ಬುಧವಾರ, ಸೆಪ್ಟೆಂಬರ್ 18, 2019
28 °C

ದಸರೆ ಸಮಯದಲ್ಲೇ ಮೈಸೂರು ಜಿಲ್ಲಾಧಿಕಾರಿ ವರ್ಗಾವಣೆ

Published:
Updated:

ಮೈಸೂರು: ಜಗತ್ಪ್ರಸಿದ್ಧ ದಸರೆಗೆ ಸಿದ್ಧತೆ ನಡೆಯುತ್ತಿರುವ ಸಂದರ್ಭದಲ್ಲಿ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಸಚಿವರಿಲ್ಲದೇ ದಸರಾ ಸಿದ್ಧತೆಗೆ ಈಗಾಗಲೇ ಹಿನ್ನಡೆ ಉಂಟಾಗಿದೆ. ದಸರಾ ವಿಶೇಷಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಯನ್ನು ಈ ಹಂತದಲ್ಲಿ ವರ್ಗಾವಣೆ ಮಾಡಿರುವುದು ಅಚ್ಚರಿ ಉಂಟು ಮಾಡಿದೆ.

ದಸರೆ ಉದ್ಘಾಟನೆಗೆ ಕೇವಲ 35 ದಿನಗಳು ಬಾಕಿ ಇದ್ದು ಹಲವಾರು ಕಾಮಗಾರಿಗಳು ನಡೆಯಬೇಕಿದೆ, ಟೆಂಡರ್ ಕರೆಯಬೇಕಿದೆ, ಉಪಸಮಿತಿ ರಚಿಸಿ ಅಧಿಕಾರಿಗಳ ಸಭೆ ನಡೆಸಬೇಕಿದೆ. ಹೀಗಾಗಿ, ನೂತನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮುಂದೆ ದೊಡ್ಡ ಸವಾಲು ಇದೆ.

Post Comments (+)