ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ಬಂಧನ Live: ಸೆ.13ರವರೆಗೆ ಇ.ಡಿ. ಕಸ್ಟಡಿಗೆ ಡಿ.ಕೆ.ಶಿವಕುಮಾರ್

Last Updated 4 ಸೆಪ್ಟೆಂಬರ್ 2019, 14:55 IST
ಅಕ್ಷರ ಗಾತ್ರ

ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರ ಬಂಧನ ವಿರೋಧಿಸಿ ರಾಮನಗರ ಜಿಲ್ಲೆಯಲ್ಲಿ ಪ್ರತಿಭಟನೆ ಗರಿಗೆದರಿದೆ. ಅತ್ತ ದೆಹಲಿಯಲ್ಲಿ ಶಿವಕುಮಾರ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಡಿಕೆಶಿ ಬಂಧನ, ವಿಚಾರಣೆ, ಪ್ರತಿಭಟನೆಯ ಮಾಹಿತಿ ಇಲ್ಲಿ ಲಭ್ಯ.

---

7.20–ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 13ರಂದೇ ನಡೆಸುವುದಾಗಿ ಕೋರ್ಟ್‌ ತಿಳಿಸಿದೆ

7.18–ಶಾಸಕಡಿ.ಕೆ.ಶಿವಕುಮಾರ್ ಅವರನ್ನು ಸೆಪ್ಟೆಂಬರ್ 13ರವರೆಗೆಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಿ ದೆಹಲಿಯ ಅವೆನ್ಯೂ ರಸ್ತೆಯಲ್ಲಿರುವ ಕೋರ್ಟ್ ಆದೇಶ ನೀಡಿದೆ.

5.47–ನ್ಯಾಯಾಲಯದ ಆವರಣದಲ್ಲೇ ವಕೀಲ ಅಭಿಷೇಕ್ ಮನು ಸಿಂಘ್ವಿ ಜತೆಡಿ.ಕೆ.ಶಿವಕುಮಾರ್ ಮಾತುಕತೆ

5.45– ಇ.ಡಿ. ಮತ್ತು ಡಿ.ಕೆ.ಶಿವಕುಮಾರ್ ಪರ ವಕೀಲರ ವಾದ ಮಂಡನೆ ಮುಕ್ತಾಯ. ತೀರ್ಪು ಕಾಯ್ದಿರಿಸಿದ ಕೋರ್ಟ್

5.40– ಆದಾಯ ತೆರಿಗೆ ಇಲಾಖೆ ವಿಚಾರಣೆಗೆ ಸೆಪ್ಟೆಂಬರ್ 17ರವರೆಗೆ ಹೈಕೋರ್ಟ್ ತಡೆ ನೀಡಿದೆ. ಆದಾಯ ತೆರಿಗೆ ಇಲಾಖೆ ಪ್ರಕರಣ ಆಧರಿಸಿಯೇ ಇ.ಡಿ. ಪ್ರಕರಣ ದಾಖಲಿಸಿಕೊಂಡಿದೆ. ಹಾಗಾಗಿ ಈ ಪ್ರಕರಣವೂ ಹೈಕೋರ್ಟ್ ತೀರ್ಪಿನ ವ್ಯಾಪ್ತಿಗೆ ಬರುತ್ತದೆ ಎಂದು ಡಿ.ಕೆ.ಶಿವಕುಮಾರ್ ಪರ ಅಭಿಷೇಕ್ ಮನು ಸಿಂಘ್ವಿ ವಾದ ಮಂಡನೆ

5.35– ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿಗೆ ಆಕ್ಷೇಪ ಸಲ್ಲಿಸಲು ಒಂದು ವಾರ ಕಾಲಾವಕಾಶ ನೀಡುವಂತೆ ಇ.ಡಿ. ಪರ ವಕೀಲರಿಂದ ಮನವಿ

5.29– ಹೈಕೋರ್ಟ್ ತಡೆ ನೀಡಿರುವುದು ಆದಾಯ ತೆರಿಗೆ ಇಲಾಖೆ ವಿಚಾರಣೆಗಷ್ಟೇ ಹೊರತು ಇ.ಡಿ. ವಿಚಾರಣೆಗೆ ಅಲ್ಲ ಎಂದು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದ ಇ.ಡಿ. ವಕೀಲರು

5.25– ಡಿ.ಕೆ.ಶಿವಕುಮಾರ್ ಅಪರಾಧ ಒಳಸಂಚು ಆರೋಪವನ್ನೂ ಎದುರಿಸುತ್ತಿರುವುದರಿಂದ ಅವರನ್ನು ಇ.ಡಿ.ಕಸ್ಟಡಿಗೆ ವಹಿಸಬೇಕು:ನ್ಯಾಯಾಲಯಕ್ಕೆ ಇ.ಡಿ. ಪರ ವಕೀಲ ನಟರಾಜ್ ಹೇಳಿಕೆ

5.10– ಅಕ್ರಮ ಹಣ ಗಳಿಕೆಯು ‘ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ (ಪಿಎಂಎಲ್ಎ)’ ಅನ್ವಯ ಅಪರಾಧವಾಗುತ್ತದೆ. ಅಕ್ರಮ ಹಣ ಗಳಿಕೆಯು ಭಾರತೀಯ ದಂಡ ಸಂಹಿತೆ ಅನ್ವಯ ಅಪರಾಧ ಒಳಸಂಚು ಆರೋಪವನ್ನೂ ಎದುರಿಸಬೇಕಾಗುತ್ತೆ: ಇ.ಡಿ. ಪರ ವಕೀಲ ನಟರಾಜ್ ವಾದ ಮಂಡನೆ

5.04– ನನ್ನ ಕಕ್ಷಿದಾರರಿಗೆ ಲೋಬಿಪಿ, ಹೈಶುಗರ್, ಥೈರಾಯ್ಡ್‌ ಸಮಸ್ಯೆ ಇದೆ. ಏಕಕಾಲಕ್ಕೆ ಮೂವರು ವಿಚಾರಣೆ ಮಾಡ್ತಾರೆ. ಮಾನಸಿಕ ಒತ್ತಡ ಹೆಚ್ಚಾಗುತ್ತೆ. ಅನಿವಾರ್ಯ ಕಾರಣಗಳಿಂದ ಆಹಾರ ತೆಗೆದುಕೊಳ್ಳಲು ಆಗ್ತಿಲ್ಲ. ಜಾಮೀನು ಕೊಡಿ.–ಡಿಕೆಶಿ ಪರ ವಕೀಲ ಅಭಿಷೇಕ್ ಮನುಸಿಂಘ್ವಿ

4.59– ತಪ್ಪೊಪ್ಪಿಗೆಗೆ ಒತ್ತಾಯಿಸುವುದು ವಿಚಾರಣೆಯಲ್ಲ. ಅದಕ್ಕಾಗಿ ‘ಇಡಿ’ವಶಕ್ಕೆ ಕೊಡಬಾರದು –ಡಿಕೆಶಿ ಪರ ವಕೀಲ ಅಭಿಷೇಕ್ ಮನುಸಿಂಘ್ವಿ

4.57– ಮಾತನಾಡುವ ಹಕ್ಕು ಇರುವಂತೆ ಆರೋಪಿಗೆ ಮೌನವಾಗಿರುವ ಹಕ್ಕು ಸಹ ಇದೆ ಎಂದು ಹಳೆಯ ತೀರ್ಪು ಉಲ್ಲೇಖಿಸಿದ ಸಿಂಘ್ವಿ.

4.55–‘ಇಡಿ’ಗೆ ಬೇಕಿರುವುದು ಮಾತ್ರ ಸತ್ಯವೇ? ಆರೋಪಿ ಹೇಳುವುದು ಸತ್ಯವಲ್ಲವೇ?–ಸಿಂಘ್ವಿ ಪ್ರಶ್ನೆ

4.53–ನ್ಯಾಯಾಲಯದಲ್ಲಿ ಡಿಕೆಶಿ ಪರ ಅಹವಾಲು ಮಂಡಿಸುತ್ತಿರುವಸಿಂಘ್ವಿ. ಸತ್ಯ ಹೇಳುತ್ತಿಲ್ಲ ಎಂದು ಬಂಧಿಸಬಹುದೆ. –ಸಿಂಘ್ವಿ ಪ್ರಶ್ನೆ

4.45–ಕೆಳಹಂತದ ನ್ಯಾಯಾಲಯದ ಆದೇಶಗಳನ್ನು ಓದುತ್ತಿರುವ ವಿಶೇಷ ನ್ಯಾಯಾಧೀಶರು.

4.45– ಜಾಮೀನಿನ ಮೇಲೆ ಡಿಕೆಶಿ ಅವರನ್ನು ಬಿಡುಗಡೆ ಮಾಡಿ. ವಿಚಾರಣೆ ನಡೆಸುವಂಥದ್ದು ಏನೂ ಇಲ್ಲ. ಇಡಿ ವಶದಲ್ಲಿದ್ದಾಗ ಡಿಕೆಶಿ ಅವರ ಸ್ವಾತಂತ್ರ್ಯ ಹರಣವಾಗಿದೆ.–ಡಿಕೆಶಿ ಪರ ವಕೀಲ ಅಭಿಷೇಕ್ ಮನುಸಿಂಘ್ವಿ

4.44– ವಶಕ್ಕೆ ಕೊಡಿ ಎಂದು ಕೋರಿರುವಇಡಿ ಪ್ರಬಲ ಸಾಕ್ಷ್ಯಗಳನ್ನು ನೀಡಿಲ್ಲ. ಈ ಪ್ರಕರಣದಲ್ಲಿ ಪ್ರಬಲ ಪ್ರಕರಣ ಎನ್ನುವುದು ಕೈಬಿಡಬಹುದಾದ ಪ್ರಕರಣ ಮಾತ್ರ.–ಡಿಕೆಶಿ ಪರ ವಕೀಲ ಅಭಿಷೇಕ್ ಮನುಸಿಂಘ್ವಿ

4.41–ಜಾರಿ ನಿರ್ದೇಶನಾಲಯದ ವಶಕ್ಕೆ ಕೊಡುವುದು ಅನಿವಾರ್ಯ ಎನಿಸುತ್ತದೆಯೇ? ನ್ಯಾಯಾಲಯ ತನ್ನ ವಿವೇಚನೆ ಬಳಸಿ ನಿರ್ಧರಿಸಬೇಕು.–ಡಿಕೆಶಿ ಪರ ವಕೀಲ ಅಭಿಷೇಕ್ ಮನುಸಿಂಘ್ವಿ

4.39– ಅವರು ಕೇಳಿದರು ಅಂತ ಯಾಂತ್ರಿಕವಾಗಿ ಬಂಧನಕ್ಕೆ ಒಪ್ಪಿಸಲು ಆಗುವುದಿಲ್ಲ.–ಡಿಕೆಶಿ ಪರ ವಕೀಲ ಅಭಿಷೇಕ್ ಮನುಸಿಂಘ್ವಿ

4.37– ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 276, 278, 279ಕ್ಕೂ ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಗೂ ಯಾವುದೇ ಸಂಬಂಧವಿಲ್ಲ. ––ಡಿಕೆಶಿ ಪರ ವಕೀಲ ಅಭಿಷೇಕ್ ಮನುಸಿಂಘ್ವಿ

4.31– ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ತನಗೆ ಬೇಕಿರುವ ಅಂಶಗಳನ್ನು ಮಾತ್ರ ಪ್ರಸ್ತಾಪಿಸುತ್ತಿದೆ. ಪೂರ್ಣ ಮಾಹಿತಿ ನೀಡುತ್ತಿಲ್ಲ. ನಾಯಿ ಬಿಟ್ಟು ಅದರ ಬಾಲವನ್ನು ಮಾತ್ರ ಅಲುಗಾಡಿಸಲು ಸಾಧ್ಯವಿಲ್ಲ.–ಡಿಕೆಶಿ ಪರ ವಕೀಲ ಅಭಿಷೇಕ್ ಮನುಸಿಂಘ್ವಿ

4.31– ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಆದಾಯ ತೆರಿಗೆ ಕಾಯ್ದೆಯನ್ವಯದಾಖಲಾಗಿರುವ ಪ್ರಕರಣವನ್ನು ಕೈಬಿಡಬಹುದು.–ಡಿಕೆಶಿ ಪರ ವಕೀಲ ಅಭಿಷೇಕ್ ಮನುಸಿಂಘ್ವಿ

4.28– ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಕರಣ ಇಂದು ದಾಖಲಾಗಿದೆ. ಸೆ.17ರವರೆಗೆ ವಿಚಾರಣೆಗೆತಡೆಯಾಜ್ಞೆ ಇದೆ.–ಡಿಕೆಶಿ ಪರ ವಕೀಲ ಅಭಿಷೇಕ್ ಮನುಸಿಂಘ್ವಿ

4.25– ನ್ಯಾಯಾಲಯದಲ್ಲಿ ಐಟಿ ಪ್ರಕರಣದ ಮೇಲೆ ಮಧ್ಯಂತರ ತಡೆ ಇದೆ. ಬಂಧನ ಕೋರಿರುವ ಅರ್ಜಿಯು ಆದಾಯ ತೆರಿಗೆ ಇಲಾಖೆಯ ಆಧಾರದ ಮೇಲೆ ಇದೆ. –ಡಿಕೆಶಿ ಪರ ವಕೀಲ ಅಭಿಷೇಕ್ ಮನುಸಿಂಘ್ವಿ

4.24–ಇಡಿ ಬಳಿ ಸ್ವತಂತ್ರ ಸಾಕ್ಷಿ ಇಲ್ಲ

ಆಗಸ್ಟ್‌ 2, 2017ರಂದು ನಡೆದ ಐಟಿ ದಾಳಿಯ ವೇಳೆ ಬೆಳಕಿಗೆ ಬಂದ ದಾಖಲೆಗಳನ್ನು ಆಧರಿಸಿ ಈ ಪ್ರಕರಣ ನಿಂತಿದೆ. ಜಾರಿ ನಿರ್ದೇಶನಾಲಯದ ಬಳಿ ಯಾವುದೇ ಸ್ವತಂತ್ರ ಸಾಕ್ಷಿ ಇಲ್ಲ. ಆದರೆ ಆದಾಯ ತೆರಿಗೆ ಇಲಾಖೆ ಜೂನ್ 13ಮ 2018ರಂದು ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿತು. ಏಕೆ ಇಷ್ಟು ತಡವಾಯಿತು?

4.20–ಜಾಮೀನು ಅರ್ಜಿ ಸಲ್ಲಿಕೆ

ನ್ಯಾಯಧೀಶರ ಮುಂದೆ ಡಿಕೆಶಿ ಪರ ವಕೀಲ ಅಭಿಷೇಕ್ ಮನುಸಿಂಘ್ವಿ ಜಾಮೀನು ಅರ್ಜಿ ಸಲ್ಲಿಕೆ.

4.17–ಡಿಕೆಶಿ ಪರ ಅಭಿಷೇಕ್ ಮನುಸಿಂಘ್ವಿ ವಾದ ಆರಂಭ

ಡಿಕೆಶಿ ಅವರ ವಿಚಾರಣೆ ಈಗಾಗಲೇ ನಾಲ್ಕು ದಿನ ನಡೆದಿದೆ. ಜಾರಿ ನಿರ್ದೇಶನಾಲಯದ ವಶಕ್ಕೆ ನೀಡುವುದು ಅನಗತ್ಯ –ಡಿಕೆಶಿ ಪರ ವಕೀಲ ಅಭಿಷೇಕ್ ಮನುಸಿಂಘ್ವಿ

4.15–ತನಿಖೆಗೆಶಿವಕುಮಾರ್ ಸಹಕರಿಸುತ್ತಿಲ್ಲ’

ತನಿಖೆಯನ್ನು ದಿಕ್ಕು ತಪ್ಪಿಸಲು ಡಿ.ಕೆ.ಶಿವಕುಮಾರ್ ಪ್ರಜ್ಞಾಪೂರ್ವಕ ಪ್ರಯತ್ನಿಸಿದರು. ತಪಾಸಣೆ ವೇಳೆ ದೊರೆತ ಹಣದ ನಿಖರ ವಿವರಗಳನ್ನು ನೀಡಲಿಲ್ಲ.– ಇಡಿ ಪರ ವಕೀಲ, ನಟರಾಜ್

4.14– ಶಿವಕುಮಾರ್ ಬಂಧನ ಅತ್ಯಗತ್ಯ: ಇಡಿ

ಅವರ ನಿವಾಸದಲ್ಲಿ ಸಿಕ್ಕಿರುವ ಹಣದ ನಿಖರ ಮೂಲ ತಿಳಿಯಲು ಮತ್ತು ಅದರ ಉದ್ದೇಶ ಅರಿಯಲು ಬಂಧನದಲ್ಲಿ ವಿಚಾರಣೆ ನಡೆಸುವುದು ಅಗತ್ಯ. ಕೆಲ ವಿಷಯಗಳು ಅವರಿಗೆ ಮಾತ್ರ ಗೊತ್ತಿದೆ.– ಇಡಿ ಪರ ವಕೀಲ, ನಟರಾಜ್

4.11– ಶಿವಕುಮಾರ್ ಬಂಧನ ಅತ್ಯಗತ್ಯ: ಇಡಿ

ಡಿ.ಕೆ.ಶಿವಕುಮಾರ್ ವಿರುದ್ಧದ ತನಿಖೆ ಈಗ ಪ್ರಮುಖ ಘಟ್ಟ ತಲುಪಿದೆ. ಹೀಗಾಗಿ ಅವರನ್ನು ನಮ್ಮ ವಶಕ್ಕೆ ಪಡೆದು, ವಿಚಾರಣೆ ನಡೆಸುವುದು ಅನಿವಾರ್ಯ.– ಇಡಿ ಪರ ವಕೀಲ, ನಟರಾಜ್

4.10–ತನಿಖೆಗೆಶಿವಕುಮಾರ್ ಸಹಕರಿಸುತ್ತಿಲ್ಲ’

ಸಮನ್ಸ್‌ ಜಾರಿ ಮಾಡಿದ ನಂತರ ಡಿ.ಕೆ.ಶಿವಕುಮಾರ್ ‘ಇಡಿ’ ಕಚೇರಿಗೆ ಬಂದಿದ್ದು ನಿಜ. ಆದರೆ ಅಧಿಕಾರಿಗಳ ಪ್ರಶ್ನೆಗಳಿಗೆ ಅವರು ಸರಿಯಾಗಿ ಉತ್ತರ ನೀಡುತ್ತಿಲ್ಲ. ತನಿಖೆಗೆ ಸಹಕರಿಸುತ್ತಿಲ್ಲ. – ಇಡಿ ಪರ ವಕೀಲ, ನಟರಾಜ್

4.08–ಶಿವಕುಮಾರ್ ಅಕ್ರಮ ಎಸಗಿರುವುದು ನಿಜ

ಆದಾಯ ತೆರಿಗೆ ಇಲಾಖೆಯ ತನಿಖೆ ಮತ್ತು ಹಲವು ಸಾಕ್ಷ್ಯಗಳ ಹೇಳಿಕೆಗಳು ಡಿ.ಕೆ.ಶಿವಕುಮಾರ್ ಅವರು ಅಕ್ರಮ ಎಸಗಿರುವುದನ್ನು ನಿರೂಪಿಸಿವೆ. – ಇಡಿ ಪರ ವಕೀಲ, ನಟರಾಜ್

4.04–14 ದಿನ ವಶಕ್ಕೆ ಕೊಡಿ: ‘ಇಡಿ’ ಪರ ವಕೀಲರು

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿರುವ ಡಿ.ಕೆ.ಶಿವಕುಮಾರ್ ಅವರನ್ನು ವಿಚಾರಣೆಗಾಗಿ 14 ದಿನ ನಮ್ಮ ವಶಕ್ಕೆ ನೀಡಬೇಕು ಎಂದು ಜಾರಿ ನಿರ್ದೇಶನಾಲಯದ ವಕೀಲ ಕೆ.ಎಂ.ನಟರಾಜ್ನ್ಯಾಯಾಧೀಶರನ್ನು ಕೋರಿದರು.

4.03–ನ್ಯಾಯಾಲಯಕ್ಕೆ ಬಂದ ‘ಇಡಿ’ ಪರ ವಕೀಲರು

ತಡವಾಗಿ ನ್ಯಾಯಾಲಯಕ್ಕೆ ಬಂದಿದ್ದಕ್ಕೆ ಕ್ಷಮೆ ಕೋರಿದ ವಕೀಲರು.

3.59– ಇಡಿ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ನವದೆಹಲಿ: ಜಾರಿ ನಿರ್ದೇಶನಾಲಯದ ಎದುರು ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರು ಇಡಿ ಕಚೇರಿ ಪ್ರವೇಶಿಸುವುದಕ್ಕೆ ಪೊಲೀಸರು ತಡೆಯೊಡ್ಡಿದರು. ಬ್ಯಾರಿಕೇಡ್‌ಗಳನ್ನು ಮುರಿದಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

3.56– ನ್ಯಾಯಾಲಯಕ್ಕೆ ಬಂದ ನ್ಯಾಯಾಧೀಶರು: ವಿಚಾರಣೆಗೆ ಕ್ಷಣಗಣನೆ

ನವದೆಹಲಿ: ನ್ಯಾಯಮೂರ್ತಿ ಅಜ್‌ಯ ಕುಮಾರ್ ಕುಹರ್ ನ್ಯಾಯಾಲಯಕ್ಕೆ ಆಗಮಿಸಿದರು. ಡಿ.ಕೆ.ಶಿವಕುಮಾರ್ ತಮ್ಮ ಜಾಮೀನು ಅರ್ಜಿಗೆ ಸಹಿ ಹಾಕಿ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರಿಗೆ ಹಸ್ತಾಂತರಿಸಿದರು.

3.45– ವಾದ–ಪ್ರತಿವಾದಕ್ಕೆ ವಕೀಲರ ಸಿದ್ಧತೆ

ನವದೆಹಲಿ: ಜಾರಿ ನಿರ್ದೇಶನಾಲಯ (ಇಡಿ) ಪರವಾಗಿ ಹೆಚ್ಚುವರಿ ಸಾಲಿಟಿರ್ ಜನರಲ್ ಕೆ.ಎಂ.ನಟರಾಜ್ ಮತ್ತು ಶಿವಕುಮಾರ್ ಪರವಾಗಿ ಅಭಿಷೇಕ್ ಮನುಸಿಂಘ್ವಿ ಹಾಜರು.

3.42–ವಕಾಲತ್‌ನಾಮಾಕ್ಕೆ ಸಹಿಹಾಕಿದ ಡಿಕೆಶಿ

ನವದೆಹಲಿ: ವಕಾಲತ್‌ನಾಮಾ (ತನ್ನ ಪರವಾಗಿ ವಾದ ಮಾಡಲುವಕೀಲರಿಗೆ ಅನುಮತಿ) ಸೇರಿದಂತೆ ಹಲವು ದಾಖಲೆಗಳಿಗೆ ಸಹಿ ಹಾಕಿದ ಡಿ.ಕೆ.ಶಿವಕುಮಾರ್.

3.38– ನ್ಯಾಯಾಧೀಶರಿಗಾಗಿ ನಿರೀಕ್ಷೆ

ನವದೆಹಲಿ: ವಿಶೇಷ ನ್ಯಾಯಾಧೀಶ ಅಜಯ್‌ ಕುಮಾರ್ ಕುಹರ್‌ ಅವರಿಗಾಗಿ ಕಾಯುತ್ತಿರುವ ಡಿ.ಕೆ.ಶಿವಕುಮಾರ್. ಡಿಕೆಶಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಹಾಜರು. ಸಿಂಘ್ವಿ ಕೈಕುಲುಕಿ ವಿಜಯದ ಸಂಕೇತ ತೋರಿದ ಡಿಕೆಶಿ.

3.22–ನ್ಯಾಯಾಲಯಕ್ಕೆ ಹಾಜರು

ನವದೆಹಲಿ:ಮಂಗಳವಾರ ರಾತ್ರಿ ಬಂಧಿಸಲಾಗಿರುವ ಶಾಸಕಡಿ.ಕೆ.ಶಿವಕುಮಾರ್‌ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ದೆಹಲಿಯ ರೋಸ್ ಅವೆನ್ಯೂ ರಸ್ತೆಯಲ್ಲಿರುವನ್ಯಾಯಾಲಯಕ್ಕೆ ಕರೆದುಕೊಂಡು ಬಂದಿದ್ದಾರೆ. ಜಡ್ಜ್‌ ಅಜಯ್‌ಕುಮಾರ್ ಕುಹರ್ ಮುಂದೆ ಶಿವಕುಮಾರ್ ಅವರನ್ನು ಹಾಜರುಪಡಿಸಲಾಗಿದೆ

2.46–ಕಾಂಗ್ರೆಸ್ ಕಾರ್ಯಕರ್ತರಿಗೆ ಗಾಯ

ಚಳ್ಳಕೆರೆ: ಶಾಸಕ ಡಿ.ಕೆ.ಶಿವಕುಮಾರ್‌ ಬಂಧನ ವಿರೋಧಿಸಿ ಚಿತ್ರದುರ್ಗದ ಚಳ್ಳಕೆರೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್‌ ಕಾರ್ಯಕರ್ತರಿಗೆ ಬೆಂಕಿ ತಗುಲಿ ಗಾಯಗೊಂಡಿದ್ದಾರೆ. ಟೈರಿಗೆ ಬೆಂಕಿ ಹಚ್ಚುವಾಗ ಈ ಅವಘಡ ಸಂಭವಿಸಿದೆ. ಎಂಟು ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಪೊಲೀಸ್‌ ಕಾನ್‌ಸ್ಟೆಬಲ್‌ ಗಾಯಗೊಂಡಿದ್ದಾರೆ. ಇವರನ್ನು ಚಳ್ಳಕೆರೆ ಹಾಗೂ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು: ಬಸ್ ಮೇಲೆ ಕಲ್ಲು ತೂರಿದ ಕಾಂಗ್ರೆಸ್ ಕಾರ್ಯಕರ್ತರು

ಬೆಂಗಳೂರಿನಿಂದ ಗೌರಿಬಿದನೂರಿಗೆ ತೆರಳುತ್ತಿದ್ದ ಬಸ್‌ ಮೇಲೆ ಕಲ್ಲು ತೂರಾಟ ನಡೆಯಿತು.
ಬೆಂಗಳೂರಿನಿಂದ ಗೌರಿಬಿದನೂರಿಗೆ ತೆರಳುತ್ತಿದ್ದ ಬಸ್‌ ಮೇಲೆ ಕಲ್ಲು ತೂರಾಟ ನಡೆಯಿತು.

ಬೆಂಗಳೂರು:ಮೌರ್ಯ ವೃತ್ತದ ಬಳಿ ಪ್ರತಿಭಟನೆ ಮುಗಿಸಿ ತೆರಳುತ್ತಿದ್ದ ಡಿ.ಕೆ. ಶಿವಕುಮಾರ್ ಬೆಂಬಲಿಗರು ಕೆಎಸ್ಆರ್‌ಟಿಸಿ ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ.

ಮಡಿಕೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಮಡಿಕೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

2.13–ಮಡಿಕೇರಿ:ಮಳೆಯ ನಡುವೆಯೂ ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ

ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಬಂಧನವು ಬಿಜೆಪಿ ಷಡ್ಯಂತ್ರ ಎಂದು ಆರೋಪಿಸಿ, ಮಡಿಕೇರಿಯಲ್ಲಿ ಸುರಿಯುತ್ತಿದ್ದ ಮಳೆಯ ನಡುವೆಯೂ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ರಾಮನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರಾಮನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

12.57–ಗುರುವಾರ ಬಂದ್‌ಗೆ ಜೆಡಿಎಸ್–ಕಾಂಗ್ರೆಸ್ ಕರೆ

ರಾಮನಗರ: ಡಿ.ಕೆ. ಶಿವಕುಮಾರ್ ಬಂಧನ ಖಂಡಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಗುರುವಾರ ರಾಮನಗರ ಜಿಲ್ಲೆಯಾದ್ಯಂತ ಬಂದ್‌ಗೆ ಜಂಟಿ ಕರೆ ನೀಡಿವೆ.

‘ಬುಧವಾರ ಡಿಕೆಶಿ‌ ಅಭಿಮಾನಿಗಳು‌ ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದಾರೆ. ಗುರುವಾರ ಎರಡೂ ಪಕ್ಷಗಳು, ಸಂಘಟನೆಗಳ ವತಿಯಿಂದ ಬೆಳಿಗ್ಗೆ 6ರಿಂದ ಸಂಜೆ 6ರವರೆಗೂ ಬಂದ್ ಆಚರಿಸಲಾಗುವುದು. ಮಧ್ಯಾಹ್ನ 12ಕ್ಕೆ ಮೆರವಣಿಗೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು' ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

12.49– ಭೇಟಿಗೆ ಅವಕಾಶ ನಿರಾಕರಣೆ

‘ಡಿ.ಕೆ.ಶಿವಕುಮಾರ್ ಭೇಟಿಗೆ ಅವಕಾಶ ನೀಡಲು ಸಾಧ್ಯವಿಲ್ಲ’ ಎಂದುಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ, ಮಾಜಿ ಸಂಸದರಾದ ವಿ.ಎಸ್.ಉಗ್ರಪ್ಪ, ಧ್ರುವನಾರಾಯಣ, ಮಾಜಿ ಸಚಿವ ರಾಮಲಿಂಗಾರೆಡ್ಡಿ, ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರನ್ನು ಲೋಹಿಯಾ ಆಸ್ಪತ್ರೆ ಸಿಬ್ಬಂದಿ ಹೊರಗೆ ಕಳಿಸಿದರು.

12.44– ಆಸ್ಪತ್ರೆಯಿಂದ ಹೊರಗಿರಿ: ಕಾಂಗ್ರೆಸ್ ನಾಯಕರಿಗೆ ಪೊಲೀಸರ ಸೂಚನೆ

ನವದೆಹಲಿ: ಕರ್ನಾಟಕದಿಂದ ಬಂದಿದ್ದ ಕಾಂಗ್ರೆಸ್‌ ನಾಯಕರನ್ನು ದೆಹಲಿ ಪೊಲೀಸರು ಮತ್ತು ಸಿಆರ್‌ಪಿಎಫ್ ಅಧಿಕಾರಿಗಳು ‘ಆಸ್ಪತ್ರೆಯಿಂದ ಹೊರಗಿರಿ’ ಎಂದು ಕಳಿಸಿದರು. ಹಿರಿಯ ನಾಯಕರಾದ ರಾಮಲಿಂಗಾರೆಡ್ಡಿ, ಉಗ್ರಪ್ಪ ಮತ್ತು ಇತರರನ್ನು ಡಿ.ಕೆ.ಶಿವಕುಮಾರ್ ದಾಖಲಾಗಿರುವ ವಿಐಪಿ ವಾರ್ಡ್‌ನಿಂದ ಹೊರಗೆ ಕಳಿಸಿದರು. ವಾರ್ಡ್‌ ಪ್ರವೇಶಕ್ಕೆ ಯಾರಿಗೂ ಅವಕಾಶ ನೀಡಬಾರದು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎಚ್ಚರಿಕೆ ಆಸ್ಪತ್ರೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.

12.42– ಮಧ್ಯಾಹ್ನ 2.30ಕ್ಕೆ ದೆಹಲಿಗೆ ಖರ್ಗೆ

ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಧ್ಯಾಹ್ನ 2.30ಕ್ಕೆ ದೆಹಲಿ ತಲುಪುವ ಸಾಧ್ಯತೆ ಇದೆ. ಕಾಂಗ್ರೆಸ್‌ನ ಉನ್ನತ ನಾಯಕರ ಸಭೆ ನಡೆಯಲಿದ್ದು, ಅದರಲ್ಲಿ ಡಿ.ಕೆ.ಶಿವಕುಮಾರ್‌ ಬಂಧನದ ನಂತರದ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಯಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

12.38– ದೆಹಲಿಗೆ ಬೇಗ ಬನ್ನಿ: ಖರ್ಗೆಗೆ ಸೋನಿಯಾ ಬುಲಾವ್

ನವದೆಹಲಿ: ದೆಹಲಿಗೆ ಶೀಘ್ರ ಬನ್ನಿ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಆದೇಶ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಬಂಧನ ಮತ್ತು ನಂತರದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಕರೆ ಮಹತ್ವ ಪಡೆದುಕೊಂಡಿದೆ.

12.33– ಬೆಂಬಲಿಗರಿಗೆಶಿಸ್ತುಕ್ರಮದ ಎಚ್ಚರಿಕೆ

ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ಮುಂದುವರಿಸಿದರೆ, ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಸಿಆರ್‌ಪಿಎಫ್‌ ಎಚ್ಚರಿಸಿತು.

12.30– ಆಸ್ಪತ್ರೆಯಿಂದ ಹೊರನಡೆಯಿರಿ: ಡಿಕೆಶಿ ಬೆಂಬಲಿಗರಿಗೆ ಸಿಆರ್‌ಪಿಎಫ್ ಸೂಚನೆ

ನವದೆಹಲಿ: ಡಿ.ಕೆ.ಶಿವಕುಮಾರ್‌ ಬೆಂಬಲಿಗರಿಗೆ ಆಸ್ಪತ್ರೆಯಿಂದ ತಕ್ಷಣ ಹೊರನಡೆಯುವಂತೆ ಸೂಚಿಸಿದ ಸಿಆರ್‌ಪಿಎಫ್ ಅಧಿಕಾರಿಗಳು ವೈದ್ಯರು ಮತ್ತು ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ವರ್ತಿಸಿ ಎಂದು ಎಚ್ಚರಿಸಿದರು.

12.19– ಶಿವಕುಮಾರ್ ವಿಚಾರದಲ್ಲಿ ಇಡಿನಿಷ್ಕರುಣೆಯಿಂದ ನಡೆದುಕೊಂಡಿದೆ: ದೇವೇಗೌಡ

ಬೆಂಗಳೂರು: ತಂದೆಗೆ ಎಡೆ ಹಾಕಲು ಅವಕಾಶ ನೀಡದ ಇಡಿ ಅಧಿಕಾರಿಗಳುಡಿ.ಕೆ.ಶಿವಕುಮಾರ್ ಅವರನ್ನು ನಿಷ್ಕರುಣೆಯಿಂದ ನಡೆಸಿಕೊಂಡಿದ್ದಾರೆ. ನಮ್ಮ ನಂಬಿಕೆಗಳಿಗೆ ಧಕ್ಕೆಯಾಗಿದೆ ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

ಶಿವಕುಮಾರ್ ಅವರ ವಿಚಾರದಲ್ಲಿ ಇಡಿ ಅಮಾನುಷವಾಗಿ ನಡೆದುಕೊಂಡಿದೆ. ಅವರ ಮನೆತನದ ಸಂಪ್ರದಾಯಕ್ಕೆ ಧಕ್ಕೆ ತರುವ ಕೆಲಸ ಇಡಿ ಮಾಡಬಾರದಿತ್ತ. ಗೌರಿ ಹಬ್ಬದ ದಿನ ಹಿರಿಯರಿಗೆ ಎಡೆ ನೀಡುವುದು ಹಿರಿ ಮಗನಾಗಿ ನನ್ನ ಕರ್ತವ್ಯ ಎಂದ ಶಿವಕುಮಾರ್ ಅವರ ಮನವಿಗೆ ಅಧಿಕಾರಿಗಳು ಬೆಲೆ ಕೊಡಬೇಕಿತ್ತು ಎಂದು ದೇವೇಗೌಡ ನುಡಿದರು.

11.58–ಪ್ರತಿಭಟನೆ ಮಾಡೋಣ, ಬಸ್‌ಗೆ ಬೆಂಕಿ ಹಚ್ಚೋದು ಬೇಡ: ರಾಮಲಿಂಗಾರೆಡ್ಡಿ

ನವದೆಹಲಿ:ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಪ್ರೇರಿತ ಬಂಧನ ಖಂಡಿಸೋಣ, ಪ್ರತಿಭಟಿಸೋಣ. ಆದರೆ ಬಸ್ಸುಗಳಿಗೆ ಬೆಂಕಿ ಹಚ್ಚುವ, ಸರ್ಕಾರದ ಆಸ್ತಿ ಹಾಳು ಮಾಡುವ ಕೆಲಸ ಮಾಡುವುದು ಬೇಡ. ನಾವೆಲ್ಲರೂ ಈಗ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಹೇಳಿದರು.

ಮೈಸೂರಿನ ಗಾಂಧಿ ಚೌಕದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರನ್ನು ಉದ್ದೇಶಿಸಿ ಸಿದ್ದರಾಮಯ್ಯ ಮಾತನಾಡಿದರು. (ಪ್ರಜಾವಾಣಿ ಚಿತ್ರ: ಸವಿತಾ ಬಿ.ಆರ್.)
ಮೈಸೂರಿನ ಗಾಂಧಿ ಚೌಕದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರನ್ನು ಉದ್ದೇಶಿಸಿ ಸಿದ್ದರಾಮಯ್ಯ ಮಾತನಾಡಿದರು. (ಪ್ರಜಾವಾಣಿ ಚಿತ್ರ: ಸವಿತಾ ಬಿ.ಆರ್.)

11.46– ಐಟಿ, ಇಡಿ, ಸಿಬಿಐಗಳೆಂಬ ಗುಮ್ಮಗಳು: ಸಿದ್ದರಾಮಯ್ಯ ಲೇವಡಿ

ಮೈಸೂರು: ಬಿಜೆಪಿ ಸರ್ಕಾರ ಅಧಿಕಾರ ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ಮುಖಂಡರನ್ನು ಮಟ್ಟ ಹಾಕಲು ಮುಂದಾಗಿದೆ. ಬಿಜೆಪಿ ಆಡಳಿತದಲ್ಲಿ ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆ (ಐಟಿ) ಮತ್ತು ಸಿಬಿಐಗಳು ಮಕ್ಕಳನ್ನು ಹೆದರಿಸುವ ‘ಗುಮ್ಮ‘ಗಳಾಗಿವೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

ಇಂಥ ಗುಮ್ಮಗಳಿಗೆ ಡಿ.ಕೆ.ಶಿವಕುಮಾರ್ ಸೊಪ್ಪು ಹಾಕಲಿಲ್ಲ ಹೀಗಾಗಿಯೇ ಅವರನ್ನು ಬಂಧಿಸಲು ಬಿಜೆಪಿ ಸರ್ಕಾರ ತಂತ್ರ ಹೆಣೆದಿದೆ. ಇದು ಪ್ರಜಾಪ್ರಭುತ್ವ. ಇಲ್ಲಿ ಯಾರ ಹಕ್ಕನ್ನೂ ಕಸಿದುಕೊಳ್ಳಲು ಆಗುವುದಿಲ್ಲ. ಜನರು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹರಿಹಾಯ್ದರು.

ರಾಮನಗರ ಜಿಲ್ಲೆಯಲ್ಲಿ ಸುಟ್ಟು ಕರಕಲಾಗಿರುವ ಬಸ್
ರಾಮನಗರ ಜಿಲ್ಲೆಯಲ್ಲಿ ಸುಟ್ಟು ಕರಕಲಾಗಿರುವ ಬಸ್

11.36– ರಾಮನಗರ ಜಿಲ್ಲೆಯಲ್ಲಿ11 ಬಸ್‌ಗಳಿಗೆ ಹಾನಿ

ಕನಕಪುರ ತಾಲೂಕಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಈವರೆಗೆ ಒಟ್ಟು 11 ಕೆಎಸ್ಅರ್‌ಟಿಸಿ ಬಸ್‌ಗಳುಜಖಂಗೊಂಡಿವೆ.

ಕನಕಪುರ ಡಿಪೊಗೆ ಸೇರಿದ ಆರು ಬಸ್ ಗೆ ಹಾನಿಯಾಗಿದೆ. ಒಂದು ಸುಟ್ಟುಹೋಗಿದೆ. ಮಳವಳ್ಳಿ ಡಿಪೊದ ಒಂದು, ಚನ್ನಪಟ್ಟಣ ಡಿಪೊದ ಎರಡುಹಾಗೂಹಾರೋಹಳ್ಳಿ ಡಿಪೊದಎರಡು ಬಸ್‌ಗಳಿಗೆ ಹಾನಿಯಾಗಿದೆ.

11.33– ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ಮೈಸೂರಿ‌ನ ಮಹಾತ್ಮ ಗಾಂಧಿ ಚೌಕದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬುಧವಾರ ಮುಂಜಾನೆಪ್ರತಿಭಟನೆ ಆರಂಭಿಸಿದರು.

11.26–ಮಂಗಳೂರಿನಲ್ಲಿ ಹೆಚ್ಚಿದ ಬಂದೋಬಸ್ತ್

ಡಿ.ಕೆ. ಶಿವಕುಮಾರ ಅವರ ಬಂಧನ ವಿರೋಧಿಸಿ ರಾಜ್ಯದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಮಂಗಳೂರಿನಲ್ಲಿಯೂ ಪೊಲೀಸ್ ಬಂದೋಬಸ್ತ ಮಾಡಲಾಗಿದೆ. ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಿಗ್ಗೆ ಬಸ್ ಗಳಿಗೆ ಕಲ್ಲು ತೂರಲಾಗಿದೆ. ಇದರಿಂದಾಗಿ ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ನಗರದಲ್ಲಿ ಪರಿಸ್ಥಿತಿ‌ ಶಾಂತವಾಗಿದ್ದು, ಯಾವುದೇ ತೊಂದರೆ ಇಲ್ಲ. ಈಗಾಗಲೇ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ‌ ವಹಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ತಿಳಿಸಿದ್ದಾರೆ.

11.20–ಕನಕಪುರದಲ್ಲಿ ಡಿಕೆಶಿ ಅಭಿಮಾನಿಗಳಿಂದ ಕೇಶಮುಂಡನ

11.04– ಅಣ್ಣನಿಗೆ ಜಾಮೀನು ಕೊಡಿಸುವುದು ಮೊದಲ ಆದ್ಯತೆ: ಡಿ.ಕೆ.ಸುರೇಶ್

ಮುಂದಿನ ನಡೆಯ ಬಗ್ಗೆ ವಕೀಲರ ಜೊತೆಗೆ ಸಮಾಲೋಚನೆ ನಡೆಸುತ್ತಿದ್ದೇವೆ. ಆದಷ್ಟೂ ಬೇಗ ಜಾಮೀನು ಪಡೆದುಕೊಳ್ಳುವುದು ನಮ್ಮ ಮೊದಲ ಆದ್ಯತೆ ಎಂದು ದೆಹಲಿಯಲ್ಲಿ ಡಿ.ಕೆ.ಸುರೇಶ್ ಹೇಳಿದ್ದಾರೆ.

11.00– ಬಿಜೆಪಿಯಿಂದ ಸೂಚನೆ ಪಡೆಯುತ್ತಿರುವ ಅಧಿಕಾರಿಗಳು: ಡಿ.ಕೆ.ಸುರೇಶ್ ಆರೋಪ

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರತಿ ಹಂತದಲ್ಲಿಯೂ ಬಿಜೆಪಿಯ ಉನ್ನತ ನಾಯಕತ್ವದಿಂದ ಸೂಚನೆ ಪಡೆಯುತ್ತಿದ್ದಾರೆ ಎಂದು ಕನಕಪುರ ಕ್ಷೇತ್ರದ ಕಾಂಗ್ರೆಸ್ ಸಂಸದ ಮತ್ತು ಡಿ.ಕೆ.ಶಿವಕುಮಾರ್ ಸೋದರ ಡಿ.ಕೆ.ಸುರೇಶ್ ದೆಹಲಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

10.57– ಅಣ್ಣನ ಭೇಟಿಗೆ ಅವಕಾಶ ಸಿಗಲಿಲ್ಲ: ಡಿ.ಕೆ.ಸುರೇಶ್

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮತ್ತು ಲೋಹಿಯಾ ಆಸ್ಪತ್ರೆಯ ಸಿಬ್ಬಂದಿ ಅಣ್ಣನ ಭೇಟಿಗೆ ಅವಕಾಶ ನೀಡಲಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ದೆಹಲಿಯಲ್ಲಿ ಮಾಧ್ಯಮಗಳ ಎದುರು ಅಲವತ್ತುಕೊಂಡರು.

10.53– ಆರ್‌ಎಂಎಲ್ ಆಸ್ಪತ್ರೆ ಸುತ್ತ ಸಿಆರ್‌ಪಿಎಫ್ ನಿಯೋಜನೆ

ಜಾರಿ ನಿರ್ದೇಶನಾಲಯ ವಶದಲ್ಲಿರುವ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್‌ ನವದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭದ್ರತೆಗೆಕೇಂದ್ರೀಯ ಸಶಸ್ತ್ರ ಮೀಸಲು ಪಡೆ (ಸಿಆರ್‌ಪಿಎಫ್) ನಿಯೋಜಿಸಲಾಗಿದೆ.

ಕನಕಪುರ ರೇಷ್ಮೆ ಮಾರುಕಟ್ಟೆ
ಕನಕಪುರ ರೇಷ್ಮೆ ಮಾರುಕಟ್ಟೆ

10.47– ರೇಷ್ಮೆ ಮಾರುಕಟ್ಟೆವಹಿವಾಟು ಬಂದ್

ಕನಕಪುರ ರೇಷ್ಮೆಗೂಡು ಮಾರುಕಟ್ಟೆಗೂ ಬಂದ್ ಬಿಸಿ ತಟ್ಟಿದ್ದು, ವಹಿವಾಟು ಸ್ಥಗಿತಗೊಂಡಿದೆ. ಬೆಳಿಗ್ಗೆ ಹರಾಜು ಪ್ರಕ್ರಿಯೆ ಆರಂಭ ಆಗಬೇಕಿತ್ತು. ಆದರೆ ಈವರೆಗೆ ಹರಾಜು ನಡೆದಿಲ್ಲ‌. ಇದರಿಂದ ಗೂಡಿನ ತೂಕ ಕಡಿಮೆ ಆಗಲಿದ್ದು, ರೈತರು‌ ನಷ್ಟ ಅನುಭವಿಸಲಿದ್ದಾರೆ. ಬೆಲೆಯೂ ಕುಸಿಯುವ ಸಾಧ್ಯತೆ‌ ಇದೆ.

10.43– ಶಿಕ್ಷಕರ ದಿನಾಚರಣೆ ಮುಂದೂಡಿಕೆ

ಡಿಕೆಶಿ ಬಂಧನ ಖಂಡಿಸಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿಜಿಲ್ಲೆಯಲ್ಲಿ ಇದೇ 5ರಂದು ನಡೆಯಬೇಕಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು‌ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

10.40–ಬಿಜೆಪಿ ಕಚೇರಿ ಮುಂದೆ ಬಿಗಿ ಭದ್ರತೆ

ಡಿ.ಕೆ. ಶಿವಕುಮಾರ್ ಬಂಧನದ ಬೆನ್ನಲ್ಲೇ ಬೆಂಗಳೂರಿನಬಿಜೆಪಿ ಕಚೇರಿ ಮುಂದೆ ಡಿಸಿಪಿ ಶಶಿಕುಮಾರ್ ನೇತೃತ್ವದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಬಿಜೆಪಿ‌ ಕಚೇರಿ ಸುತ್ತ ಬ್ಯಾರಿಕೇಡ್ ಹಾಕಲಾಗಿದೆ. ಇಬ್ಬರು ಎಸಿಪಿ, 5 ಇನ್ಸ್ಪೆಕ್ಟರ್, 15 ಎಸ್ ಐ ಹಾಗೂ 200 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಎರಡು ಕೆಎಸ್ಆರ್‌ಪಿ ಹಾಗೂ ಒಂದು ಅಗ್ನಿಶಾಮಕ ದಳ ವಾಹನ ಸ್ಥಳದಲ್ಲಿ‌ದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರಿಂದ ಬಿಗಿ ಬಂದೋಬಸ್ತ್ ಮಾಡಲಾಗಿದೆ.

10.03–ಅರೆಸ್ಟ್ ಮಾಡಿದ್ದು ಕಾನೂನು ಪ್ರಕಾರ ತಪ್ಪು: ಸಿದ್ದರಾಮಯ್ಯ

ಸಮನ್ಸ್‌ ಕೊಟ್ಟು, ವಿಚಾರಣೆಗೆ ಹಾಜರಾಗಲಿಲ್ಲ ಎಂದಾಗ ಬಂಧಿಸುವುದು ಸರಿ. ಆದರೆ ಡಿ.ಕೆ.ಶಿವಕುಮಾರ್ ಸಮನ್ಸ್‌ಗೆ ಗೌರವಕೊಟ್ಟು ವಿಚಾರಣೆಗೆ ಹಾಜರಾಗಿದ್ದಾರೆ. ಅವರನ್ನು ಹೇಗೆ ಬಂಧಿಸಿದಿರಿ? ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಸಾಕ್ಷಿ ನಾಶ ಮಾಡುವ, ತಲೆಮರೆಸಿಕೊಳ್ಳುವ ಅಪರಾಧಿಗಳನ್ನು ಬಂಧಿಸಲು ಅವಕಾಶವಿದೆ. ಆದರೆ ಶಿವಕುಮಾರ್ ಸಚಿವರಾಗಿದ್ದವರು. ಅವರನ್ನು ಉದ್ದೇಶಪೂರ್ವಕವಾಗಿ ದಸ್ತಗಿರಿ ಮಾಡಲಾಗಿದೆ. ಚಿದಂಬರಂ ಅವರಿಗೂ ಹೀಗೆಯೇ ಮಾಡಲಾಗಿತ್ತು. ಜನರು ಎಲ್ಲವನ್ನೂ ನೋಡುತ್ತಿದ್ದಾರೆ. ತಕ್ಕ ಪಾಠ ಕಲಿಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

10.00– ಡಿಕೆಶಿ ವಿರುದ್ಧ ಬಿಜೆಪಿ ಸೇಡಿನ ರಾಜಕಾರಣ: ಸಿದ್ದರಾಮಯ್ಯ

‘ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ. ನ್ಯಾಯಾಲಯದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ನ್ಯಾಯ ಸಿಗಲಿದೆ. ಕಾಂಗ್ರೆಸ್ ಪಕ್ಷ ಮತ್ತು ಕಾರ್ಯಕರ್ತರ ಬೆಂಬಲ ಶಿವಕುಮಾರ್ ಅವರಿಗೆ ಇದೆ.ಕಾನೂನು ಹೋರಾಟ ಮುಂದುವರಿಸುತ್ತೇವೆ’ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದರು.

ತೋಟಹಳ್ಳಿ ಬಳಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ತೋಟಹಳ್ಳಿ ಬಳಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

9.43–ರಸ್ತೆ ಮಧ್ಯೆ ಗಣೇಶಮೂರ್ತಿ ಇಟ್ಟು ಆಕ್ರೋಶ

ಕನಕಪುರ ತಾಲ್ಲೂಕಿನಸಾತನೂರು ಬಳಿಯ ತೋಟಹಳ್ಳಿ ಬಳಿ ಕಾಂಗ್ರೆಸ್ ಕಾರ್ಯಕರ್ತರು. ಮೈಸೂರು ಕನಕಪುರದ ಹೆದ್ದಾರಿ ಮಧ್ಯದಲ್ಲಿ‌ ಗಣೇಶಮೂರ್ತಿ ಇಟ್ಟು ಪ್ರತಿಭಟನೆ ನಡೆಸಿದರು.

ರಾಮನಗರ ಬಸ್‌ ನಿಲ್ದಾಣದಲ್ಲಿ ಬಸ್‌ಗಳಿಗೆ ಕಾದು ನಿಂತಿರುವ ಪ್ರಯಾಣಿಕರು
ರಾಮನಗರ ಬಸ್‌ ನಿಲ್ದಾಣದಲ್ಲಿ ಬಸ್‌ಗಳಿಗೆ ಕಾದು ನಿಂತಿರುವ ಪ್ರಯಾಣಿಕರು

9.40– ಕನಕಪುರಕ್ಕೆ ಐಜಿಪಿ ಶರತ್ ಚಂದ್ರ ಭೇಟಿ. ಭದ್ರತಾ‌ ವ್ಯವಸ್ಥೆ ಪರಿಶೀಲನೆ

9.37– ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ರಾತ್ರಿ ಕಳೆದ ಡಿಕೆಶಿ

9.12– ಐಜೂರು ವೃತ್ತದಲ್ಲಿ ಟೈರ್‌ಗಳಿಗೆ ಬೆಂಕಿ

ರಾಮನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ತೀವ್ರವಾಗಿದೆ. ನಾಲ್ಕಾರು ಟೈರುಗಳಿಗೆ ಬೆಂಕಿ ಹಚ್ಚಲಾಗಿದ್ದು, ದಟ್ಟ ಹೊಗೆ ಆವರಿಸಿದೆ. ಕ್ಷಿಪ್ರ ಕಾರ್ಯಪಡೆ, ನೂರಾರು ಪೊಲೀಸರು ಅಸಹಾಯಕರಾಗಿ ನಿಂತಿದ್ದಾರೆ

ಕನಕಪುರದಲ್ಲಿ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.
ಕನಕಪುರದಲ್ಲಿ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.

9.09– ಕನಕಪುರದಲ್ಲಿ ಪ್ರತಿಭಟನೆ, ಪೊಲೀಸ್ ಬಂದೋಬಸ್ತ್

ಡಿಕೆಶಿ ಅವರ ಸ್ವ ಗ್ರಾಮವಾದ ದೊಡ್ಡ ಆಲಹಳ್ಳಿ ಸಮೀಪದ‌ ಚುಂಚಿ‌ ಕಾಲೊನಿ ಬಳಿ‌ ದುಷ್ಕರ್ಮಿಗಳು ಮಂಗಳವಾರ ಮಧ್ಯರಾತ್ರಿ ಬಸ್ ಗೆ ಬೆಂಕಿ‌ ಇಟ್ಟಿದ್ದು, ವಾಹನ ಸುಟ್ಟು ಕರಕಲಾಗಿದೆ.
ಡಿಕೆಶಿ ಅವರ ಸ್ವ ಗ್ರಾಮವಾದ ದೊಡ್ಡ ಆಲಹಳ್ಳಿ ಸಮೀಪದ‌ ಚುಂಚಿ‌ ಕಾಲೊನಿ ಬಳಿ‌ ದುಷ್ಕರ್ಮಿಗಳು ಮಂಗಳವಾರ ಮಧ್ಯರಾತ್ರಿ ಬಸ್ ಗೆ ಬೆಂಕಿ‌ ಇಟ್ಟಿದ್ದು, ವಾಹನ ಸುಟ್ಟು ಕರಕಲಾಗಿದೆ.

8.30–ರಾಮನಗರದಲ್ಲಿ ಬಸ್‌ಗೆ ಬೆಂಕಿ: ಅಭಿಮಾನಿಗಳಿಂದ ಪ್ರತಿಭಟನೆ

.ಕೆ. ಶಿವಕುಮಾರ್ ಬಂಧನ‌ ವಿರೋಧಿಸಿ ಬುಧವಾರ ಮುಂಜಾನೆಯಿಂದ ಜಿಲ್ಲೆಯಾದ್ಯಂತ ಪ್ರತಿಭಟನೆಗಳು ಆರಂಭವಾಗಿವೆ. ರಾಮನಗರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಬೃಹತ್ ಪ್ರತಿಭಟನೆಗೆ ಸಜ್ಜಾಗುತ್ತಿದ್ದು, ಬೆಳಗ್ಗೆ ಒಂಭತ್ತರ ನಂತರ ಬೆಂಗಳೂರು- ಮೈಸೂರು ಹೆದ್ದಾರಿ ಬಂದ್ ಆಗುವ ಸಾಧ್ಯತೆ ಇದೆ.

ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ, ಶಾಲೆ ಕಾಲೇಜುಗಳಿಗೆ ಬುಧವಾರ ರಜೆ ಘೋಷಿಸಿ ಜಿಲ್ಲಾಧಿಕಾರಿ ಅರ್ಚನಾ ಆದೇಶಿಸಿದ್ದಾರೆ.

ಜಿಲ್ಲಾ ಕೇಂದ್ರವೂ ಸೇರಿದಂತೆ ಹಲವು ತಾಲ್ಲೂಕು ಕೇಂದ್ರಗಳಲ್ಲಿಅಘೋಷಿತ ಬಂದ್ ವಾತಾವರಣ ಇದೆ. ಕನಕಪುರದಲ್ಲಿ ಬೆಳಗ್ಗೆಯಿಂದಲೇ ಪ್ರತಿಭಟನೆಗಳು ಆರಂಭವಾಗಿವೆ. ತಡರಾತ್ರಿ‌ ಕನಕಪುರ ಬಸ್ ನಿಲ್ದಾಣದಲ್ಲಿ ದುಷ್ಕರ್ಮಿಗಳು ಬಸ್‌ಗೆ ಕಲ್ಲುತೂರಿ ಬೆಂಕಿ ಹಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಕನಕಪುರ ಹಾಗೂ ರಾಮನಗರದ ಪ್ರಮುಖ ವೃತ್ತಗಳಲ್ಲಿ ಕ್ಷಿಪ್ರ ಕಾರ್ಯಪಡೆಯನ್ನು ನಿಯೋಜಿಸಲಾಗಿದೆ. ರಾಮನಗರ ಎಸ್‌ಪಿ ಅನೂಪ್ ಶೆಟ್ಟಿ, ಚಿಕ್ಕಬಳ್ಳಾಪುರ ಎಸ್‌ಪಿಸಂತೋಷ್ ಬಾಬು ನೇತೃತ್ವದಲ್ಲಿ ಪೊಲೀಸರು ಹೆಚ್ಚಿನ ಭದ್ರತೆ ಕಲ್ಪಿಸಿದ್ದಾರೆ.

ಕನಕಪುರ ತಾಲ್ಲೂಕಿನ ಸಾತನೂರಿನಲ್ಲಿ ಡಿಕೆಶಿ ಬೆಂಬಲಿಗರು ರಸ್ತೆ ಮಧ್ಯೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.
ಕನಕಪುರ ತಾಲ್ಲೂಕಿನ ಸಾತನೂರಿನಲ್ಲಿ ಡಿಕೆಶಿ ಬೆಂಬಲಿಗರು ರಸ್ತೆ ಮಧ್ಯೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.

ಡಿಕೆಶಿ ಅವರ ಸ್ವ ಗ್ರಾಮವಾದ ದೊಡ್ಡ ಆಲಹಳ್ಳಿ ಸಮೀಪದ‌ ಚುಂಚಿ‌ ಕಾಲೊನಿ ಬಳಿ‌ ದುಷ್ಕರ್ಮಿಗಳು ಮಂಗಳವಾರ ಮಧ್ಯರಾತ್ರಿ ಬಸ್ ಗೆ ಬೆಂಕಿ‌ ಇಟ್ಟಿದ್ದು, ವಾಹನ ಸುಟ್ಟು ಕರಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT