ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಟ್‌: 84 ಮಂದಿ ಹಾಜರು

Last Updated 20 ಮೇ 2019, 17:29 IST
ಅಕ್ಷರ ಗಾತ್ರ

ಬೆಂಗಳೂರು: ಹಂಪಿ ಎಕ್ಸ್‌ಪ್ರೆಸ್‌ ರೈಲು ವಿಳಂಬದಿಂದಾಗಿ ಇದೇ 5ರಂದು ‘ನೀಟ್‌’ ಪರೀಕ್ಷೆ ವಂಚಿತರಾದವರಿಗಾಗಿ ಸೋಮವಾರ ನಡೆದ ಮರು ಪರೀಕ್ಷೆಗೆ 84 ಮಂದಿ ಹಾಜರಾದರು.

80 ಮಂದಿ ಹಳೆಯ ಪ್ರವೇಶಪತ್ರ ಮತ್ತು ರೈಲು ಟಿಕೆಟ್‌ ನೀಡಿದ್ದರೆ, ಇತರ ನಾಲ್ಕು ಮಂದಿ ಮೇ 5ರ ಪರೀಕ್ಷೆ ಬರೆ
ಯಲು ತಮಗೆ ಅಸಾಧ್ಯವಾದ ಬಗ್ಗೆ ಮುಚ್ಚಳಿಕೆ ಬರದುಕೊಟ್ಟಿದ್ದರು. ಒಂದುವೇಳೆ ಅವರು ನೀಡಿದ ಕಾರಣ ಸುಳ್ಳು ಎಂದಾದರೆ ಅವರು ಬರೆದ ಪರೀಕ್ಷೆಯನ್ನು ಅನರ್ಹಗೊಳಿಸಲಾಗುತ್ತದೆ.

ಕಳೆದ ಬಾರಿ ರೈಲು ವಿಳಂಬವಾಗಿದ್ದರಿಂದ ಪಾಠ ಕಲಿತ ಬಹುತೇಕ ಮಂದಿ ಭಾನುವಾರವೇ ನಗರಕ್ಕೆ ಬಂದು ತಮ್ಮ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದರು. ಮರು ಪರೀಕ್ಷೆ ಕಠಿಣವಿರಬಹುದು ಎಂದು ಅವರು ನಿರೀಕ್ಷಿಸಿದ್ದರೂ, ಪರೀಕ್ಷೆ ಸುಲಭವಾಗಿಯೇ ಇತ್ತು ಎಂಬುದನ್ನು ಕೆಲವು ಅಭ್ಯರ್ಥಿಗಳು ತಿಳಿಸಿದರು. ಇದೇ5ರಂದು ನಡೆದಿದ್ದ ‘ನೀಟ್‌’ ಪರೀಕ್ಷೆ ಬರೆಯಲು ಉತ್ತರ ಕರ್ನಾಟಕದ 500ಕ್ಕೂ ಅಧಿಕ ಮಂದಿ ಹಂಪಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬರುತ್ತಿದ್ದರು. ರೈಲು ವಿಳಂಬವಾಗಿದ್ದರಿಂದ ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮರು ಪರೀಕ್ಷೆಗೆ ಒತ್ತಡ ಹೆಚ್ಚಿ, ಸಮ್ಮತಿ ಸೂಚಿಸಲಾಗಿತ್ತು.ಆದರೆ ಅದಕ್ಕೆ110 ಮಂದಿ ಮಾತ್ರ ಹೆಸರು ನೋಂದಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT