ಗುರುವಾರ , ಫೆಬ್ರವರಿ 20, 2020
31 °C

ಮಂಗಳೂರಿನಲ್ಲಿ ಬಾಂಬ್‌ ಪತ್ತೆ: ಆಟೊ ರಿಕ್ಷಾ, ಶಂಕಿತ ವ್ಯಕ್ತಿಯ ಚಿತ್ರ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಬಜ್ಪೆ ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆ ಆಟೊ ರಿಕ್ಷಾದಲ್ಲಿ ಬಂದು ಸುಧಾರಿತ ಬಾಂಬ್‌ಗಳಿರುವ ಬ್ಯಾಗ್‌ ಅನ್ನು ಇಟ್ಟಿರುವ ಶಂಕಿತ ವ್ಯಕ್ತಿಯ ಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. 

ಇದನ್ನೂ ಓದಿ: ಮಂಗಳೂರಿನಲ್ಲಿ ಬಾಂಬ್‌ ಪತ್ತೆ: ವೈರ್‌ ಬಳಸಿ ಬಾಂಬ್ ಚೀಲ ಸ್ಫೋಟಿಸಿದ ಸಿಬ್ಬಂದಿ

ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಅಧಿಕೃತವಾಗಿ ಆಟೊ ರಿಕ್ಷಾ ಮತ್ತು ಶಂಕಿತ ವ್ಯಕ್ತಿಯ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. 

ಶಂಕಿತ ವ್ಯಕ್ತಿಯು ಆಟೊದಲ್ಲಿ ಬಂದು ಬ್ಯಾಗ್‌ ಇಟ್ಟು ಹೋಗಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಶಂಕಿತ ವ್ಯಕ್ತಿ

ಸ್ಫೋಟಕ ಇರುವ ಬ್ಯಾಗ್ ಸಮೇತ ಬಾಂಬ್ ನಿಷ್ಕ್ರಿಯ ದಳದ ವಾಹನವನ್ನು ಇಲ್ಲಿನ ಕೆಂಜಾರು ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಮರಳಿನ ಚೀಲಗಳನ್ನು ಪೇರಿಸಿದ್ದ ತಜ್ಞ ಸಿಬ್ಬಂದಿಗಳು ಬಾಂಬ್‌ ಸ್ಫೋಟಿಸಿದ್ದಾರೆ.

ಟೈಮರ್ ಸಂಪರ್ಕ ಸ್ಥಗಿತವಾಗಿರುವ ಕಾರಣ ಚೀಲವನ್ನೇ ಸ್ಫೋಟಿಸಲು ತಜ್ಞ ಸಿಬ್ಬಂದಿಗಳು ನಿರ್ಧರಿಸಿದ್ದರು.

ಸುಮಾರು 350 ಮೀಟರ್ ದೂರದಲ್ಲಿ ವೈರ್ ಬಳಸಿ ಜೀವಂತ ಬಾಂಬ್‌ ಅನ್ನು ಸ್ಫೋಟಿಸಿದರು ಎಂದು ಮಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು