ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

#MeToo: ತಾರಕಕ್ಕೇರಿದ ರವಿ ಶ್ರೀವತ್ಸ, ಸಂಜನಾ ಜಟಾಪಟಿ!

Last Updated 24 ಅಕ್ಟೋಬರ್ 2018, 18:38 IST
ಅಕ್ಷರ ಗಾತ್ರ

ಬೆಂಗಳೂರು:‘ಗಂಡ ಹೆಂಡತಿ’ ಚಿತ್ರದಲ್ಲಿ ಒತ್ತಾಯಪೂರ್ವಕವಾಗಿ ಹೆಚ್ಚು ಚುಂಬನ ದೃಶ್ಯಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದರು ಎಂಬ ಸಂಜನಾ ಗರ್ಲಾನಿ ಅವರ ಆರೋಪಕ್ಕೆ ನಿರ್ದೇಶಕ ರವಿ ಶ್ರೀವತ್ಸ, ‘ಅವರು ಮಾಡುತ್ತಿರುವ ಮೀ ಟೂ ಆರೋಪ ಪ್ರಚಾರದ ತಂತ್ರ ಅಷ್ಟೇ’ ಎಂದು ತಿರುಗೇಟು ನೀಡಿದ್ದಾರೆ.

ಬುಧವಾರ ಬೆಳಿಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಗಂಡ ಹೆಂಡತಿಗೂ ಮುನ್ನ ಸಂಜನಾ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದರು. ಅವರಿಗೆ ಚಿತ್ರರಂಗದ ಆಳ ಅಗಲಗಳು ಗೊತ್ತಿರಲಿಲ್ಲವೇ?’ ಎಂದೂ ಕೇಳಿದ್ದಾರೆ.

‘ಸಂಜನಾ ಅವರಿಗೆ ಚಿತ್ರದ ಕಥೆ ಹೇಳಿದ್ದೆವು. ಹಿಂದಿಯ ‘ಮರ್ಡರ್’ ಸಿನಿಮಾ ಡಿವಿಡಿಯನ್ನೂ ಕೊಟ್ಟಿದ್ದೆವು. ಎಲ್ಲವನ್ನೂ ತಿಳಿದು ಒಪ್ಪಿಕೊಂಡೇ ಅವರು ಈ ಸಿನಿಮಾದಲ್ಲಿ ನಟಿಸಿದ್ದು. ಆಗ ಅವಕಾಶಕ್ಕಾಗಿ ಒಪ್ಪಿಕೊಂಡು ಈಗ ಸುಮ್ಮನೇ ಆರೋಪ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ರವಿ ಶ್ರೀವತ್ಸ ಫ್ಲಾಪ್ ನಿರ್ದೇಶಕ: ರವಿ ಶ್ರೀವತ್ಸ ಅವರ ಸ್ಪಷ್ಟನೆಗೆ ಪ್ರತಿಕ್ರಿಯಿಸಿರುವ ಸಂಜನಾ ಗರ್ಲಾನಿ, ‘ಕಳ್ಳತನ ಮಾಡಿದವರು ಎಂದಾದರೂ ತಾನು ಕಳ್ಳ ಎಂದು ಒಪ್ಪಿಕೊಳ್ಳುತ್ತಾರೆಯೇ?’ ಎಂದಿದ್ದಾರೆ.

‘ರವಿ ಶ್ರೀವತ್ಸ ಫ್ಲಾಪ್ ನಿರ್ದೇಶಕ. ಬರೀ ಸುಳ್ಳು ಹೇಳುತ್ತಿದ್ದಾರೆ. ನಾನು ಹಲವು ನಿರ್ದೇಶಕರ ಜತೆಗೆ ನಟಿಸಿದ್ದೇನೆ. ಎಲ್ಲರ ಮೇಲೂ ನಾನು ಆರೋಪ ಮಾಡಿಲ್ಲ. ಆದರೆ, ರವಿ ಶ್ರೀವತ್ಸ ಒಬ್ಬ ಸ್ಯಾಡಿಸ್ಟ್’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT