ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಶೇಖರ್ ನಿರ್ಧಾರ ಪೂರ್ವ ನಿಯೋಜಿತ ಕೃತ್ಯ: ಬಿಜೆಪಿ ಆರೋಪ

Last Updated 1 ನವೆಂಬರ್ 2018, 6:08 IST
ಅಕ್ಷರ ಗಾತ್ರ

ರಾಮನಗರ: ಚಂದ್ರಶೇಖರ್ ನಿರ್ಧಾರ ಪೂರ್ವ ನಿಯೋಜಿತ ಕೃತ್ಯ.15ದಿನಗಳ ಮುಂಚೆಯೇ ಇದೆಲ್ಲ ಪ್ಲ್ಯಾನ್ ಆಗಿತ್ತು ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಆದ್ಯಕ್ಷ ಎಂ.ವರದರಾಜೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಕಾಂಗ್ರೆಸ್ ಪರ ವಾಲಿರುವ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯನ್ನು ಒಡೆಯಲು ಈ ರೀತಿ ಮಾಡಲಾಗಿದೆ‌. ಸಿ.ಪಿ.ಯೋಗೇಶ್ವರ್ ಹಾಗೂ ಎಲ್.ಚಂದ್ರಶೇಖರ್ ನಡುವಿನ ಭಿನ್ನಾಭಿಪ್ರಾಯಗಳು ಅವರವರ ವೈಯಕ್ತಿಕ. ಅದನ್ನು ರಾಜಕೀಯಕ್ಕೆ ಸಮೀಕರಿಸಲಾಗುತ್ತಿದೆ ಎಂದು ಕಿಡಿಕಾರಿದರು.

ಕಳೆದ 22 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಉಸಿರು ಕಟ್ಟುವ ವಾತವರಣ ಇದೆ ಎಂದು ಬಿಜೆಪಿಗೆ ಬಂದಿದ್ದ ಚಂದ್ರಶೇಖರ್, ಇದೀಗ 15 ದಿನಕ್ಕೆ ಬಿಜೆಪಿಗೆ ಕೈ ಕೊಟ್ಟಿದ್ದಾರೆ.

ಈಗಾಗಲೇ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಶಾಸಕ ಸುರೇಶ್ ಗೌಡ, ಕೆ.ಶಿವರಾಮ್ ಅವರುಗಳು ಪ್ರಚಾರ ನಡೆಸಿದ್ದಾರೆ. ಆದರೆ, ಚಂದ್ರಶೇಖರ್ ಯಾರೊಬ್ಬರೂ ಪ್ರಚಾರ ನಡೆಸಿಲ್ಲ ಎಂದಿರುವುದು ಸುಳ್ಳು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮಗೆ ವ್ಯಕ್ತಿ ಮುಖ್ಯ. ಪಕ್ಷ ಮುಖ್ಯ ಅಲ್ಲ. ನಮ್ಮ ವರಿಷ್ಠರ ಮಾತಿಗೆ ನಾವು ಬದ್ದರಾಗಿದ್ದೇವೆ. ನಾವು ಬಿಜೆಪಿಗೆ ಮತ ನೀಡುತ್ತೇವೆ ಎಂದರು. ಇದು ಕಣ್ಣೋರೆಸುವ ತಂತ್ರ. ನಮ್ಮ ಬಳಿ ಏನನ್ನೂ ಹೇಳಿಲ್ಲ‌. ದುಡ್ಡಿಲ್ಲ. ಕೈ ಹಿಡಿಯಿರಿ ಎಂದಿದ್ದರೆ ನಾವು ಹೆಗಲು ಕೊಡುತ್ತಿದ್ದೆವು. ತಮ್ಮ ಮೇಲಿನ ಆರೋಪದಿಂದ ತಪ್ಪಿಸಿಕೊಳ್ಳಲು ಪ್ರಚಾರ ನಡೆಸಿಲ್ಲ ಎನ್ನುತ್ತಿದ್ದಾರೆ ಎಂದು ಆರೋಪಿಸಿದರು.

ಪಕ್ಷದ‌ ತಾಲ್ಲೂಕು ಘಟಕದ ಅಧ್ಯಕ್ಷ ಪ್ರವೀಣ್ ಗೌಡ ಮಾತನಾಡಿ, ಕಾಂಗ್ರೆಸ್ ರಾಜಕೀಯ ಹಾದರ ನಡಸುತ್ತಿದೆ ಎಂದು ಟೀಕಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT