ಶುಕ್ರವಾರ, ಫೆಬ್ರವರಿ 26, 2021
19 °C

ಚಿಕ್ಕಮಗಳೂರು, ಕೊಡಗಿನಲ್ಲಿ ಮಳೆ: ರೈತರ ಮುಖದಲ್ಲಿ ಸಂತಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಬುಧವಾರ ರಾತ್ರಿ ಹದ ಮಳೆ ಸುರಿಯಿತು. ನಾಪೋಕ್ಲು, ಹೊದ್ದೂರು, ಕಕ್ಕಬ್ಬೆ, ಕೋಕೇರಿ ಭಾಗದಲ್ಲಿ ಜೋರು ಮಳೆ ಸುರಿದರೆ, ಮಡಿಕೇರಿ, ಚೇರಂಬಾಣೆ, ಯರವನಾಡು, ಉಡೋತ್‌ ಮೊಟ್ಟೆ, ಬೆಟ್ಟಗೇರಿ, ಭಾಗಮಂಡಲ, ಮೇಕೇರಿ ವ್ಯಾಪ್ತಿಯಲ್ಲಿ 10 ನಿಮಿಷಗಳ ಕಾಲ ತುಂತುರು ಮಳೆ ಸುರಿಯಿತು.

ಕೆಲವು ದಿನಗಳ ಹಿಂದಷ್ಟೇ ಜಿಲ್ಲೆಯಲ್ಲಿ ಕಾಫಿ ಕೊಯ್ಲು ಮುಗಿದಿದೆ. ಈಗ ಮಳೆ ಸುರಿದರೆ ಕಾಫಿ ಗಿಡದಲ್ಲಿ ಹೂವು ಅರಳಿ ಮುಂದಿನ ವರ್ಷದ ಫಸಲಿಗೆ ತೊಂದರೆಯಾಗಲಿದೆ. ಮಾರ್ಚ್ ಅಂತ್ಯದಲ್ಲಿ ಜೋರು ಮಳೆ ಸುರಿದರೆ ಕಾಫಿ ಬೆಳೆಗೆ ಅನುಕೂಲ ಎಂದು ರೈತರು ಹೇಳುತ್ತಾರೆ.

ಚಿಕ್ಕಮಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗುಸಹಿತ ಮಳೆ ಸುರಿಯಿತು.

ತುಂತುರುವಾಗಿ ಆರಂಭವಾದ ನಂತರ ಜೋರಾಯಿತು. ಬಿಸಿಲಿನಿಂದ ಬಸವಳಿದಿದ್ದ ಇಳೆ ಕೊಂಚ ತಂಪಾಯಿತು.

ಅಮೃತ್‌ ಯೋಜನೆ ಕಾಮಗಾರಿಗೆ ನಗರದ ವಿವಿಧೆಡೆಗಳಲ್ಲಿ ರಸ್ತೆ ಅಗೆದಿರುವ ಗುಂಡಿಗಳಲ್ಲಿ ಕೊಂಚ ನೀರು ತುಂಬಿಕೊಂಡಿತ್ತು. ತಳ್ಳುಗಾಡಿ ವ್ಯಾಪಾರಿಗಳು, ರಸ್ತೆ ಬದಿ ವ್ಯಾಪಾರಿಗಳಿಗೆ ತೊಂದರೆಯಾಯಿತು.

ಮೂಡಿಗೆರೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಬುಧವಾರ ಸಂಜೆ ಒಂದು ತಾಸಿಗೂ ಅಧಿಕ ಕಾಲ ಮಳೆ ಸುರಿಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.