ಗುರುವಾರ , ಏಪ್ರಿಲ್ 9, 2020
19 °C

ಚೌಡಯ್ಯ ಭವನದಲ್ಲಿ ಸಂಗೀತ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೌಡಯ್ಯ ಸ್ಮಾರಕ ಭವನದ ಸ್ಥಾಪಕರಾದ ಕೆ.ಕೆ.ಮೂರ್ತಿ ಅವರ ಸ್ಮರಣಾರ್ಥವಾಗಿ ಅಕ್ಟೋಬರ್‌ 31ರಿಂದ ನವೆಂಬರ್‌ 3ರವರೆಗೆ ಸಂಗೀತ ಸಮ್ಮೇಳನ ನಡೆಯಲಿದೆ. ಚೌಡಯ್ಯ ಭವನದ ಅಕಾಡೆಮಿ ಆಫ್‌ ಮ್ಯೂಸಿಕ್‌ ಆಶ್ರಯದಲ್ಲಿ ನಡೆಯುವ ಈ ಸಮ್ಮೇಳನದಲ್ಲಿ ದಿಗ್ಗಜರಿಂದ ಕಛೇರಿಗಳು, ವಿಚಾರಗೋಷ್ಠಿಗಳು ಮತ್ತು ಮೂವರು ಸಂಗೀತ ಸಾಧಕರಿಗೆ ಸನ್ಮಾನ ಇರುತ್ತದೆ. ಸ್ಥಳ– ಚೌಡಯ್ಯ ಸ್ಮಾರಕ ಭವನ, ವೈಯ್ಯಾಲಿಕಾವಲ್‌.

ಅಕ್ಟೋಬರ್‌ 31ರ ಬುಧವಾರ: ಸಂಜೆ 4.30ಕ್ಕೆ ‘ಭವನದ ಆವರಣದಲ್ಲಿ ಕಛೇರಿ– ವಿದುಲಾ ವೇಣುಗೋಪಾಲ್‌ ಮತ್ತು ತಂಡದಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ.‌ 5.30ಕ್ಕೆ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ– ಕೀರ್ತಿ ಕುಮಾರ್‌ ಬಡಶೇಷಿ. ಜಗದೀಶ್‌ ಕುರ್ತಿಕೋಟಿ –ತಬಲಾ, ಗುರುಪ್ರಸಾದ್ ಹೆಗ್ಡೆ–ಹಾರ್ಮೋನಿಯಂ.

ಸಂಜೆ 6.45ಕ್ಕೆ ಓಂಕಾರ್‌ ಹವಾಲ್ದಾರ್‌ (ಹಿಂದೂಸ್ತಾನಿ ಗಾಯಕ), ವಂಶಿಧರ ವಿ. (ಕರ್ನಾಟಕ ಶೈಲಿಯ ಕೊಳಲುವಾದಕ), ಸಪ್ತಕ ಸಂಸ್ಥೆ ಮತ್ತು ಶ್ರೀ ಶೇಷಾದ್ರಿಪುರ ರಾಮಸೇವಾ ಸಮಿತಿ ಹಾಗೂ ವೀಣಾ ವಿದುಷಿ ಸುಮಾ ಸುಧೀಂದ್ರ ಅವರಿಗೆ ಸನ್ಮಾನ. ಸುಪ್ರೀಂ ಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್‌ ವಿ.ಪಾಟೀಲ್‌ ಅವರಿಂದ. ಅತಿಥಿ– ಸಂಸದ ಮಲ್ಲಿಕಾರ್ಜುನ ಖರ್ಗೆ, ದೂರದರ್ಶನ ಕೇಂದ್ರ (ದಕ್ಷಿಣ ವಲಯ) ಜಂಟಿ ಮಹಾನಿರ್ದೇಶಕ ರಾಜ್‌ಕುಮಾರ್‌ ಉಪಾಧ್ಯಾಯ.

ರಾತ್ರಿ 7.45ಕ್ಕೆ ಪಂಡಿತ್‌ ವೆಂಕಟೇಶ್‌  ಕುಮಾರ್‌ ಅವರಿಂದ ಹಿಂದೂಸ್ತಾನಿ ಗಾಯನ. ರವೀಂದ್ರ ಯಾವಗಲ್– ತಬಲಾ, ರವೀಂದ್ರ ಕಾಟೋಟಿ– ಹಾರ್ಮೋನಿಯಂ, ವೆಂಕಟೇಶ್‌ ಪುರೋಹಿತ್– ತಾಳ.

ನವೆಂಬರ್ 1ರಂದು: ಬೆಳಿಗ್ಗೆ 11ಕ್ಕೆ ಬೆಳಗಿನ ಅಧಿವೇಶನದಲ್ಲಿ ‘ಹಿಂದೂಸ್ತಾನಿ ಸಂಗೀತದಲ್ಲಿ ಅಪ್ರಚಲಿತ ರಾಗಗಳು’ ಕುರಿತು ಡಾ.ಮಿಲಿಂದ್‌ ಮಾಲ್ಷೆ ಅವರಿಂದ ಪ್ರಾತ್ಯಕ್ಷಿಕೆ. ಸಂಜೆ 4.45ಕ್ಕೆ ಭವನದ ಆವರಣದಲ್ಲಿ ಕಛೇರಿ– ಭವಾನಿ ಎಂ, ಕೀರ್ತನಾ ನರಸಿಂಹನ್‌ ಮತ್ತು ತಂಡದಿಂದ ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆ. ಸಂಜೆ 6ಕ್ಕೆ ದೀಪ್ತಿ ನವರತ್ನ ಅವರಿಂದ ಕರ್ನಾಟಕ ಶಾಸ್ತ್ರೀಯ ಗಾಯನ. ಹರ್ಷ ಸಾಮಗ–ಮೃದಂಗ, ಮಹೇಶ್‌ ಸ್ವಾಮಿ – ಕೊಳಲು.

ರಾತ್ರಿ 7.30ಕ್ಕೆ ಮೈಸೂರು ನಾಗರಾಜ್‌– ಮೈಸೂರು ಮಂಜುನಾಥ್‌– ಮಾಸ್ಟರ್‌ ಸುಮಂತ್‌ ಅವರಿಂದ ವಯೊಲಿನ್‌ ಸಂಯುಕ್ತ ಕಛೇರಿ. ಬೆಂಗಳೂರು ವಿ.ಪ್ರವೀಣ್‌–ಮೃದಂಗ, ರಾಮದಾಸ್‌ ಪುಳ್ಸುಳೆ–ತಬಲಾ.

ನವೆಂಬರ್‌ 2ರಂದು: ಬೆಳಿಗ್ಗೆ 11ಕ್ಕೆ ಬೆಳಗಿನ ಅಧಿವೇಶನದಲ್ಲಿ ‘ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವೀಣೆ–ಅಂದು ಇಂದು, ನಾಳೆ’ ಕುರಿತು ಸುಮಾ ಸುಧೀಂದ್ರ ಅವರಿಂದ ಪ್ರಾತ್ಯಕ್ಷಿಕೆ. ಸಂಜೆ 4.45ಕ್ಕೆ ಆವರಣದಲ್ಲಿ ಕಛೇರಿ– ಶರತ್‌ ಗೌಡ ಮತ್ತು ತಂಡದಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ. ಸಂಜೆ 6ಕ್ಕೆ ಭುವನೇಶ್‌ ಕೋಮ್‌ಕಲಿ ಕಛೇರಿ. ವ್ಯಾಸಮೂ್ತಿ ಕಟ್ಟಿ– ಹಾರ್ಮೋನಿಯಂ, ಶ್ರೀಧರ ಮಂಡ್ರೆ– ತಬಲಾ. ರಾತ್ರಿ 7.30ಕ್ಕೆ ಪಂಡಿತ್‌ ವಿಶ್ವಮೋಹನ ಭಟ್‌ (ಮೋಹನ ವೀಣೆ) ಮತ್ತು ಪಂಡಿತ್‌ ಪರಮೇಶ್ವರ ಹೆಗಡೆ (ಹಿಂದೂಸ್ತಾನಿ ಶಾಸ್ತ್ರೀಯ ಗಾಯನ) ಜುಗಲ್‌ಬಂದಿ. ಗುರುಮೂರ್ತಿ ವೈದ್ಯ– ತಬಲಾ, ಗುರುಪ್ರಸಾದ್‌ ಹೆಗ್ಡೆ– ಹಾರ್ಮೋನಿಯಂ.

ನವೆಂಬರ್‌ 3ರಂದು: ಬೆಳಿಗ್ಗೆ 11ಕ್ಕೆ ಬೆಳಗಿನ ಅಧಿವೇಶನದಲ್ಲಿ ದೀಪ್ತಿ ನವರತ್ನ ಅವರಿಂದ ‘ನಾಟ್ಯಶಾಸ್ತ್ರದಿಂದ ನರವಿಜ್ಞಾನದವರೆಗೆ ರಾಗದ ಯಾನ’ ಕುರಿತು ಪ್ರಾತ್ಯಕ್ಷಿಕೆ. ಸಂಜೆ 4.45ಕ್ಕೆ ಆವರಣದಲ್ಲಿ ಕಛೇರಿ– ಅಭಿಷೇಕ್‌ ಎನ್.ಎಸ್. ಮತ್ತು ತಂಡದಿಂದ ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆ. ಸಂಜೆ 6ಕ್ಕೆ ಲಕ್ಷ್ಮೀನಾರಾಯಣ ಗ್ಲೋಬಲ್‌ ಸೆಂಟರ್‌ ಆಫ್‌ ಎಕ್ಸಲೆನ್ಸ್‌ನಲ್ಲಿ ವೈಕಂ ಜಯಚಂದ್ರನ್‌ (ಗಾಯನ), ಟಿ.ಮಹಾದೇವನ್‌ (ವಯೊಲಿನ್‌), ಸಾಜೀವ್‌ ಕೆ. (ಮೃದಂಗ) ಸಂಯುಕ್ತ ಕಛೇರಿ.

ರಾತ್ರಿ 7.30ಕ್ಕೆ ಡಾ.ಎಲ್.ಸುಬ್ರಮಣ್ಯಂ ಅವರಿಂದ ವಯೊಲಿನ್‌ ಕಛೇರಿ. ರಮಣಮೂರ್ತಿ ವಿ.ವಿ.– ಮೃದಂಗ, ತನ್ಮಯ್‌ ಬೋಸ್‌– ತಬಲಾ, ರಾಧಾಕೃಷ್ಣನ್‌ ಎನ್.–ಘಟ, ಸತ್ಯಸಾಯಿ ಜಿ.–ಮೋರ್ಚಿಂಗ್‌.

ನಾಲ್ಕೂ ದಿನದ ಕಾರ್ಯಕ್ರಮಗಳಿಗೆ ಪ್ರವೇಶ ಉಚಿತ. ಆಸಕ್ತರು ನಿಗದಿತ ವೇಳೆಗಿಂತ 15 ನಿಮಿಷ ಮುಂಚಿತವಾಗಿ ಆಸೀನರಾಗಬೇಕು ಎಂದು ಆಯೋಜಕರು ತಿಳಿಸಿದ್ದಾರೆ. 


ಮೈಸೂರು ಎಂ.ನಾಗರಾಜ್‌–ಎಂ. ಮಂಜುನಾಥ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)