ಮಂಗಳವಾರ, ಮೇ 26, 2020
27 °C

ದೇಶೀಯ ಪ್ರಯಾಣಿಕರಿಗೂ ಕ್ವಾರಂಟೈನ್ ವಿನಾಯಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿದೇಶಿ ಪ್ರಯಾಣಿಕರಿಗೆ ನೀಡಿದ ಮಾದರಿಯಲ್ಲಿಯೇ ಗರ್ಭಿಣಿಯರು ಸೇರಿದಂತೆ ಕೆಲವೊಂದು ವರ್ಗದ ದೇಶೀಯ ಪ್ರಯಾಣಿಕರಿಗೂ ಆರೋಗ್ಯ ಇಲಾಖೆಯು ಕ್ವಾರಂಟೈನ್ ವಿನಾಯತಿ ನೀಡಿದೆ. 

ಈ ಸಂಬಂಧ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರು  ಜಿಲ್ಲಾಧಿಕಾರಿಗಳು ಹಾಗೂ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ವಿದೇಶಿ ಪ್ರಯಾಣಿಕರಿಗೆ ನೀಡಿದ ವಿನಾಯಿತಿಯನ್ನು ನಮಗೆ ಏಕೆ ನೀಡುತ್ತಿಲ್ಲ ಎಂದು ವಿವಿಧ ರಾಜ್ಯಗಳಿಂದ ರೈಲು ಹಾಗೂ ಬಸ್‌ಗಳಲ್ಲಿ ರಾಜ್ಯಕ್ಕೆ ವಾಪಸ್ಸಾದವರು ಪ್ರಶ್ನಿಸಿದರು. ಆದ್ದರಿಂದ ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು, 80 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ ಕ್ಯಾನ್ಸರ್‌ ನಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕ್ವಾರಂಟೈನ್‌ನಲ್ಲಿ ವಿನಾಯಿತಿ ನೀಡಲಾಗಿದೆ. ಅವರಲ್ಲಿ ಸೋಂಕಿನ ಲಕ್ಷಣಗಳು ಇಲ್ಲದಿದ್ದಲ್ಲಿ ಮನೆಯಲ್ಲಿಯೇ 14 ದಿನಗಳು ಕ್ವಾರಂಟೈನ್‌ಗೆ ಒಳಗಾಗಲು ಆರೋಗ್ಯ ಇಲಾಖೆ ಅವಕಾಶ ನೀಡಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು