ಲೈಂಗಿಕ ವೃತ್ತಿನಿರತರ ರಕ್ಷಣೆಗೆ ಕೋಶ: ಜಯಮಾಲಾ

7

ಲೈಂಗಿಕ ವೃತ್ತಿನಿರತರ ರಕ್ಷಣೆಗೆ ಕೋಶ: ಜಯಮಾಲಾ

Published:
Updated:

ಬೆಂಗಳೂರು: ‘ಲೈಂಗಿಕ ವೃತ್ತಿನಿರತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೋಶ ತೆರೆಯಲಾಗಿದೆ’ ಎಂದು ಸಚಿವೆ ಜಯಮಾಲಾ ಹೇಳಿದರು. 

ಸುಚಿತ್ರ ಫಿಲಂ ಸೊಸೈಟಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಾಹಿತ್ಯ ಸಂಜೆ ಹೊಸ ಓದು– ಮಹಿಳಾ ಆತ್ಮಕಥೆಗಳು: ಸಾಧ್ಯತೆ ಮತ್ತು ಸವಾಲು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೋಶ ತೆರೆಯುವ ಸಂಬಂಧ ಸಮನ್ವಯ ಸಾಧಿಸಲು ಸಾರಿಗೆ, ಕಾನೂನು, ಆರೋಗ್ಯ, ಗೃಹ ಇಲಾಖೆ ಸೇರಿ 12 ಇಲಾಖೆಗಳಿಗೆ ಪತ್ರ ಬರೆಯಲಾಗಿದೆ’ ಎಂದರು.

‘ವೇಶ್ಯಾವಾಟಿಕೆಗೆ ಭಾಗಶಃ ಅನುಮತಿ ದೊರೆತಿರುವ 11 ರಾಷ್ಟ್ರಗಳ ಪೈಕಿ ಭಾರತವೂ ಒಂದು. ಎಲ್ಲ ರಾಜ್ಯಗಳಲ್ಲಿರುವ ಲೈಂಗಿಕ ಕಾರ್ಯಕರ್ತೆಯರನ್ನು ಗುರುತಿಸಿ ಅವರಿಗೆ ವಸತಿ, ಉದ್ಯೋಗಾವಕಾಶಗಳನ್ನು ನೀಡಬೇಕೆಂದು 2011ರಲ್ಲಿ ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರಗಳಿಗೆ ಪತ್ರ ಬರೆಯಿತು. ಈ ಕುರಿತು ಕರ್ನಾಟಕ ಸರ್ಕಾರವೂ ಅಧ್ಯಯನ ನಡೆಸಿತು’ ಎಂದು ಹೇಳಿದರು.

**

ಅಂಕಿಅಂಶಗಳು

1 ಲಕ್ಷ - ನೋಂದಾಯಿತ ಲೈಂಗಿಕ ವೃತ್ತಿನಿರತರು

2.5 ಲಕ್ಷ - ಎಚ್‌ಐವಿ ಸೋಂಕಿತರು

46,664 - ದೇವದಾಸಿಯರು 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !