ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್‌ 5, 6ರಂದು ಚಂದ್ರಗ್ರಹಣ

Last Updated 3 ಜೂನ್ 2020, 12:06 IST
ಅಕ್ಷರ ಗಾತ್ರ

ಚಿತ್ರದುರ್ಗ: ಜೂನ್‌ 5 ಮತ್ತು 6ರ ಮಧ್ಯರಾತ್ರಿ ಚಂದ್ರಗ್ರಹಣ ಸಂಭವಿಸಲಿದ್ದು, ಆಕಾಶಕಾಯಗಳ ನಡುವೆ ಅದ್ಭುತ ವಿದ್ಯಮಾನ ನಡೆಯಲಿದೆ.

ಜೂನ್ 5ರಂದು ಹುಣ್ಣಿಮೆ ಇದ್ದು, ಅಂದು ರಾತ್ರಿ 11.15ಕ್ಕೆ ಚಂದ್ರಗ್ರಹಣ ಪ್ರಾರಂಭವಾಗುತ್ತದೆ. ಜೂನ್‌ 6ರ ನಸುಕಿನ 2.45ಕ್ಕೆ ಇದು ಕೊನೆಗೊಳ್ಳುತ್ತದೆ. ಗ್ರಹಣವು ದೇಶದ ಎಲ್ಲ ಭಾಗಗಳಲ್ಲಿ ಕಾಣಲಿದ್ದು, ಉತ್ತರ ಭಾರತದಲ್ಲಿ ಹೆಚ್ಚು ಪ್ರಮಾಣದಲ್ಲಿ ಗೋಚರವಾಗಲಿದೆ. ಗ್ರಹಣದ ಸಮಯದಲ್ಲಿ ಚಂದ್ರನ ಮೇಲೆ ಯಾವುದೇ ರೀತಿಯ ಕತ್ತಲು ಆವರಿಸುವುದಿಲ್ಲ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಎಸ್.ಟಿ. ಸ್ವಾಮಿ ತಿಳಿಸಿದ್ದಾರೆ.

ಗ್ರಹಣದಿಂದ ಚಂದ್ರನು ಸ್ವಲ್ಪ ಮಸುಕಾಗಿ ಕಾಣಿಸಿಕೊಳ್ಳುವನೇ ಹೊರತು, ಆಕಾರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಹಾಗಂತ ಇದು ಸಂಪೂರ್ಣ ಚಂದ್ರಗ್ರಹಣವಲ್ಲ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬರಲಿದ್ದು, ಈ ಮೂರೂ ಆಕಾಶಕಾಯಗಳು ಒಂದೇ ಸಮತಳದಲ್ಲಿರುವುದಿಲ್ಲ. ಸೂರ್ಯ ದೂರ ಸರಿಯುವುದರಿಂದ ಚಂದ್ರನ ಮೇಲೆ ಭೂಮಿಯ ನೆರಳು ಉಂಟಾಗುತ್ತದೆ ಎಂದು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

ಚಂದ್ರಗ್ರಹಣ ಗೋಚರಿಸುವುದರಿಂದ ಜನಜೀವನದ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಮೂಢನಂಬಿಕೆಯಿಂದ ದೂರವಾಗಿ ಗ್ರಹಣದ ಹಿಂದಿನ ವೈಜ್ಞಾನಿಕ ಕಾರಣಗಳನ್ನು ತಿಳಿದುಕೊಳ್ಳುವುದೇ ಎಲ್ಲರ ಆಶಯ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT