ಪೇಜಾವರ ಶ್ರೀಗಳನ್ನು ಕರೆದೊಯ್ದ ಮುಸ್ಲಿಂ ಚಾಲಕ

ಉಡುಪಿ: ಪೇಜಾವರ ಮಠದ ವಿಶ್ವೇಶ ತೀರ್ಥರು ಮುಂಬೈನ ಬೊರಿವಿಲಿ ರೈಲು ನಿಲ್ದಾಣದಿಂದ ಡೊಂಬಿವಲಿ ಪ್ರದೇಶಕ್ಕೆ ಮುಸ್ಲಿಂ ವ್ಯಕ್ತಿಯ ಕಾರಿನಲ್ಲಿ ತೆರಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ.
‘ಬರೋಡಾದಿಂದ ಬೊರಿವಿಲಿ ರೈಲು ನಿಲ್ದಾಣಕ್ಕೆ ಬಂದಿಳಿದ ಪೇಜಾವರ ಶ್ರೀಗಳನ್ನು ಶರ್ಫುದ್ದೀನ್ ಮಲೀಕ್ ಎಂಬುವರು ಟ್ಯಾಕ್ಸಿಯಲ್ಲಿ ಡೊಂಬಿವಿಲಿಗೆ ಕರೆದೊಯ್ದು, ಶ್ರೀಗಳ ಕೈಕುಲುಕಿ ಬೀಳ್ಕೊಟ್ಟಿದ್ದು ಬಹಳ ವಿಶೇಷವಾಗಿತ್ತು. ವಿವಿಧತೆಯಲ್ಲಿ ಏಕತೆ ಎಂಬ ಭಾರತದ ಸದ್ಗುಣಕ್ಕೆ ಪೇಜಾವರ ಶ್ರೀಗಳು ಅಪ್ಪಟ ರಾಯಭಾರಿ’ ಎಂದು ಯಾಜ್ಞವಲ್ಕ್ಯಎಂಬುವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದು, ನೂರಾರು ಜನರು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಹಲವು ವರ್ಷಗಳ ಹಿಂದೆ ಪೇಜಾವರ ಶ್ರೀಗಳು ತಮ್ಮ ಕಾರು ಚಾಲಕನನ್ನಾಗಿ ಮುಸ್ಲಿಂ ವ್ಯಕ್ತಿಯನ್ನು ನೇಮಿಸಿಕೊಂಡಿದ್ದರು. 2 ವರ್ಷಗಳ ಹಿಂದೆ ಮಠದಲ್ಲಿ ಇಫ್ತಾರ್ ಕೂಟ ಆಯೋಜಿಸಿ ಸುದ್ದಿಯಾಗಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.