ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧೀಕರಿಸಿದ ಚರಂಡಿ ನೀರು ಉದ್ಯಾನ, ಕೆರೆ ತುಂಬಿಸಲು ಬಳಕೆ: ಬೈರತಿ ಬಸವರಾಜ

Last Updated 24 ಜೂನ್ 2020, 4:21 IST
ಅಕ್ಷರ ಗಾತ್ರ

ಕಲಬುರ್ಗಿ: ಶುದ್ಧೀಕರಿಸಿದ‌‌ ಚರಂಡಿ ನೀರನ್ನು ನಗರದಲ್ಲಿರುವ ಉದ್ಯಾನಗಳು ಹಾಗೂ ಕೆರೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ತಿಳಿಸಿದರು.

ನಗರದ ಸ್ವಚ್ಛತೆ, ಕುಡಿಯುವ ನೀರು ಪೂರೈಕೆ, ಕೊಳಚೆ ನೀರು ಸಂಸ್ಕರಣ ಘಟಕಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಶುದ್ಧೀಕರಿಸಿದ ನೀರನ್ನು ಮರಳಿ ಭೀಮಾ ನದಿಗೆ ಬಿಡುವ ಬಿಡಲಾಗುತ್ತಿತ್ತು. ಅದಕ್ಕೆ ನಾಗರಿಕರೂ ಬೇಸರ ವ್ಯಕ್ತಪಡಿಸಿದ್ದರು. ಹೀಗಾಗಿ, ಉದ್ಯಾನಗಳ ನಿರ್ವಹಣೆಗೆ ಬಳಸಲಾಗುವುದು ಎಂದರು.

₹ 150 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ: ನಗರದಲ್ಲಿ ಹದಗೆಟ್ಟಿರುವ ಆಳಂದ ರಿಂಗ್ ರಸ್ತೆ, ತಾಜ ಸುಲ್ತಾನಪುರ ರಸ್ತೆ ಸೇರಿದಂತೆ ‌ದುಃಸ್ಥಿತಿಯಲ್ಲಿ ರಸ್ತೆಗಳ ಅಭಿವೃದ್ಧಿಗೆ‌ ₹ 150 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ ಎಂದರು.

ಸ್ಮಾರ್ಟ್ ಸಿಟಿ ಘೋಷಣೆ ಶೀಘ್ರ: ಕಲಬುರ್ಗಿ ಸೇರಿದಂತೆ ಇನ್ನೂ ನಾಲ್ಕು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಬಂಧ ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದೇನೆ. ಕೋವಿಡ್ ನಿಂದಾಗಿ ದೆಹಲಿ ಪ್ರವಾಸ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದರು.

ಕಲಬುರ್ಗಿ ನಗರಾಭಿವೃದ್ಧಿ ‌ಪ್ರಾಧಿಕಾರದ ಅಧ್ಯಕ್ಷರನ್ನು ನೇಮಕ ‌ಮಾಡುವ ಬಗ್ಗೆ ‌ಪ್ರಸ್ತಾವ ಬಂದಿಲ್ಲ. ಶಾಸಕರು ಹೆಸರನ್ನು ‌ಅಂತಿಮಗೊಳಿಸಿ ಕಳಿಸಿದರೆ ನಾಳೆಯೇ ನೇಮಕ ಮಾಡುತ್ತೇವೆ ಎಂದು‌ ಹೇಳಿದರು.

ಪತ್ರಕರ್ತರಿಗೆ ನಿವೇಶನದಲ್ಲಿ ಶೇ 5 ಮೀಸಲು: ಪತ್ರಕರ್ತರಿಗೆ ನಗರಾಭಿವೃದ್ಧಿ ‌ಪ್ರಾಧಿಕಾರದಿಂದ ಅಭಿವೃದ್ಧಿಪಡಿಸುವ ನಿವೇಶನಗಳ ಪೈಕಿ ಶೇ 5ರಷ್ಟನ್ನು ಪತ್ರಕರ್ತರಿಗೆ ಮೀಸಲಿಡಲು ತೀರ್ಮಾನಿಸಲಾಗಿದೆ. ಈ ಸಂಬಂಧ ‌ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೂ ಸಮ್ಮತಿಸಿದ್ದಾರೆ ಎಂದರು.

ಶಾಸಕ ದತ್ತಾತ್ರೇಯ ‌ಪಾಟೀಲ ರೇವೂರ, ಮಹಾನಗರ ಪಾಲಿಕೆ ಆಯುಕ್ತ ‌ರಾಹುಲ್ ಪಾಂಡ್ವೆ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT