ಶುಕ್ರವಾರ, ಜೂಲೈ 3, 2020
21 °C

ಮದ್ಯದ ಅಮಲಿನಲ್ಲಿ ಮತ್ತೊಂದು ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮದ್ಯದ ಅಮಲಿನಲ್ಲಿ ಸ್ನೇಹಿತರ ನಡುವೆಯೇ ಗಲಾಟೆ ಆಗಿ, ಶ್ರೀನಿವಾಸ್ (45) ಎಂಬುವರ ಕೊಲೆ ನಡೆದಿದೆ.

ಸೋಮವಾರ ಬೆಳಿಗ್ಗೆ ವೈನ್ ಮಳಿಗೆ ತೆರೆದ ಕೂಡಲೇ ಸರದಿಯಲ್ಲಿ ನಿಂತು ಮದ್ಯ ಖರೀದಿಸಿದ್ದ ಸ್ನೇಹಿತರು, ದೊಮ್ಮಲೂರಿನ ಬಳಿ ಕೊಠಡಿಗೆ ಹೋಗಿ ಪಾರ್ಟಿ ಮಾಡಿದ್ದರು.  ಕೊಲೆಯಾದ ಶ್ರೀನಿವಾಸ ಹಾಗೂ ಅವರ ಸ್ನೇಹಿತ ಸಂತೋಷ್ ಮದ್ಯ ಕುಡಿದಿದ್ದರು. ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿತ್ತು.

ಇದೇ ವೇಳೆಯೇ ಶ್ರೀವಾಸ ತಲೆಗೆ ದೊಣ್ಣೆಯಿಂದ  ಹೊಡೆದಿದ್ದ ಆರೋಪಿ ಸಂತೋಷ್ .ತೀವ್ರ ರಕ್ತಸ್ರಾವದಿಂದ ಶ್ರೀನಿವಾಸ ಮೃತಪಟ್ಟಿದ್ದಾರೆ.

ಜೀವನ್‌ಬಿಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು