ಬುಧವಾರ, ಏಪ್ರಿಲ್ 1, 2020
19 °C

ಹೊನ್ನಾವರದಲ್ಲಿ ದಿಢೀರ್‌ ಮಳೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಹೊನ್ನಾವರ ಸುತ್ತಮುತ್ತ ಶನಿವಾರ ಬೆಳಿಗ್ಗೆ 11.20ರಿಂದ ಅರ್ಧ ಗಂಟೆ ಉತ್ತಮ ಮಳೆಯಾಯಿತು. ಅರ್ಧ ಗಂಟೆಯ ಅವಧಿಯಲ್ಲಿ ದಟ್ಟವಾದ ಮೋಡ ಕವಿದು, ಗುಡುಗು, ಸಿಡಿಲಿನ ಅಬ್ಬರವಿಲ್ಲದೇ ದಿಢೀರ್ ಆಗಿ ಮಳೆ ಶುರುವಾಯಿತು. 

ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ನೂತನ ಕಟ್ಟಡಕ್ಕೆ ಶನಿವಾರ ಶಂಕುಸ್ಥಾಪನೆ ಹಮ್ಮಿಕೊಳ್ಳಲಾಗಿದೆ. ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಶಂಕುಸ್ಥಾಪನೆ ಮಾಡಲಿದ್ದಾರೆ. ಮಳೆಯಿಂದಾಗಿ ಕಾರ್ಯಕ್ರಮಕ್ಕೆ ಸ್ವಲ್ಪ ಅಡಚಣೆಯಾಯಿತು. 

ಬೆಳೆಗಾರರ ಆತಂಕ: ಜಿಲ್ಲೆಯಲ್ಲಿ ಈಗ ಅಡಿಕೆ ಕೊಯ್ಲು ಮಾಡಲಾಗಿದ್ದು, ಚಾಲಿ ಅಡಿಕೆಯನ್ನು ಬೆಳೆಗಾರರು ಅಂಗಳದಲ್ಲಿ ಒಣಗಿಸುತ್ತಿದ್ದಾರೆ. ಗೇರು ಬೆಳೆಯೂ ಹಲವೆಡೆ ಈಗ ಹೂ ಬಿಡುತ್ತಿದೆ. ಇದರಿಂದ ಬೆಳೆಗೆ ತೊಂದರೆಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು