ಸಾಲಿಗ್ರಾಮ (ಮೈಸೂರು): ಈಚೆಗೆ ಮೃತಪಟ್ಟ ತಮ್ಮ ಪ್ರೀತಿಯ ಕೋತಿ ‘ಚಿಂಟು’ ನೆನಪಿನಲ್ಲಿ, ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಅವರು ದೇಗುಲವೊಂದನ್ನು ನಿರ್ಮಿಸುತ್ತಿದ್ದಾರೆ.

ಮೈಸೂರಿನ ಹೊರವಲಯದಲ್ಲಿರುವ ತೋಟದಲ್ಲಿ, ಕೋತಿಯ ಅಂತ್ಯಕ್ರಿಯೆ ಮಾಡಿದ ಸ್ಥಳದಲ್ಲೇ ಸುಮಾರು ₹ 20 ಲಕ್ಷ ವೆಚ್ಚದಲ್ಲಿ ಈ ದೇವಾಲಯ ತಲೆ ಎತ್ತುತ್ತಿದೆ. ಕಾಮಗಾರಿ ಬಹುತೇಕ ಮುಗಿದಿದ್ದು, ತಿಂಗಳಲ್ಲಿ ದೇವಾಲಯ ಲೋಕಾರ್ಪಣೆಯಾಗಲಿದೆ.

‘ನನ್ನ ಕುಟುಂಬದ ಸದಸ್ಯರಲ್ಲಿ ‘ಚಿಂಟು’ ಒಬ್ಬನಾಗಿದ್ದ. ಈತನ ಅಗಲಿಕೆ ಅತೀವ ದುಃಖ ಉಂಟು ಮಾಡಿದೆ. ಅದರ ನೆನಪಿಗಾಗಿ ಈ ಕಾರ್ಯದಲ್ಲಿ ತೊಡಗಿದ್ದೇನೆ’ ಎಂದು ಸಾ.ರಾ.ಮಹೇಶ್ ಭಾವುಕರಾಗಿ ನುಡಿದರು.

ಜ.1ರಂದು ತೋಟದಲ್ಲಿ ವಿದ್ಯುತ್ ತಂತಿ ತಗುಲಿ ಕೋತಿ ಮೃತಪಟ್ಟಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಅವರು ವಿದೇಶ ಪ್ರವಾಸ ಮೊಟಕುಗೊಳಿಸಿ, ಮೈಸೂರಿಗೆ ಬಂದು ಅಂತ್ಯಕ್ರಿಯೆ ನೆರವೇರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.