ಮಂಗಳವಾರ, ಫೆಬ್ರವರಿ 18, 2020
25 °C

ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗಣರಾಜ್ಯೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನಸೂರೆಗೊಂಡವು.

ಪ್ರಭಾತ್ ಆರ್ಟ್ಸ್‌ ಇಂಟರ್‌ನ್ಯಾಷನಲ್ ಸಂಸ್ಥೆಯ ವಿದ್ಯಾರ್ಥಿಗಳ ‘ನೃತ್ಯ ಕಾವ್ಯ ಕಥಾ’ ಪ್ರದರ್ಶನವು ಗಮನ ಸೆಳೆಯಿತು. ಗಾಯಕಿ ಅನನ್ಯಾ ಭಟ್ ಮತ್ತು ತಂಡದವರು ದೇಶಭಕ್ತಿ ಗೀತೆಗಳನ್ನು ಸಾದರಪಡಿಸಿ ಪ್ರೇಕ್ಷಕರಿಗೆ ಮನರಂಜನೆ ಒದಗಿಸಿದರು.

ಗಂಗಾಧರಯ್ಯ ತಂಡದ ವೀರಗಾಸೆ, ವಿನೋದ ತಂಡದ ಮಹಿಳಾ ಡೊಳ್ಳುಕುಣಿತ, ಸರಿತಾ ತಂಡದ ಪಟ ಕುಣಿತ, ಮೆಹಬೂಬ ಸುಭಾನಿ ತಂಡದ ಡೋಲು ಕುಣಿತ, ಕಾರ್ತಿಕ್ ತಂಡದ ಪೂಜಾ ಕುಣಿತ, ಡಿ.ಪ್ರಮೋದ ತಂಡದ ಕಂಸಾಳೆ, ಕುಟ್ಟಪ್ಪ ತಂಡದ ಸುಗ್ಗಿ ಕುಣಿತ, ಮಹೇಂದ್ರ ತಂಡದ ಪೂಜಾ ಕುಣಿತ ಹಾಗೂ ಸತೀಶ್ ತಂಡದ ಡಮಾಮಿ ನೃತ್ಯಗಳು ಗಣರಾಜ್ಯೋತ್ಸವ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದವು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾರ್ಯಕ್ರಮವನ್ನು ವೀಕ್ಷಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು