ಮಡಿಕೇರಿ: ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ವತಿಯಿಂದ, ದೀಕ್ಷಾ ಸಂಸ್ಥೆ ಸಹಯೋಗದಲ್ಲಿ ಜ.17ರಂದು (ಶುಕ್ರವಾರ) ಮಡಿಕೇರಿಯ ಮೈತ್ರಿ ಪೊಲೀಸ್ ಸಮುದಾಯ ಭವನದಲ್ಲಿ ‘ಪ್ರಜಾವಾಣಿ ಕ್ವಿಜ್’ ಚಾಂಪಿಯನ್ಷಿಪ್ ನಡೆಯಲಿದೆ.

6 ರಿಂದ 10ನೇ ತರಗತಿಯ ಶಾಲಾ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಯಾಗಿದ್ದು, ಪ್ರತಿ ಹಂತದಲ್ಲಿ ಆಯ್ಕೆಯಾದ ತಂಡಗಳಿಗೆ ಅತ್ಯಾಕರ್ಷಕ ಬಹುಮಾನ ನೀಡಲಾಗುವುದು. ಶುಕ್ರವಾರ ಬೆಳಿಗ್ಗೆ 8.30ಕ್ಕೆ ನೋಂದಣಿ ಆರಂಭವಾಗಲಿದೆ. ಬೆಳಿಗ್ಗೆ 9.30ಕ್ಕೆ ಸ್ಪರ್ಧೆಗೆ ಚಾಲನೆ ದೊರೆಯಲಿದೆ. ಒಂದು ಶಾಲೆಯಿಂದ ತಲಾ ಇಬ್ಬರಂತೆ ಮೂರು ತಂಡಗಳು ಮಾತ್ರ ಭಾಗವಹಿಸಲು ಅವಕಾಶವಿದೆ. ಉಚಿತ ಪ್ರವೇಶವಿದೆ.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪನ್ನೇಕರ್, ಡಿಡಿಪಿಐ ಪೆರಿಗ್ರಿನ್ ಎಸ್. ಮಚ್ಚಾಡೋ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಇಲ್ಲಿ ಗೆದ್ದವರು, ಜ.30ರಂದು ಬೆಂಗಳೂರಿನಲ್ಲಿ ನಡೆಯಲಿರುವ ಫೈನಲ್ಗೆ ಆಯ್ಕೆಯಾಗಲಿದ್ದಾರೆ. ಅಂತಿಮ ಸುತ್ತಿನಲ್ಲಿ ಮೊದಲ ಮೂರು ಸ್ಥಾನ ಪಡೆದ ತಂಡಗಳಿಗೆ ಕ್ರಮವಾಗಿ ₹ 50 ಸಾವಿರ, ₹ 30 ಸಾವಿರ ಹಾಗೂ ₹ 10 ಸಾವಿರ ಬಹುಮಾನ ನೀಡಲಾಗುವುದು. ನಾಲ್ಕು ಹಾಗೂ ಐದನೇ ಸ್ಥಾನ ಪಡೆದ ತಂಡಗಳಿಗೂ ಕ್ರಮವಾಗಿ ₹ 6 ಹಾಗೂ ₹ 4 ಸಾವಿರ ನಗದು ಬಹುಮಾನವಿದೆ.

ಹೆಚ್ಚಿನ ಮಾಹಿತಿಗೆ ನಾಗೇಶ್ – 96069 12173, ಪ್ರಕಾಶ್ ನಾಯಕ್ 98808 42842 ಅವರನ್ನು ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.