ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಹರಡುವ ಭೀತಿ: ಮನೆಯಲ್ಲೇ ನಮಾಜ್‌ ಮಾಡಲು ಸರ್ಕಾರದಿಂದ ಸೂಚನೆ

Last Updated 23 ಮಾರ್ಚ್ 2020, 11:29 IST
ಅಕ್ಷರ ಗಾತ್ರ

ಬೆಂಗಳೂರು:ಕೊರೊನಾ ವೈರಸ್ಹರಡುವುದನ್ನು ತಪ್ಪಿಸಲು ಈಗಾಗಲೇ ಲಾಕ್‌ಡೌನ್ ಘೋಷಿಸಲಾಗಿರುವ 9 ಜಿಲ್ಲೆಗಳಲ್ಲಿರುವ ಮುಸ್ಲಿಂ ಸಮುದಾಯದವರು ಮನೆಯಲ್ಲೇ ನಮಾಜ್ ಮಾಡುವಂತೆ ಸರ್ಕಾರ ಕೋರಿದೆ.

ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಕಾರ್ಯದರ್ಶಿ ಎ.ಬಿ. ಇಬ್ರಾಹಿಂ, ಮಾರ್ಚ್‌ 31ರವರೆಗೆ ಈ ಜಿಲ್ಲೆಗಳ ಮುಸ್ಲಿಂ ಸಮುದಾಯದವರು ದಿನದ ಎಲ್ಲ ಪ್ರಾರ್ಥನೆ ಹಾಗೂ ಶುಕ್ರವಾರದ ವಿಶೇಷ ಪ್ರಾರ್ಥನೆಯನ್ನು ಮನೆಯಲ್ಲೇ ಮಾಡಬೇಕು ಎಂದು ವಿನಂತಿಸಿದ್ದಾರೆ.

ಒಂದು ವೇಳೆ ಮಸೀದಿಗೆ ಬಂದು ಪ್ರಾರ್ಥನೆ ಮಾಡಿದರೆ, ಕಿಕ್ಕಿರಿದು ಸೇರಿ ಪ್ರಾರ್ಥನೆ ಮಾಡುವಾಗ ಭುಜಕ್ಕೆ ಭುಜ ತಾಕುವಾಗ, ಕೈ ಕುಲುಕುವಾಗ, ಒಂದೆಡೆ ಹೆಚ್ಚಿನ ಜನ ಸೇರುವಾಗ ಕೊರೊನಾ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕುರಿತು ಮಸೀದಿ ಮುಖ್ಯಸ್ಥರು, ವಕ್ಫ್‌ ಬೋರ್ಡ್‌ ಅಧ್ಯಕ್ಷರು ಮತ್ತು ಸದಸ್ಯರ ಜತೆ ಸಮಾಲೋಚನೆ ನಡೆಸಿದಾಗ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ. ಹೀಗಾಗಿ, ಎಲ್ಲರೂ ಮನೆಯಿಂದಲೇ ನಮಾಜ್‌ ಮಾಡುವಂತೆ ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT