ಮಂಗಳವಾರ, ಮಾರ್ಚ್ 2, 2021
29 °C

ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ರಾಜ್ಯ ರಾಜಕಾರಣ: ಸ್ಪೀಕರ್‌ ವಿರುದ್ಧ ಶಾಸಕರ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜೀನಾಮೆ ಸ್ವೀಕರಿಸದೆ ಸಾಂವಿಧಾನಿಕ ಕರ್ತವ್ಯಕ್ಕೆ ಸ್ಪೀಕರ್ ಚ್ಯುತಿ ತಂದಿದ್ದಾರೆ ಆರೋಪಿಸಿ ಅತೃಪ್ತ ಶಾಸಕರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದಾರೆ.

‘ವಿಧಾನಸಭಾಧ್ಯಕ್ಷ ರಮೇಶ್‌ ಕುಮಾರ್‌ ಅವರು ರಾಜೀನಾಮೆ ಸ್ವೀಕರಿಸದೆ ಸಾಂವಿಧಾನಿಕ ಕರ್ತವ್ಯಕ್ಕೆ ಸ್ಪೀಕರ್ ಚ್ಯುತಿ ತಂದಿದ್ದಾರೆ’ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ‌ ಸಲ್ಲಿಸಿದ್ದಾರೆ.

ಹಿರಿಯ ವಕೀಲ ಮುಕುಲ್‌ ರೋಹ್ಟಗಿ ಅವರು ಅತೃಪ್ತ ಶಾಸಕರ ಪರವಾಗಿ ಮುಖ್ಯನಾಯಮೂರ್ತಿ ರಂಜನ್‌ ಗೋಗೊಯಿ ನೇತೃತ್ವದ ಪೀಠಕ್ಕೆ ಅರ್ಜಿ ಸಲ್ಲಿಸಿ, ಶೀಘ್ರ ವಿಚಾರಣೆ ನಡೆಸುವಂತೆ ಮನವಿ ಮಾಡಿದರು. ರಂಜನ್ ಗೋಗೊಯಿ ನೇತೃತ್ವದ ಪೀಠ ಗುರುವಾರ ಅರ್ಜಿಯ ವಿಚಾರಣೆ‌ ನಡೆಸಲು ಸಮ್ಮತಿ ಸೂಚಿಸಿದೆ.

ಮುಂಬೈನಲ್ಲಿ ಬೀಡುಬಿಟ್ಟಿರುವ ಶಾಸಕ‌ರಾದ ಎಚ್.ವಿಶ್ವನಾಥ, ಪ್ರತಾಪಗೌಡ‌ ಪಾಟೀಲ ಸೇರಿದಂತೆ ೧೦ ಜನ ಬಂಡಾಯ ಶಾಸಕರು ಹಿರಿಯ ವಕೀಲ  ಮುಕುಲ್ ರೋಹಟ್ಗಿ ಅವರ‌ ಮೂಲಕ ಸುಪ್ರೀಂ ಕೋರ್ಟ್ ನಲ್ಲಿ ಬುಧವಾರ ಈ ಅರ್ಜಿ‌ ಸಲ್ಲಿಸಿದ್ದಾರೆ.

ನಿಯಮದ ಪ್ರಕಾರ ರಾಜೀನಾಮೆ ಸಲ್ಲಿಸಿಲ್ಲ ಎಂದು ಎಂಟು ಶಾಸಕರ ರಾಜೀನಾಮೆಯನ್ನು ಸ್ಪೀಕರ್‌ ರಮೇಶ್‌ ಕುಮಾರ್‌ ಅಂಗೀಕರಿಸದ ನಂತರ ಶಾಸಕರು ಈ ನಿರ್ಧಾರ ಕೈಗೊಂಡಿದ್ದಾರೆ. ರಾಜೀನಾಮೆ ನೀಡಿರುವ ಶಾಸಕರು ಖುದ್ದಾಗಿ ಬಂದು ಭೇಟಿ ಮಾಡಿದ ನಂತರ ರಾಜೀನಾಮೆ ಅಂಗೀಕರಿಸುವುದಾಗಿ ಸ್ಪೀಕರ್‌ ಸ್ಪಷ್ಟಪಡಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು