ಭಾನುವಾರ, ಜನವರಿ 19, 2020
20 °C
ಜಿಲ್ಲಾ ಸಾಹಿತ್ಯ ಸಮ್ಮೇಳನ ಮೊಟುಕು; ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ

ಪೆಟ್ರೋಲ್‌ ಬಾಂಬ್‌ ಬೆದರಿಕೆ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಬೆದರಿಕೆಯೊಡ್ಡಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಧಕ್ಕೆ ನಿಲ್ಲುವಂತೆ ಮಾಡಿದ ‘ಪೆಟ್ರೋಲ್‌ ಬಾಂಬ್‌’ ಕಿಡಿಗೇಡಿಗಳನ್ನು ಪತ್ತೆ ಮಾಡಬೇಕು ಎಂದು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ಶುರು ಮಾಡಿದ್ದಾರೆ.

‘ವ್ಯಾಟ್ಸ್‌ ಆ್ಯಪ್‌’, ‘ಫೇಸ್‌ ಬುಕ್‌’, ‘ಟ್ವಿಟರ್‌’ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಾಕಿದ್ದಾರೆ. ‘ಪೆಟ್ರೋಲ್‌ ಬಾಂಬ್‌ ಉಗ್ರರನ್ನು ಬಂಧಿಸಿ ಇಲ್ಲವೇ ರಾಜೀನಾಮೆ ಕೊಡಿ’, ‘ಶೃಂಗೇರಿಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಕಾಯಕ್ರಮವನ್ನು ಬೆದರಿಕೆಯೊಡ್ಡಿ ನಿಲ್ಲಿಸಿದ ಪೆಟ್ರೊಲ್‌ ಬಾಂಬ್‌ ಉಗ್ರರನ್ನು ಬಂಧಿಸಿ’ ಮೊದಲಾದ ಸಂದೇಶಗಳಿವೆ.

ಶೃಂಗೇರಿಯಲ್ಲಿ ಇದೇ 10ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದ ಭವನದ ಬಳಿಯ ಗೋದಾಮೊಂದರಲ್ಲಿ ಪೆಟ್ರೋಲ್ ತುಂಬಿದ ಬಾಟಲಿಗಳು ಸಿಕ್ಕಿವೆ. ಪಟ್ಟಣದ ಕೆಲವೆಡೆ ಬೆಂಕಿ ಹಾಕಲು ಇಟ್ಟಿದ್ದ ಟೈರುಗಳು ಸಿಕ್ಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು