ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಿಣಿ ಮಿಣಿ’ಗೆ ಕೋರ್ಟ್‌ ತಡೆ

Last Updated 1 ಫೆಬ್ರುವರಿ 2020, 20:15 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಭಾವಚಿತ್ರ ಅಥವಾ ಹೆಸರಿನ ಜೊತೆ ‘ಮಿಣಿ ಮಿಣಿ’ ಶಬ್ದ ಬಳಸಿ ಯಾವುದೇ ಮಾಧ್ಯಮದ ಮುಖಾಂತರ ಅಪಹಾಸ್ಯ ಮಾಡದಂತೆ ನಗರದಸಿವಿಲ್‌ ಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ಈ ಕುರಿತ ಸಿವಿಲ್‌ ದಾವೆಯನ್ನು 20ನೇ ಕೋರ್ಟ್‌ನ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ಶನಿವಾರ ವಿಚಾರಣೆ ನಡೆಸಿದರು. ಕುಮಾರಸ್ವಾಮಿ ಪರ ವಕೀಲ ಎಸ್.ಇಸ್ಮಾಯಿಲ್‌ ಜಬೀವುಲ್ಲಾ ವಾದ ಮಂಡಿಸಿ, ‘ಅರ್ಜಿದಾರರ ಗೌರವಕ್ಕೆ ಧಕ್ಕೆ ತರಲಾಗುತ್ತಿದ್ದು ತಡೆ ನೀಡಬೇಕು’ ಕೋರಿದರು.

ಇದಕ್ಕೆ ನ್ಯಾಯಾಧೀಶರು, ‘ಪತ್ರಿಕೆ, ಜಾಲತಾಣ, ಟಿ.ವಿ.ಚಾನೆಲ್‌ ಅಥವಾ ಮತ್ಯಾವುದೇ ಮಾಧ್ಯಮದ ಮುಖಾಂತರ ಮಿಣಿ ಮಿಣಿ ಪದವನ್ನು ಕುಮಾರಸ್ವಾಮಿ ಚಿತ್ರ ಅಥವಾ ವಿಡಿಯೊ ತಳಕು ಹಾಕಿ ಪ್ರಕಟಿಸಬಾರದು’ ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT