ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಬಾಗಿಲು| ಸೀಬೆ ಹಣ್ಣು ಕೇಳುವವರೇ ಇಲ್ಲ

Last Updated 14 ಮೇ 2020, 19:30 IST
ಅಕ್ಷರ ಗಾತ್ರ

ಮುಳಬಾಗಿಲು: ಆರು ಎಕರೆ ಭೂಮಿಯಲ್ಲಿ ಸೀಬೆ, ನಿಂಬೆ, ದಾಳಿಂಬೆ, ನೆಲ್ಲಿಕಾಯಿ ಬೆಳೆದಿರುವ ಬೆಳ್ಳಂಬಳ್ಳಿ ಗ್ರಾಮದ ನಿವೃತ್ತ ಯೋಧ ಬಿ.ಎಂ.ವೆಂಕಟೇಶ್ ಸೂಕ್ತ ಮಾರುಕಟ್ಟೆ ದೊರಕದೆ ಪರದಾಡುತ್ತಿದ್ದಾರೆ.

23 ವರ್ಷ ಸೇವೆಯ ಬಳಿಕ ಸೇನೆಯಿಂದ ನಿವೃತ್ತಿಯಾಗಿದ್ದು ತಾಲ್ಲೂಕಿನ ಎಚ್.ಗೊಲ್ಲಹಳ್ಳಿ ಯಲ್ಲಿ ವೈಜ್ಞಾನಿಕ, ಪ್ರಯೋಗಾತ್ಮಕವಾಗಿ ಕೃಷಿಗೆ ತೊಡಗಿಸಿ ಕೊಂಡಿದ್ದಾರೆ.

ಸದ್ಯ, ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ, ಹಾಕಿದ್ದ ಬಂಡವಾಳವೂ ಕೈಸೇರದ ಆತಂಕದಲ್ಲಿದ್ದಾರೆ. ಲಾಕ್‌ಡೌನ್‌ ಆರಂಭವಾದಾಗ ಸೀಬೆಕಾಯಿಗೆ ಉತ್ತಮ ಮಾರುಕಟ್ಟೆ ನಿರೀಕ್ಷೆಯಿಂದ ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್ ರೂಮ್‌ ಸಂಪರ್ಕಿಸಿದರು. ಅಲ್ಲಿ ಹಾಪ್‌ಕಾಮ್ಸ್ ಅಧಿಕಾರಿಗಳನ್ನು ಸಂಪರ್ಕಿಸಲು ಸೂಚಿಸಲಾಯಿತು. ಅಲ್ಲಿಗೆ ಹೋದರೆ ಇಂಡೆಂಟ್ ಇಲ್ಲದೆ ಫಸಲು ಖರೀದಿಸುವುದಿಲ್ಲ ಎಂಬ ಉತ್ತರ ಬಂತು. ಆತ್ಮೀಯರ ಸಲಹೆ ಆಧರಿಸಿ ಮಾಲೂರು ಸೂಪರ್ ಮಾರುಕಟ್ಟೆ ಸಂಪರ್ಕಿಸಿದರು. ಅಲ್ಲಿ ಮೊದಲು ಹಿಂದೇಟು ಹಾಕಿದರು. ನಂತರ ದೂರದಿಂದ ಬಂದ ಕಾರಣಕ್ಕೆ 50 ಕೆ.ಜಿ ಮಾತ್ರ ಕೊಂಡರು. ಉಳಿದ ಹಣ್ಣನ್ನು ಕೆ.ಜಿ.ಗೆ ₹20ರಂತೆ ಮುಳಬಾಗಿಲು ನಗರದಲ್ಲಿ ಮಾರಾಟ ಮಾಡಿದರು.

‘ನಿರೀಕ್ಷೆಯಂತೆ ಎರಡು ಹಂಗಾಮಿನಲ್ಲಿ ₹18 ಲಕ್ಷ ಬರಬೇಕಿತ್ತು. ಈಗ ₹ 3 ಲಕ್ಷವೂ ಬಂದಿಲ್ಲ. ಇನ್ನು ಫಸಲಿದೆ. ಆದರೆ ಮಾರುಕಟ್ಟೆ ಇಲ್ಲ‘ ಎನ್ನುತ್ತಾರೆ ವೆಂಕಟೇಶ್‌.

ಲಾಕ್‌ಡೌನ್‌ನಿಂದ ಅಲ್ಪಮಟ್ಟಿನ ಸಡಿಲಿಕೆ ನೀಡಿದ್ದರೂ ನೆರೆರಾಜ್ಯಗಳಿಗೆ ಫಸಲು ಸಾಗಿಸಲು ಅವಕಾಶ ಇಲ್ಲ. ಜತೆಗೆ ಮಾರುಕಟ್ಟೆಯಲ್ಲಿ ಕೊಳ್ಳುವವರ ಸಂಖ್ಯೆಯೂ ಕಡಿಮೆಯಾಗಿದೆ. ಹಣ್ಣುಗಳಿಗೂ ಬೇಡಿಕೆಯೂ ಇಲ್ಲದಂತಾಗಿದೆ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT