ಸಿನಿಮಾದವರನ್ನು ಭೇಟಿ ಮಾಡಲು ಮೋದಿಗೆ ಸಮಯ ಇದೆ, ಸಿದ್ದಗಂಗೆಗೆ ಬರಲು ಸಮಯವಿಲ್ಲ!

7

ಸಿನಿಮಾದವರನ್ನು ಭೇಟಿ ಮಾಡಲು ಮೋದಿಗೆ ಸಮಯ ಇದೆ, ಸಿದ್ದಗಂಗೆಗೆ ಬರಲು ಸಮಯವಿಲ್ಲ!

Published:
Updated:

ಬೆಂಗಳೂರು: ಪ್ರಧಾನಿ ಮೋದಿಯವರಿಗೆ ಸೆಲೆಬ್ರಿಟಿಗಳ ಮದುವೆಗೆ ಹೋಗಲು, ಸಿನಿಮಾ ನಟರನ್ನು  ಭೇಟಿ ಮಾಡಲು ಸಮಯವಿದೆ. ಆದರೆ ಬಡವರ ಒಳಿತಿಗಾಗಿ ದುಡಿದ ನಡೆದಾಡುವ ದೇವರ ಅಂತಿಮ ದರ್ಶನಕ್ಕೆ ಬರಲು ಸಮಯವಿಲ್ಲ. ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಿ ಎಂಬ ಒತ್ತಾಯವನ್ನೂ ಯಾರೂ ಪರಿಗಣಿಸಿಲ್ಲ ಎಂದು ಕರ್ನಾಟಕದ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಟ್ವೀಟ್ ಮಾಡಿದ್ದಾರೆ.

ಶ್ರೀಗಳ ಅಂತಿಮ ದರ್ಶನ ಪಡೆಯಲು ಪ್ರಧಾನಿಯವರು ಬರಲೇ ಬೇಕಿತ್ತು. ಇಂಥವರ ಅಂತಿಮ ದರ್ಶನಕ್ಕೆ  ಮೋದಿ ಬರುತ್ತಿದ್ದರೆ ಅದು ದೊಡ್ಡ ಸಂಗತಿಯೇ ಆಗುತ್ತಿತ್ತು ಎಂದು ಹೇಳಿದ ಸಚಿವರು, ರಾಹುಲ್ ಗಾಂಧಿ ಯಾಕೆ ಬಂದಿಲ್ಲ ಎಂಬ ಪ್ರಶ್ನೆಗೆ ಈ ರೀತಿ ಉತ್ತರಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸರ್ಕಾರದ ಯಾವುದೇ ಸ್ಥಾನದಲ್ಲಿಲ್ಲ,  ಒಂದು ವೇಳೆ ರಾಹುಲ್ ಗಾಂಧಿ ಪ್ರಧಾನಿಯಾಗಿರುತ್ತಿದ್ದರೆ ನೀವು ಟೀಕಿಸುವುದು ಸರಿ ಇದೆ ಎಂದು ಹೇಳಿರುವುದಾಗಿ ಎನ್‍ಡಿಟಿವಿ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 12

  Happy
 • 2

  Amused
 • 0

  Sad
 • 0

  Frustrated
 • 14

  Angry

Comments:

0 comments

Write the first review for this !