ಶನಿವಾರ, ಸೆಪ್ಟೆಂಬರ್ 21, 2019
21 °C

ಗೌರಿಬಿದನೂರಿಗೆ ಹೋಗುತ್ತಿದ್ದ ಬಸ್ ಮೇಲೆ ಕಲ್ಲು ತೂರಿದ ಕಾಂಗ್ರೆಸ್ ಕಾರ್ಯಕರ್ತರು

Published:
Updated:

ಬೆಂಗಳೂರು: ಮೌರ್ಯ ವೃತ್ತದ ಬಳಿ ಪ್ರತಿಭಟನೆ ಮುಗಿಸಿ ತೆರಳುತ್ತಿದ್ದ ಡಿ.ಕೆ. ಶಿವಕುಮಾರ್ ಬೆಂಬಲಿಗರು ಕೆಎಸ್ಆರ್‌ಟಿಸಿ ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ.

ಇದನ್ನೂ ಓದಿ: ಡಿಕೆಶಿ ಬಂಧನ Live ಅಪ್‌ಡೇಟ್ಸ್‌

ಹಳೆ ಜೆಡಿಎಸ್ ಕಚೇರಿ ಮುಂಭಾಗದಲ್ಲಿ ಬೆಂಗಳೂರು- ಗೌರಿಬಿದನೂರು ಬಸ್‌ಗೆ ಪ್ರತಿಭಟನಾನಿರತರು ಕಲ್ಲು ತೂರಿ, ಗಾಜು ಜಖಂಗೊಳಿಸಿದರು. ಬಸ್ ಬೆಂಗಳೂರಿನಿಂದ ಗೌರಿಬಿದನೂರು ಕಡೆ ತೆರಳುತ್ತಿತ್ತು.

ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಭೇಟಿ: ಕಾಂಗ್ರೆಸ್ ಮುಖಂಡರಾದ ರಮೇಶ್ ಕುಮಾರ್ ಮತ್ತು ಚೆಲುವರಾಯಸ್ವಾಮಿ ಅವರು ಶಾಸಕ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದ ನಿವಾಸಕ್ಕೆ ಬುಧವಾರ ಭೇಟಿ ನೀಡಿದರು.

'ಶಿವಕುಮಾರ್ ಅವರಿಗೆ ಏನೂ ಆಗುವುದಿಲ್ಲ. ಎರಡು ಮೂರು ದಿನಗಳಲ್ಲಿ ಅವರು ಮನೆಗೆ ವಾಪಸ್ ಆಗಲಿದ್ದಾರೆ' ಎಂದು ಇಬ್ಬರು ನಾಯಕರೂ ಶಿವಕುಮಾರ್ ಅವರ ಪತ್ನಿ, ಮಕ್ಕಳಿಗೆ ಧೈರ್ಯ ತುಂಬಿದರು

ಬಳಿಕ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದ ರಮೇಶ್ ಕುಮಾರ್ ಮತ್ತು ಚೆಲುವರಾಯಸ್ವಾಮಿ, 'ಇದು ಖಾಸಗಿ ಭೇಟಿ’ ಎಂದಷ್ಟೇ ಹೇಳಿದರು.

Post Comments (+)