ಸೋಮವಾರ, ಆಗಸ್ಟ್ 19, 2019
28 °C

ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ

Published:
Updated:

ಬಳ್ಳಾರಿ: ನಗರದ ಮೇದಾರ ಕೇತಯ್ಯ ನಗರದ ನಿವಾಸಿ ಲಕ್ಷ್ಮಿ (25) ತಮ್ಮ ಇಬ್ಬರು ಮಕ್ಕಳಾದ ಉದಯ್‌ (3) ಮತ್ತು ಭೂಮಿಕಾ (1.5 ವರ್ಷ) ಅವರನ್ನು ಗುರುವಾರ ಮಧ್ಯಾಹ್ನ ತಮ್ಮ ಮನೆಯ ನೀರಿನ ಡ್ರಮ್‌ನಲ್ಲಿ ಮುಳುಗಿಸಿ ಕೊಂದು, ತಾವೂ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡರು.

ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಕಟ್ಟಡ ನಿರ್ಮಾಣ ಮೇಸ್ತ್ರಿ ಪತಿ ವೀರೇಶ್‌ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಕೌಲ್‌ಬಜಾರ್‌ ಠಾಣೆಯ ಪೊಲೀಸರು ತಿಳಿಸಿದರು.

Post Comments (+)