ಸೋಮವಾರ, ಆಗಸ್ಟ್ 19, 2019
28 °C
ಲೋಕಾಯುಕ್ತ ಸಂಸ್ಥೆ ಕಡೆ ತಲೆ ಹಾಕದ ಜನ ಪ್ರತಿನಿಧಿಗಳು

ಆಸ್ತಿ ವಿವರ ಸಲ್ಲಿಸದ 115 ಶಾಸಕರು

Published:
Updated:

ಬೆಂಗಳೂರು: ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಈಶ್ವರ ಬಿ. ಖಂಡ್ರೆ ಸೇರಿದಂತೆ ವಿಧಾನಸಭೆಯ 77 ಹಾಗೂ ವಿಧಾನಪರಿಷತ್ತಿನ 38 ಸದಸ್ಯರು ಲೋಕಾಯುಕ್ತಕ್ಕೆ ತಮ್ಮ ಆಸ್ತಿ ವಿವರ ಸಲ್ಲಿಸಿಲ್ಲ.

ಸಚಿವರು ಮತ್ತು ಶಾಸಕರು ಜೂನ್‌ 30ರೊಳಗೆ ತಮ್ಮ ಆಸ್ತಿ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಜೂನ್‌ 30 ಭಾನುವಾರವಾದ್ದರಿಂದ ಜುಲೈ 1ರಂದೂ ಅನೇಕರು ಆಸ್ತಿ ವಿವರ ಸಲ್ಲಿಸಿದ್ದಾರೆ. ಆದರೆ, 115 ಶಾಸಕರು ಆಸ್ತಿ ವಿವರ ಸಲ್ಲಿಸಿಲ್ಲ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಎಚ್‌.ಎಂ. ವೆಂಕಟೇಶ್‌ ಅವರ ಆರ್‌ಟಿಐ ಅರ್ಜಿಗೆ ನೀಡಿರುವ ಉತ್ತರದಲ್ಲಿ ಲೋಕಾಯುಕ್ತ ರಿಜಿಸ್ಟ್ರಾರ್‌ ತಿಳಿಸಿದ್ದಾರೆ.

ಕಳೆದ ತಿಂಗಳು ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಎಚ್‌.ವಿಶ್ವನಾಥ್‌, ಎಸ್‌.ಟಿ.ಸೋಮಶೇಖರ್‌, ಮುನಿರತ್ನ, ನಾಗೇಶ್‌, ಗೋಪಾಲಯ್ಯ, ಆರ್. ಶಂಕರ್‌, ಪ್ರತಾಪಗೌಡ ಪಾಟೀಲ, ಶ್ರೀಮಂತ ಪಾಟೀಲ, ಮಹೇಶ್‌ ಕುಮಠಳ್ಳಿ ಅವರ ಹೆಸರೂ ಆಸ್ತಿ ವಿವರ ಸಲ್ಲಿಸದವರ ಪಟ್ಟಿಯಲ್ಲಿದೆ.  

ವಿವರ ಸಲ್ಲಿಸದ ವಿಧಾನಸಭೆ ಸದಸ್ಯರು: ಎಚ್‌.ಡಿ. ರೇವಣ್ಣ, ಸಾ.ರಾ. ಮಹೇಶ್‌,  ಅಂಜಲಿ ನಿಂಬಾಳ್ಕರ್‌, ಸಿದ್ದು ಸವದಿ, ಎಂ.ಸಿ. ಮನಗೂಳಿ, ಆರ್.ಎಸ್‌. ಲಮಾಣಿ, ಸೋಮಶೇಖರ ರೆಡ್ಡಿ, ಎಂ.‍ಪಿ. ರೂಪಕಲಾ, ರೇಣುಕಾಚಾರ್ಯ, ವೆಂಕಟರಮಣಪ್ಪ,  ಜಮೀರ್‌ ಅಹಮದ್‌ ಖಾನ್‌, ಡಿ.ಸಿ. ತಮ್ಮಣ್ಣ, ಎನ್‌. ಬಾಲಕೃಷ್ಣ, ಶಿವಲಿಂಗೇಗೌಡ, ಯು.ಟಿ. ಖಾದರ್‌, ಎನ್‌. ಮಹೇಶ್‌, ಪುಟ್ಟರಂಗಶೆಟ್ಟಿ. ಡಾ. ಅನ್ನದಾನಿ.

ಪರಿಷತ್‌ ಸದಸ್ಯರು: ಸಿ.ಎಂ. ಇಬ್ರಾಹಿಂ, ಕೆ.ಪಿ. ನಂಜುಂಡಿ, ಅಪ್ಪಾಜಿಗೌಡ, ನಜೀರ್‌ ಅಹಮದ್‌, ಸಿ.ಎಂ. ಲಿಂಗಪ್ಪ, ಐವನ್‌ ಡಿಸೋಜ, ಆ. ದೇವೇಗೌಡ, ಜಯಮಾಲ, ಆರ್‌.ಬಿ. ತಿಮ್ಮಾಪೂರ, ಎನ್‌.ರವಿ, ಆಯನೂರು ಮಂಜುನಾಥ್‌, ಅಲ್ಲಂ ವೀರಭದ್ರಪ್ಪ, ಕೊಂಡಯ್ಯ, ತೇಜಸ್ವಿನಿ ಗೌಡ, ರಘುನಾಥರಾವ್‌ ಮಲ್ಕಾಪೂರೆ, ಬಿ.ಎಂ. ಫಾರೂಕ್‌, ಪ್ರದೀಪ್‌ ಶೆಟ್ಟರ್‌, ಎನ್‌.ರುದ್ರೇಗೌಡ, ಕೆ.ಟಿ. ಶ್ರೀಕಂಟೇಗೌಡ, ಟಿ.ಎ. ಶರವಣ. 

Post Comments (+)