ಶನಿವಾರ, ಆಗಸ್ಟ್ 24, 2019
27 °C

ಮಳೆ: ಇಂದಿನಿಂದ ‘ಆರೆಂಜ್‌ ಅಲರ್ಟ್‌’

Published:
Updated:
Prajavani

ಬೆಂಗಳೂರು: ‘ಆಗಸ್ಟ್‌ 10ರಿಂದ 12ರವರೆಗೆ ರಾಜ್ಯದಾದ್ಯಂತ 20 ಸೆಂ.ಮೀಗಿಂತ ಹೆಚ್ಚು ಮಳೆಯಾಗಲಿದೆ. ಹೀಗಾಗಿ ‘ಆರೆಂಜ್ ಅಲರ್ಟ್‌’ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್‌.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಳಗಾವಿ, ಶಿವಮೊಗ್ಗ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಶನಿವಾರ ಮಳೆ ಪ್ರಮಾಣ ಕಡಿಮೆ ಆಗಲಿದೆ. ಕರಾವಳಿ ಭಾಗದಲ್ಲಿ ಪಶ್ಚಿಮ ಹಾಗೂ ನೈರುತ್ಯ ದಿಕ್ಕಿನಿಂದ ಗಂಟೆಗೆ 40 ಕಿ.ಮೀ.ವೇಗದಲ್ಲಿ ಗಾಳಿ ಬೀಸುತ್ತಿದ್ದು, 3.1ಮೀಟರ್‌ನಷ್ಟು ಎತ್ತರದ ಅಲೆಗಳೂ ಏಳುತ್ತಿವೆ’ ಎಂದರು.

ಮಂಗಳೂರು, ಕಾರವಾರಗಳಲ್ಲಿ ಆಗಸ್ಟ್‌ 10 ಮತ್ತು 11ರಂದು ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇದೆ‌. ಹೀಗಾಗಿ ಮೀನುಗಾರರು ಕಡಲಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ’ ಎಂದವರು ತಿಳಿಸಿದರು.

ಶುಕ್ರವಾರ ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ 40 ಸೆಂ.ಮೀ.ಮಳೆಯಾಗಿದೆ. ಯಲ್ಲಾಪುರ 30, ಹುಂಚದಕಟ್ಟೆ 29, ವಿರಾಜಪೇಟೆ, ಕಳಸ 27, ಸರಗೂರು 23, ಮೂಡಿಗೆರೆ 22, ಶೃಂಗೇರಿ 21, ಕೊಪ್ಪ 20, ಮಡಿಕೇರಿ 18, ಸಾಗರ 11, ಧರ್ಮಸ್ಥಳ 9, ಹಾರಂಗಿ 7ಸೆಂ.ಮೀ. ಮಳೆಯಾಗಿದೆ.

Post Comments (+)