ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್ ನಿಷೇಧ ಜಾರಿಯಿಲ್ಲ!

Last Updated 18 ಮೇ 2019, 19:43 IST
ಅಕ್ಷರ ಗಾತ್ರ

ಅವಳಿ ನಗರ ಹುಬ್ಬಳ್ಳಿ– ಧಾರವಾಡದಲ್ಲಿ ಪ್ಲಾಸ್ಟಿಕ್ ನಿಷೇಧ ಕಟ್ಟುನಿಟ್ಟಾಗಿ ಜಾರಿಗೆ ಬಂದಿಲ್ಲ.

ಪಾಲಿಕೆ ಕಳೆದ ವರ್ಷ ಪ್ಲಾಸ್ಟಿಕ್ ವಿರುದ್ಧ ದೊಡ್ಡ ಅಭಿಯಾನವನ್ನೇ ಆರಂಭ ಮಾಡಿತ್ತು. ಕ್ವಿಂಟಲ್‌ಗಟ್ಟಲೆ ಪ್ಲಾಸ್ಟಿಕ್ ವಶಪಡಿಸಿಕೊಂಡು ಅಂಗಡಿ ಮಾಲೀಕರಿಗೆ ದಂಡ ವಿಧಿಸಿತ್ತು. ಆ ಸಂದರ್ಭದಲ್ಲಿ ಜನರಲ್ಲಿ ಸ್ವಲ್ಪ ಜಾಗೃತಿ ಹಾಗೂ ಅಂಗಡಿ ಮಾಲೀಕರಲ್ಲಿ ಕೊಂಚ ಭಯ ಮೂಡಿದ್ದು ನಿಜ.

ಪ್ಲಾಸ್ಟಿಕ್ ಬ್ಯಾಗ್ ಇಲ್ಲವೇ ಇಲ್ಲ ಎಂದು ಹಲವು ಅಂಗಡಿ, ಬೇಕರಿ ಮಾಲೀಕರು ನಿಷ್ಠುರವಾಗಿ ಹೇಳುತ್ತಿದ್ದರು. ಆದರೆ ದಾಳಿ ನಿರಂತರವಾಗಿ ನಡೆಯದ ಕಾರಣ, ಹೆಚ್ಚಿನ ಪರಿಣಾಮ ಬೀರಿಲ್ಲ. ಈಗಿನ ಪರಿಸ್ಥಿತಿ ನೋಡಿದರೆ ಎಲ್ಲಿ ಆರಂಭವಾಯಿತೋ ಅಲ್ಲಿಗೇ ಬಂದು ನಿಂತಿದೆ ಅನಿಸುತ್ತದೆ.

‘ಪ್ರಯತ್ನ ಮುಂದುವರೆದಿದ್ದು, ಸಗಟು ಮಾರಾಟಗಾರರು ಹಾಗೂ ದಾಸ್ತಾನು ಮಳಿಗೆಯನ್ನು ಗುರಿಯಾಗಿಸಿ ದಾಳಿ ಮಾಡಲು ನಿರ್ಧರಿಸಲಾಗಿದೆ. ಪ್ಲಾಸ್ಟಿಕ್ ವಿಷಯದಲ್ಲಿ ಮೊದಲು ಜನರಲ್ಲಿ ಜಾಗೃತಿ ಮೂಡಬೇಕು’ ಎನ್ನುತ್ತಾರೆ ಪಾಲಿಕೆ ಪರಿಸರ ಅಧಿಕಾರಿ ಶ್ರೀಧರ.

‘ಮಾರ್ಚ್‌ 1ರಿಂದ ಮೇ 15ರ ವರೆಗೆ ಒಟ್ಟು 310 ಅಂಗಡಿಗಳ ಮೇಲೆ ದಾಳಿ ನಡೆಸಿ, 2.78 ಟನ್ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ. ₹ 5.82 ಲಕ್ಷ ದಂಡ ವಸೂಲಿ ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT