ಗುರುವಾರ , ಜನವರಿ 23, 2020
28 °C

ಪ್ರತಿಭಟನೆ: ಸಂಸದ ಬಿನೋಯ್ ಸೇರಿ ಹಲವರು ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ನಗರದಲ್ಲಿ ಕರ್ಫ್ಯೂ ವಿಧಿಸಿದ್ದರೂ, ಪ್ರತಿಭಟನೆಗೆ ಯತ್ನಿಸಿದ ರಾಜ್ಯಸಭಾ ಸದಸ್ಯರೂ ಆಗಿರುವ ಕೇರಳದ ಬಿನೋಯ್‌ ವಿಶ್ವಂ ಸೇರಿದಂತೆ ಆರು ಜನ ಸಿಪಿಐ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ನಗರದಲ್ಲಿ ಗುರುವಾರ ನಡೆದ ಹಿಂಸಾಚಾರವನ್ನು ಖಂಡಿಸಿ ಸಿಪಿಐ ಮುಖಂಡರು ಶನಿವಾರ ಪಾಲಿಕೆಯ ಗಾಂಧಿ ಪ್ರತಿಮೆಯ ಎದುರು ಪ್ರತಿಭಟನೆ ನಡೆಸಿದರು.

ಬಿನೋಯ್‌ ಅವರ ಜೊತೆ ಜ್ಯೋತಿ ಕೆ., ಜ್ಯೋತಿ ಎ., ಜನಾರ್ದನ್ ಕೆ.ಎಸ್., ಸಂತೋಷ್ ಎಚ್.ಎಂ., ಸಾತಿ ಸುಂದರೇಶ್ ಅವರನ್ನೂ ಪೊಲೀಸರು ವಶಕ್ಕೆ ಪಡೆದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು