ಶನಿವಾರ, ಫೆಬ್ರವರಿ 29, 2020
19 °C
ನಾನು ದೇಶದ್ರೋಹಿಗಳನ್ನು ಉದ್ದೇಶಿಸಿ ಮಾತನಾಡಿದ್ದೇನೆ

ಕಿಡಿಗೇಡಿಗಳಿಂದ ನನ್ನಹೆಸರಿನಲ್ಲಿ ಪತ್ರ: ಶಾಸಕ ಜಿ.ಸೋಮಶೇಖರರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Somashekara Reddy

ಬಳ್ಳಾರಿ: ಸಿಎಎ, ಎನ್ಆರ್‌ಸಿ ಬೆಂಬಲಿಸಿ, ದೇಶದ್ರೋಹಿಗಳನ್ನು ಉದ್ದೇಶಿಸಿ ಮಾತನಾಡಿದ್ದೇನೆಯೆ ಹೊರತು ಯಾವುದೇ ಒಂದು ಸಮುದಾಯವನ್ನು ಉದ್ದೇಶಿಸಿ ಅಲ್ಲ. ಆದರೆ, ಕಿಡಿಗೇಡಿಗಳು ನನ್ನ ಹೆಸರು, ವಿಳಾಸವುಳ್ಳ ಸುಳ್ಳುಪತ್ರವನ್ನು ರಾಜ್ಯದಾದ್ಯಂತ ಹರಡುತ್ತಿದ್ದಾರೆ. ಅವರನ್ನು ದೇವರೇ ನೋಡಿಕೊಳ್ಳುತ್ತಾನೆ ಎಂದು ಶಾಸಕ ಜಿ.ಸೋಮಶೇಖರರೆಡ್ಡಿ ಸ್ಪಷ್ಟಪಡಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸುಳ್ಳುಪತ್ರವನ್ನು ಹರಡುತ್ತಿರುವವರ ಕುರಿತು ಈಗಾಗಲೇ ಐಜಿಪಿ ಆದೇಶದಂತೆ ರಾಯಚೂರು ಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಕಿಡಿಗೇಡಿಗಳು ರಾಜ್ಯದಾದ್ಯಂತ ಪೋಸ್ಟ್ ಮಾಡಿರುವ 50 ಪತ್ರಗಳು ವಿಳಾಸ ದೊರೆಯದೇ ನಮ್ಮ ಮನೆಗೆ ವಾಪಸ್ ಬರುತ್ತಿವೆ. ಇವು ಸುಳ್ಳುಪತ್ರಗಳು. ಈ ಕುರಿತು ಗೃಹಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚಿಸುತ್ತೇನೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು