ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೆ ಮಾಣಿಕೇಶ್ವರಿ ಎಂಬ 'ಶಕ್ತಿ'

Last Updated 7 ಮಾರ್ಚ್ 2020, 17:51 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಎಂದರೆ ತಕ್ಷಣ ‌ನೆನಪಾಗುವುದು ಮಾತೆ‌ ಮಾಣಿಕೇಶ್ವರಿ ಅಮ್ಮನವರು.

ದಶಕಗಳ ರಾಜ್ಯದ ಪ್ರಭಾವಿ ‌ರಾಜಕಾರಣಿಗಳೂ ಮಾಣಿಕೇಶ್ವರಿ ದೇವಿ ಅವರ ಭೇಟಿಗಾಗಿ ಗಂಟೆಗಟ್ಟಲೇ ಕಾದದ್ದುಂಟು.

ನಿರಾಹಾರಿಯಾಗಿಯೇ ಜೀವಿಸಿದ್ದರು ಎಂದು ನಂಬಲಾದ ಮಾತೆ‌ ಮಾಣಿಕೇಶ್ವರಿ ಅವರು ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಕೊಡುತ್ತಿದ್ದರು.

ಅವರು ದರ್ಶನ ಕೊಡುತ್ತಾರೆ ಎಂದರೆ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶದ ಲಕ್ಷಾಂತರ ಭಕ್ತರು ಯಾನಾಗುಂದಿಗೆ ಬಂದು‌‌ ಸೇರುತ್ತಿದ್ದರು.

ಇತ್ತೀಚೆಗೆ ಉಪಮುಖ್ಯಮಂತ್ರಿ ‌ಡಾ.ಸಿ.ಎನ್.ಅಶ್ವಥ್ ‌ನಾರಾಯಣ ಹಾಗೂ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಮಾಣಿಕೇಶ್ವರಿ ಅವರನ್ನು ಭೇಟಿ ಮಾಡಿ ದರ್ಶನ ಪಡೆದಿದ್ದರು.

ಅಹಿಂಸಾ ಧರ್ಮವನ್ನು ‌ಪಾಲಿಸುತ್ತಿದ್ದ ಅವರು ತಮ್ಮ ಭಕ್ತರಿಗೆ ಪಶು ಪಕ್ಷಿಗಳನ್ನು ‌ಕೊಲ್ಲದಂತೆ ಉಪದೇಶ ‌ನೀಡಿದ್ದರು.

ಇತ್ತೀಚೆಗೆ ಯಾನಾಗಾಂದಿ ಪೀಠದ ಟ್ರಸ್ಟ್ ಕಮಿಟಿಯವರು ಅವರ ಆರೋಗ್ಯ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ಸೇಡಂನ ಶಿವಕುಮಾರ ನಿಡಗುಂದಾ ಎಂಬುವವರು ಹೈಕೋರ್ಟ್ ‌ಮೆಟ್ಟಿಲೇರಿದ್ದರು.‌

ಹೈಕೋರ್ಟ್ ‌ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ‌ಪೊಲೀಸ್ ವರಿಷ್ಠಾಧಿಕಾರಿ ಅವರು ಜಿಲ್ಲಾ‌ ಆರೋಗ್ಯಾಧಿಕಾರಿಗಳ ತಂಡದೊಂದಿಗೆ ತೆರಳಿ ‌ಆರೋಗ್ಯ ತಪಾಸಣೆ ‌ಮಾಡಿದ್ದರು.

ಮಾತೆ ಮಾಣಿಕೇಶ್ವರಿ ಅವರನ್ನು ನೋಡಿಕೊಳ್ಳಲು ‌ಮಹಿಳೆಯೊಬ್ಬರನ್ನು ನಿಯೋಜಿಸಲಾಗಿದೆ ಎಂದು ಯಾನಾಗುಂದಿ ಪೀಠದ ಆಡಳಿತಾಧಿಕಾರಿ ಹೈಕೋರ್ಟ್ ಗೆ‌ ಪ್ರಮಾಣಪತ್ರ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT