ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಿಪ ಚುನಾವಣಾ ಫಲಿತಾಂಶ

Last Updated 24 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು:ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಸಮಿತಿಗೆ ಶನಿವಾರ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ.

ಬೆಂಗಳೂರು ವಿಭಾಗದಿಂದ ಹುಲಿಕಲ್‌ ನಟರಾಜ್‌, ಎಚ್‌.ಎಸ್‌.ಟಿ.ಸ್ವಾಮಿ,ಎಂ.ಎನ್‌.ಮುಸ್ಟೂರಪ್ಪ, ಬಿ.ಎನ್‌.ಶ್ರೀನಾಥ್‌, ಕೌಶಿಕ್‌ ಎಸ್‌, ಶಿವಕುಮಾರ್‌ ಚುನಾಯಿತರಾಗಿದ್ದಾರೆ.

ಮೈಸೂರು ವಿಭಾಗದಿಂದ ಸಿ.ಕೃಷ್ಣೇಗೌಡ, ಎ.ಎನ್‌.ಮಹೇಶ್‌, ಶ್ರೀಮತಿ ಹರಿಪ್ರಸಾದ್‌, ಟಿ.ಜಿ.ಕೃಷ್ಣರಾಜ ಅರಸ್‌, ರಾಮಚಂದ್ರ ಮತ್ತು ಇ.ಬಸವರಾಜ್ ಆಯ್ಕೆಯಾಗಿದ್ದಾರೆ.

ಬೆಳಗಾವಿ ವಿಭಾಗದ ಫಲಿತಾಂಶ: ಅನ್ನದಾನೇಶ್ವರ ಹಳ್ಳಿಕೇರಿ, ಬಿ.ದೊಡ್ಡಬಸಪ್ಪ, ಎಚ್‌.ಜಿ. ಹುದ್ದಾರ, ಶಂಕರ ತಮ್ಮಣ್ಣ ನಾಯಕ, ಆರ್‌.ಎಸ್. ಎಲಿಆಯ್ಕೆಯಾಗಿದ್ದಾರೆ. ಮಹಿಳಾ ಮೀಸಲು ಸ್ಥಾನಕ್ಕೆ ಮೀನಾಕ್ಷಿ ಕುಡುಸೋಮಣ್ಣವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಲಬುರ್ಗಿ ವಲಯದಿಂದ ಗಿರೀಶ ಕಡ್ಲೇವಾಡ,ಗಿರೀಶ ಕಡ್ಲೇವಾಡ, ಬೀದರ್‌ನ ಅಣದೂರು ಮಹಾರುದ್ರಪ್ಪ, ಪ್ರಕಾಶ ಲಕ್ಕಶೆಟ್ಟಿ, ಯಾದಗಿರಿಯ ಸೂರ್ಯಪ್ರಕಾಶ್ ಘನಾತೆ ಮತ್ತು ಪರಿಶಿಷ್ಟ ಮೀಸಲು ಸ್ಥಾನಕ್ಕೆ ರಾಯಚೂರಿನ ಡಾ.ಕುಂಟೆಪ್ಪ ಗೌರಿಪುರ ಮತ್ತು ಸಂಗಮೇಶ ಹಿರೇಮಠ ಬಣದಿಂದ ದಾನಿ ಬಾಬುರಾವ ಚುನಾಯಿತರಾಗಿದ್ದಾರೆ. ಇದೇ 26 ರಂದು ಬೆಂಗಳೂರಿನಲ್ಲಿ ನಡೆಯುವ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ರಾಜ್ಯ ಚುನಾವಣಾಧಿಕಾರಿ ಸಿ.ಟಿ.ಸರಸ್ವತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT