ಸೋಮವಾರ, ಅಕ್ಟೋಬರ್ 21, 2019
21 °C

ಪೊಲೀಸ್‌ ದಾಳಿ: ಪರಪ್ಪನ ಅಗ್ರಹಾರದಲ್ಲಿ 37 ಚಾಕು, ಮೊಬೈಲ್‌, ಗಾಂಜಾ ವಶ

Published:
Updated:
Prajavani

ಬೆಂಗಳೂರು: ನಗರದಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಗರ ಅಪರಾಧ ವಿಭಾಗದ ಪೊಲೀಸರು ಬುಧವಾರ ದಾಳಿ ನಡೆಸಿದ್ದು, ಚಾಕು, ಮೊಬೈಲ್‌ ಹಾಗೂ ಸಿಮ್‌ಗಳು ಮತ್ತು ಗಾಂಜಾ ವಶಕ್ಕೆ ಪಡೆದಿದ್ದಾರೆ.

ದಾಳಿ ವೇಳೆ 37 ಚಾಕುಗಳು ಮತ್ತು ಡ್ರ್ಯಾಗರ್‌, ಗಾಂಜಾ ಹಾಗೂ ಗಾಂಜಾ ಮತ್ತು ಹೊಗೆ ಸೊಪ್ಪು ಸೇದಲು ಬಳಸುವ ’ಚುಟ್ಟಾ‘ಗಳು, ಮೊಬೈಲ್‌ಗಳು ಮತ್ತು ಸಿಮ್‌ ಕಾರ್ಡ್‌ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿದ್ದಾಗಿ ಎಎನ್‌ಐ ಟ್ವೀಟ್‌ ಮಾಡಿದೆ.

 

 

 

Post Comments (+)