ಸೋಮವಾರ, ಮೇ 25, 2020
27 °C

ರಘು ಕಾರ್ನಾಡ್‌ ಕೃತಿಗೆ ವಿಂಡ್ಹಮ್‌ ಕ್ಯಾಂಬೆಲ್ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪತ್ರಕರ್ತ ಹಾಗೂ ಲೇಖಕ ರಘು ಕಾರ್ನಾಡ್ ಅವರ ‘ಫಾರ್ದೆಸ್ಟ್ ಫೀಲ್ಡ್: ಆ್ಯನ್ ಇಂಡಿಯನ್ ಸ್ಟೋರಿ ಆಫ್ ದಿ ಸೆಕೆಂಡ್ ವರ್ಲ್ಡ್ ವಾರ್’ ಕೃತಿ, ಯೇಲ್ ವಿಶ್ವವಿದ್ಯಾಲಯ ನೀಡುವ ಈ ವರ್ಷದ ಪ್ರತಿಷ್ಠಿತ ವಿಂಡ್ಹಮ್‌ ಕ್ಯಾಂಬೆಲ್ ಪ್ರಶಸ್ತಿಗೆ ಭಾಜನವಾಗಿದೆ. 

ರಘು ಸೇರಿ ವಿಶ್ವದಾದ್ಯಂತ ಒಟ್ಟು 8 ಲೇಖಕರು ಈ ಬಾರಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪ್ರತಿ ಲೇಖಕರಿಗೆ ತಲಾ ₹1.14 ಕೋಟಿ ಬಹುಮಾನ ನೀಡಲಾಗುತ್ತದೆ. 

2015ರಲ್ಲಿ ಪ್ರಕಟವಾದ ಈ ಕೃತಿಯಲ್ಲಿ, 2ನೇ ಜಾಗತಿಕ ಯುದ್ಧದ ವೇಳೆ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವ ಒಂದೇ ಕುಟುಂಬದ ಮೂವರ ಕಥೆ ಕಟ್ಟಿಕೊಡಲಾಗಿದೆ. 

‘ಕಾಲ್ಪನಿಕತೆ ಹಾಗೂ ವಿಚಲಿತಗೊಳಿಸುವ ರಾಷ್ಟ್ರೀಯ ಮತ್ತು ವಸಾಹತುಶಾಹಿ ಇತಿಹಾಸದೊಂದಿಗೆ ಪುರಾತತ್ವ ಸಂಶೋಧನೆಯನ್ನು ಸೇರಿಸಿ ರಚಿಸಿರುವ ಈ ಕೃತಿ ಮರೆಯಲಾಗದ ಶ್ರೇಷ್ಠಮಟ್ಟದ್ದು’ ಎಂದು ಪ್ರಶಸ್ತಿ ಸಮಿತಿ ಲೇಖಕರನ್ನು ಪ್ರಶಂಸಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.