ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮರುಪಾವತಿ ಅವಕಾಶದ ಬಗ್ಗೆ ಆರ್‌ಬಿಐ ನಿಗಾ ವಹಿಸಲಿ: ಹೈಕೋರ್ಟ್

Last Updated 11 ಜುಲೈ 2020, 15:27 IST
ಅಕ್ಷರ ಗಾತ್ರ

ಬೆಂಗಳೂರು: 'ಲಾಕ್ ಡೌನ್ ಅವಧಿಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾದವರಿಗೆ ಸಾಲ ಮರು ಪಾವತಿ ಮತ್ತು ಹೊಂದಾಣಿಕೆಗೆ ನೀಡಲಾಗಿದ್ದ ಸಾಲ ಮುಂದೂಡಿಕೆಗೆ ಅವಕಾಶ ಕಲ್ಪಿಸುವ ಮೊರಾಟೋರಿಯಂ (ಅಧಿಕೃತವಾಗಿ ಚಟುವಟಿಕೆಯ ತಾತ್ಕಾಲಿಕ ಸ್ಥಗಿತ) ಜಾರಿಯ ಕುರಿತು ಆರ್‌ಬಿಐ ನಿಗಾ ವಹಿಸಬೇಕು' ಎಂದು ಹೈಕೋರ್ಟ್ ಆದೇಶಿಸಿದೆ.

ಈ ಕುರಿತಂತೆ ನಗರದ 'ವೇಲಂಕಣಿ ಇನ್‌ಫಾರ್ಮೇಶನ್‌ ಸಿಸ್ಟಮ್ ಲಿಮಿಟೆಡ್ (ವಿಐಎಸ್ಎಲ್)' ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ.

’ಮೊರಾಟೋರಿಯಂ ಎಲ್ಲ ಹಣಕಾಸು ಸಂಸ್ಥೆಗಳು ವಿತರಿಸಿರುವ ಸಾಲ ಅಥವಾ ಮುಂಗಡಗಳಿಗೆ ಅನ್ವಯವಾಗುತ್ತದೆ. ಈ ನಿಟ್ಟಿನಲ್ಲಿ ಮಾರ್ಚ್ 27ರಂದು ಹೊರಡಿಸಿರುವ ಸುತ್ತೋಲೆ ಜಾರಿಯ ಬಗ್ಗೆ ಆರ್‌ಬಿಐ ಖುದ್ದು ನಿಗಾ ವಹಿಸಬೇಕು' ಎಂದು ಆದೇಶದಲ್ಲಿ ತಿಳಿಸಲಾಗಿದೆ.

'ಸಾಲ ನೀಡಿಕೆಯಲ್ಲಿ ಹಲವು ಬ್ಯಾಂಕುಗಳು ಒಳಗೊಂಡಿದ್ದ ಪಕ್ಷದಲ್ಲಿ, ಒಂದು ಬ್ಯಾಂಕ್ ಮೊರಾಟೋರಿಯಂ ಸೌಕರ್ಯ ವಿಸ್ತರಣೆಗೆ ಒಪ್ಪಿದ್ದರೆ ಇನ್ನೊಂದು ಬ್ಯಾಂಕ್ ಆ ಅವಕಾಶ ನಿರಾಕರಿಸುವಂತಿಲ್ಲ' ಎಂದು ನ್ಯಾಯಪೀಠ ವಿವರಿಸಿದೆ.

ಪ್ರಕರಣವೇನು?: ಎಚ್‌ಡಿಎಫ್‌ಸಿ ಬ್ಯಾಂಕ್, ಫೆಡರಲ್ ಬ್ಯಾಂಕ್ ಮತ್ತು ಆದಿತ್ಯ ಬಿರ್ಲಾ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಕಂಪನಿಗಳು ವಿಐಎಸ್ಎಲ್ ಸಂಸ್ಥೆಗೆ ಒಟ್ಟು ₹ 475 ಕೋಟಿ ಸಾಲ ನೀಡಿದ್ದವು. ಆರ್‌ಬಿಐ ನಿರ್ದೇಶನದಂತೆ ಎಚ್‌ಡಿಎಫ್‌ಸಿ ಬ್ಯಾಂಕ್ ಸಾಲ ಪಾವತಿ ಅವಧಿ ಮುಂದೂಡಿಕೆಗೆ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿತ್ತು. ಇದನ್ನು ವಿಐಎಸ್ಎಲ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT