ರಾಯಚೂರು: ಜಿಲ್ಲೆಯಲ್ಲಿ ಮಕ್ಕಳು ಅಪೌಷ್ಟಿಕ ಸಮಸ್ಯೆಯಿಂದ ಬಳಲುವುದಕ್ಕೆ ಮೂಲ ಕಾರಣ ಸಿಎಚ್ (ಕ್ಲೋರೊ ಹೈಡ್ರೇಟ್) ಪೌಡರ್ ಎಂದು ರಿಮ್ಸ್ ಮಾನಸಿಕರೋಗ ವಿಭಾಗದ ವೈದ್ಯ ಡಾ.ರಮೇಶಬಾಬು ಪತ್ತೆ ಮಾಡಿದ್ದಾರೆ.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಅಪೌಷ್ಟಿಕ ಸಮಸ್ಯೆಯ ಈ ಹೊಸ ಆಯಾಮವನ್ನು ಒಪ್ಪಿದ್ದು, ಸಿಎಚ್ ಪೌಡರ್ನ್ನುಅಬಕಾರಿ ಕಾಯ್ದೆಯಡಿ ‘ಮಾದಕ ಪದಾರ್ಥ’ ಎಂದು ಪರಿಗಣಿಸುವಂತೆಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದೆ.

ರಿಮ್ಸ್ ಆಸ್ಪತ್ರೆಯ ಅಪೌಷ್ಟಿಕ ಮಕ್ಕಳ ಆರೈಕೆ ವಿಭಾಗಕ್ಕೆ ಆಯೋಗದ ತಂಡವು ಭೇಟಿ ನೀಡಿ ಸಮಸ್ಯೆಯ ಗಂಭೀರತೆಯನ್ನು ಮನವರಿಕೆ ಮಾಡಿಕೊಂಡಿದೆ.

‘ರಾಯಚೂರು, ದೇವದುರ್ಗ, ಸಿಂಧನೂರು ತಾಲ್ಲೂಕುಗಳಲ್ಲಿ ಅಪೌಷ್ಟಿಕ ಮಕ್ಕಳು ಹುಟ್ಟುತ್ತಿವೆ. ಶಿಶುಗಳು ಗರ್ಭದಲ್ಲಿ ಇದ್ದಾಗಲೇ ಅಪೌಷ್ಟಿಕ ಸಮಸ್ಯೆಗೆ ಒಳಗಾಗುತ್ತಿವೆ. ಅದರಲ್ಲೂ ಶೇ 90ರಷ್ಟು ಅಪೌಷ್ಟಿಕ ಮಕ್ಕಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿವೆ. ರಿಮ್ಸ್ ಆಸ್ಪತ್ರೆಯ ಎನ್ಎಸ್ಸಿ ವಿಭಾಗದಲ್ಲಿ ನವೆಂಬರ್ನಲ್ಲಿ ದಾಖಲಾದ 13 ಮಕ್ಕಳಲ್ಲಿ 11 ಪರಿಶಿಷ್ಟರ ಮಕ್ಕಳು. ಶಿಶುವಿನೊಂದಿಗೆ ಆಸ್ಪತ್ರೆಯಲ್ಲಿ ಉಳಿಯುವ ತಾಯಿಂದಿರೂ ಅಪೌಷ್ಟಿಕ ಸಮಸ್ಯೆಯಿಂದ ಬಳಲುತ್ತಿರುತ್ತಾರೆ’ ಎನ್ನುತ್ತಾರೆ ಡಾ.ರಮೇಶಬಾಬು.

ಏನಿದು ಸಿಎಚ್ ಪೌಡರ್: ಪೊಲೀಸರು ಹೇಳುವ ಪ್ರಕಾರ, ಸಿಎಚ್ ಪೌಡರ್ ಅನ್ನು ಕಾರ್ಖಾನೆಗಳಲ್ಲಿ ಲೋಹದ ಕೊಳವೆ ಸ್ವಚ್ಛಗೊಳಿಸಲು ಬಳಕೆ ಮಾಡುತ್ತಾರೆ. ಇದು ಗುಜರಾತ್ನಿಂದ ದೇಶದ ವಿವಿ
ಧೆಡೆ ಪೂರೈಕೆ ಆಗುತ್ತಿದೆ. ರಾಯಚೂರು ಜಿಲ್ಲೆಗೆ ಹೈದರಾಬಾದ್ ಮೂಲಕ ಅಕ್ರಮವಾಗಿ ಪೂರೈಕೆ ಆಗುತ್ತಿದೆ.

‘ನೀರಿಗೆ ಸಿಎಚ್ ಪೌಡರ್, ಸ್ಯಾಕ್ರಿನ್, ಸ್ವೀಟ್ನರ್ ಮಿಶ್ರಣ ಮಾಡಿ ನಕಲಿ ಸೇಂದಿ ತಯಾರಿಸಿ ಮಾರಾಟ ಮಾಡಲಾಗುತ್ತದೆ. ಒಂದು ಗ್ಲಾಸ್ ಸೇಂದಿಗೆ ₹ 10 ಅಗ್ಗದ ದರದಲ್ಲಿ ಸಿಗುತ್ತದೆ. ಇದರಿಂದ ಅಮಲು ಆವರಿಸುತ್ತದೆ. ಈ ದಂಧೆಯು ಕೊಳೆಗೇರಿಗಳಲ್ಲಿ ವ್ಯಾಪಕವಾಗಿದೆ. ಅಬಕಾರಿ ಇಲಾಖೆಯವರುದಾಳಿ ಮಾಡುತ್ತಿದ್ದರೂ ಸಿಎಚ್ ಪೌಡರ್ ಬರುವುದನ್ನು ಸಂಪೂರ್ಣ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ’ ಎನ್ನುವುದು ಮೂಲಗಳ ವಿವರಣೆ.

ರಾಯಚೂರಿನಲ್ಲಿ ಅಪೌಷ್ಟಿಕ ಮಕ್ಕಳು

ವರ್ಷ – ಮಕ್ಕಳು

2017 – 173

2018 – 411

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.