ಸೋಮವಾರ, ಜೂಲೈ 6, 2020
23 °C

Covid-19 Karnataka Update | ರಾಜ್ಯದಲ್ಲಿ ಒಂದೇ ದಿನ 135 ಹೊಸ ಪ್ರಕರಣ, 3 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೇ 26ರ ಸಂಜೆ 5ಗಂಟೆಯಿಂದ ಮೇ 27ರ ಸಂಜೆ 5 ಗಂಟೆವರೆಗೆ ಹೊಸ 135 ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇದರೊಂದಿಗೆ ರಾಜ್ಯದಲ್ಲಿ 2,418 ಮಂದಿಗೆ ಸೋಂಕು ತಗುಲಿದ್ದು, 47 ಮಂದಿ ಮೃತಪಟ್ಟಿದ್ದಾರೆ. 

ಇವರೆಗೆ 781 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1,588 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ.

ಇಂದು ಬೆಂಗಳೂರು ನಗರದಲ್ಲಿ 6, ಮಂಡ್ಯ 1, ಕಲಬುರಗಿ 28, ಯಾದಗಿರಿ 16, ಬೆಳಗಾವಿ 4, ದಾವಣಗೆರೆ 6, ಹಾಸನ 15, ಚಿಕ್ಕಬಳ್ಳಾಪುರ 4, ಬೀದರ್ 13, ಉಡುಪಿ 9, ವಿಜಯಪುರ 3, ಉತ್ತರ ಕನ್ನಡ 6, ದಕ್ಷಿಣ ಕನ್ನಡ 11, ರಾಯಚೂರು 5, ಬಳ್ಳಾರಿ 1, ಕೋಲಾರ 1, ತುಮಕೂರು 1, ಬೆಂಗಳೂರು ಗ್ರಾಮಾಂತರ 2 ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ 3 ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು