ಎಸ್‌ಐಟಿಯನ್ನು ಕುಮಾರಸ್ವಾಮಿ ಸೃಷ್ಟಿಸಿದ್ದಾರಾ? ದೇಶಪಾಂಡೆ

7

ಎಸ್‌ಐಟಿಯನ್ನು ಕುಮಾರಸ್ವಾಮಿ ಸೃಷ್ಟಿಸಿದ್ದಾರಾ? ದೇಶಪಾಂಡೆ

Published:
Updated:

ಬೆಂಗಳೂರು: ಆಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ನಡೆದ ಕಲಾಪದ ವೇಳೆ ಮಾತನಾಡಿದ ಸಚಿವ ಆರ್‌.ವಿ.ದೇಶಪಾಂಡೆ, ‌ಪ್ರತಿಯೊಂದು ಸಂಸ್ಥೆಯ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದರೆ ಹೇಗೆ? ಎಂದು ಪ್ರಶ್ನಿಸಿದರು.

ಎಸ್‌ಐಟಿ ಮುಖ್ಯಮಂತ್ರಿಗಳ ಅಧೀನದಲ್ಲಿ ಬರುತ್ತದೆ. ಆದರೆ, ಎಸ್‌ಐಟಿಯನ್ನು ಅವರು ರಚಿಸಿದ್ದಾರಾ? ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುತ್ತದೆ. ಹಾಗಂತ ಅದನ್ನು ಮೋದಿ ಸೃಷ್ಟಿಸಿದ್ದಾರಾ? ಎಂದರು.

ಬಳಿಕ ಮಾತನಾಡಿದ ಜೆಡಿಎಸ್‌ನ ಶಿವಲಿಂಗೇಗೌಡ, ಸಭಾಧ್ಯಕ್ಷರ ಬಗ್ಗೆ ಆಪಾದನೆ ಮಾಡಿರುವುದು ನಮಗೆ ನೋವಾಗಿದೆ ಎಂದು ಹೇಳಿದರು.

ಆಡಿಯೊ ಪ್ರಕರಣ ದೇವದುರ್ಗದಲ್ಲಿ ನಡೆದಿದೆ ಎನ್ನಲಾಗಿದೆ. ಆದರೆ ಆ ಸನ್ನಿವೇಶ ರಾಜ್ಯದ ರಾಜಕೀಯ ಅಸ್ಥಿರತೆಗೆ ನಡೆದ ಪ್ರಯತ್ನವಾಗಿದೆ. ಸಭಾಧ್ಯಕ್ಷರನ್ನು ನಡುವೆ ಎಳೆದಿರುವುದರಿಂದ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಬೇಕು. ಪ್ರಕರಣದಲ್ಲಿ ಪ್ರಧಾನಿಗಳ ಹೆಸರು ಪ್ರಸ್ತಾಪವಾಗಿದೆ. ನ್ಯಾಯಮೂರ್ತಿಗಳನ್ನು ಎಳೆದು ತರಲಾಗಿದೆ. ಇಂಥ ಗಂಭೀರ ಪ್ರಕರಣವನ್ನು ಇಲ್ಲಿಗೇ ಬಿಟ್ಟುಬಿಡಿ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಬಿಜೆಪಿಯವರು ಮಾತೆತ್ತಿದರೆ ಈ ಸರ್ಕಾರದಲ್ಲಿ ನಂಬಿಕೆ ಇಲ್ಲ ಎನ್ನುತ್ತಾರೆ. ಹಾಗಾದರೆ ಇನ್ಯಾವ ಸರ್ಕಾರವನ್ನು ತರಬೇಕು ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ‘ತಪ್ಪಾಗಿದೆ ಒಪ್ಪಿಕೊಂಡಿದ್ದೇವೆ, ಪ್ರಕರಣ ಕೈ ಬಿಡಿ; ಇಲ್ಲವೇ ಸದನ ಸಮಿತಿ ರಚಿಸಿ’

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 0

  Sad
 • 3

  Frustrated
 • 0

  Angry

Comments:

0 comments

Write the first review for this !