ಭಾನುವಾರ, ಜುಲೈ 25, 2021
25 °C

ಸೇನಾ ಗೌರವದೊಂದಿಗೆ ನಿವೃತ್ತ ಲೆಫ್ಟಿನೆಂಟ್‌ ಜನರಲ್ ಕೋದಂಡ ಸೋಮಣ್ಣ ಅಂತ್ಯಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿರಾಜಪೇಟೆ: ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಕೋದಂಡ ಎನ್.ಸೋಮಣ್ಣ (93) ಅವರ ಅಂತ್ಯಕ್ರಿಯೆ ಪಟ್ಟಣದ ಅವರ ತೋಟದಲ್ಲಿ ಭಾನುವಾರ ಕೊಡವ ವಿಧಿವಿಧಾನ ಹಾಗೂ ಸೇನಾ ಗೌರವದೊಂದಿಗೆ ನೆರವೇರಿತು.

ವಯೋಸಹಜ ಅನಾರೋಗ್ಯದಿಂದ ಪಂಜರಪೇಟೆಯಲ್ಲಿನ ತಮ್ಮ ನಿವಾಸದಲ್ಲಿ ಸೋಮಣ್ಣ ಅವರು ಶನಿವಾರ ವಿಧಿವಶರಾಗಿದ್ದರು. ಭಾನುವಾರ ಮನೆಯ ಹಿಂದಿರುವ ಕಾಫಿತೋಟದಲ್ಲಿ ಸೇನಾ ಗೌರವ, ನಿವೃತ್ತ ಸೇನಾಧಿಕಾರಿಗಳು ಹಾಗೂ ಕೆಲ ಸಂಬಂಧಿಕರ ಸಮ್ಮುಖದಲ್ಲಿ ಅಂತ್ಯಕ್ರಿಯೆಯನ್ನು ನಡೆಸಲಾಯಿತು. 


ಕೋದಂಡ ಎನ್.ಸೋಮಣ್ಣ

ಬೆಂಗಳೂರಿನಿಂದ ಆಗಮಿಸಿದ್ದ ಸೇನೆಯ ಎಂಇಜಿ ತಂಡವು ಮೇಜರ್‌ ಅರ್ನವ್ ಗುಪ್ತ ಹಾಗೂ ಪ್ಯಾರಾ ಮಿಲಿಟರಿಯ ಮೇಜರ್‌ ಪಾಂಚಾಲ್ ಗುಪ್ತ ನೇತೃತ್ವದಲ್ಲಿ ಅಗಲಿದ ಹಿರಿಯ ಸೇನಾಧಿಕಾರಿಗೆ ಗೌರವ ಸಲ್ಲಿಸಿತು.

ಮೃತರ ಪತ್ನಿ ರೇಣು, ಪುತ್ರಿ ಶರನ್ ಪೆಮ್ಮಯ್ಯ ಹಾಗೂ ಮೊಮ್ಮಕ್ಕಳು ಇದ್ದರು. ಅಮೆರಿಕದಲ್ಲಿ ವೈದ್ಯರಾಗಿರುವ ಪುತ್ರ ನಿವೇದ್ ಕೊರೊನಾ ಹಿನ್ನೆಲೆಯಲ್ಲಿ ವಿಮಾನ ಸಂಚಾರ ರದ್ದಾಗಿದ್ದು, ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ. 

ಜಿಲ್ಲೆಯ ವಿವಿಧೆಡೆಯಲ್ಲಿನ ನಿವೃತ್ತ ಸೇನಾಧಿಕಾರಿಗಳು, ಗಣ್ಯರು ಸೇರಿದಂತೆ ಪಟ್ಟಣದ ಸುತ್ತಮುತ್ತಲಿನ ಅಭಿಮಾನಿಗಳು, ಹಿತೈಷಿಗಳು ಶನಿವಾರ ಸಂಜೆಯಿಂದಲೇ ಪಾರ್ಥಿವ ಶರೀರದ ದರ್ಶನ ಪಡೆದರು.

ತಾಲ್ಲೂಕು ಆಡಳಿತದ ಪರವಾಗಿ ಶಿರಸ್ತೇದಾರ್ ಎಚ್.ಕೆ.ಪೊನ್ನು, ಡಿವೈಎಸ್‌ಪಿ ಜಯಕುಮಾರ್, ಕಂದಾಯ ಇಲಾಖೆಯ ಅಧಿಕಾರಿಗಳು, ಕಾವೇರಿ ಸೇನೆಯ ರವಿ ಚಂಗಪ್ಪ, ಕೋಲತಂಡ ರಘು ಮಾಚಯ್ಯ, ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ, ಕಾಂಗ್ರೆಸ್‌ ಮುಖಂಡರಾದ ಟಿ.ಪಿ.ರಮೇಶ್, ಪಂಜರ್ಪೇಟೆ ಕೊಡವಕೇರಿಯ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಪಟ್ಟಣ ಪಂಚಾಯಿತಿ ಎಂಜಿನಿಯರ್ ಎಂ.ಪಿ.ಹೇಮ್ ಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯರು, ಮಡಿಕೇರಿಯಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಪಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂ ಅಧ್ಯಕ್ಷ ನಿವೃತ್ತ ಕರ್ನಲ್ ಕೆ.ಸಿ.ಸುಬ್ಬಯ್ಯ, ಸಂಚಾಲಕ ನಿವೃತ್ತ ಮೇಜರ್ ನಂಜಪ್ಪ ಪುಷ್ಪಗುಚ್ಚ ಸಲ್ಲಿಸಿ ನಮನ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು