದ ಮೂಲಕ ಕನ್ನಡ ಭಾಷಾ ಚಳವಳಿಗೆ ಹೊಸ ಆಯಾಮ ಕೊಟ್ಟಿದ್ದ ಚಿದಾನಂದ ಮೂರ್ತಿ ಅವರು ನಾಡಿನ ನೆಲ-ಜಲ, ಭಾಷೆ-ಸಂಸ್ಕೃತಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು.


ಚಿದಾನಂದಮೂರ್ತಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಇನ್ನಷ್ಟು...

ಸಜ್ಜನಕೋಲು...'ಚಿದಾನಂದ ಮೂರ್ತಿ'

ಚಿಮೂ ಮತ್ತು ಕನ್ನಡದ ಸೊಲ್ಲು

ಡಾ.ಎಂ.ಚಿದಾನಂದಮೂರ್ತಿ: ಕನ್ನಡ ಅಸ್ಮಿತೆಯನ್ನು ಎಡೆಬಿಡದೆ ಹುಡುಕಿದ್ದ ವಿದ್ವಾಂಸ

ಕನ್ನಡದ ಯೋಧ, ಪ್ರೇರಕ ಶಕ್ತಿಯಾಗಿದ್ದ ಚಿದಾನಂದಮೂರ್ತಿ: ವೆಂಕಟಾಚಲ ಶಾಸ್ತ್ರಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು