ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲು

ಜರ್ಮನಿಯಿಂದ ಮಹಿಳೆ ಬಂದು ಎರಡು ವಾರಗಳಾದರೂ ಮಾಹಿತಿ ನೀಡದ ಆರೋಪ
Last Updated 3 ಏಪ್ರಿಲ್ 2020, 20:52 IST
ಅಕ್ಷರ ಗಾತ್ರ

ರಾಯಚೂರು: ವಿದೇಶದಿಂದ ಮನೆಗೆ ಬಂದವರ ಮಾಹಿತಿ ನೀಡದ ಹಾಗೂ ಹೋಂ ಕ್ವಾರಂಟೈನ್‌ ಪಾಲಿಸದ ಆರೋಪದ ಮೇರೆಗೆ ಯರಮರಸ್‌ ಶಾಖೋತ್ಪನ್ನ ವಿದ್ಯುತ್‌ ಸ್ಥಾವರದ (ವೈಟಿಪಿಎಸ್‌) ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಎಸ್‌.ಆರ್‌.ಕಬಾಡೆ ವಿರುದ್ಧ ಶಕ್ತಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

‘ಎಸ್‌.ಆರ್‌.ಕಬಾಡೆ, ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ಆರ್‌ಟಿಪಿಎಸ್‌)ದ ಅಕೌಂಟ್‌ ಆಫೀಸರ್‌ ಅನುಪಮಾ ಕಬಾಡೆ, ಅವರ ಪುತ್ರ ಪ್ರೀತಮ್‌ ಮತ್ತು ಜರ್ಮನಿಯಿಂದ ಬಂದಿರುವ ಪ್ರಿತಮ್‌ ಅವರ ಸ್ನೇಹಿತೆ ಡಾ. ಚಿನ್ಮಯಿ ವಿರುದ್ಧ ಕೋವಿಡ್–19 ವಿಶೇಷ ಮ್ಯಾಜಿಸ್ಟ್ರೇಟ್ ಅನಿಲಕುಮಾರ ಗೋಖಲೆ ಗುರುವಾರ ನೀಡಿದ ದೂರು ಆಧರಿಸಿ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಡಾ.ಚಿನ್ಮಯಿ ಅವರು ಜರ್ಮನಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮಾರ್ಚ್‌ 14ರಂದು ಬಂದಿದ್ದರು. ಮಾರ್ಚ್‌ 29ರವರೆಗೂ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಅವರ ಕೈ ಮೇಲೆ ಮುದ್ರೆ ಹಾಕಲಾಗಿತ್ತು. ಇದನ್ನು ಅವರು ಉಲ್ಲಂಘಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT