ಶನಿವಾರ, ಮೇ 15, 2021
26 °C

ಬಿಜೆಪಿ ಪಕ್ಷ ಹೇಳಿದಂತೆ ರಮೇಶ ಕೇಳಲೇಬೇಕು: ಸತೀಶ ಜಾರಕಿಹೊಳಿ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಸತೀಶ ಜಾರಕಿಹೊಳಿ ಹಾಗೂ ರಮೇಶ ಜಾರಕಿಹೊಳಿ

ಹುಬ್ಬಳ್ಳಿ: ಅಧಿಕಾರದ ಆಸೆಗಾಗಿ ಬಿಜೆಪಿ ಸೇರಿರುವ ರಮೇಶ ಜಾರಕಿಹೊಳಿ ದೊಡ್ಡ ರಾಷ್ಟ್ರೀಯ ಪಕ್ಷದಲ್ಲಿದ್ದಾರೆ. ಈಗ ಆ ಪಕ್ಷದ ವರಿಷ್ಠರು ಅಧಿಕಾರ ಕೊಡುವ ತನಕ ಕಾಯಲೇಬೇಕು. ಇದನ್ನು ಬಿಟ್ಟು ನನ್ನ ಜೊತೆ 17 ಜನ ಶಾಸಕರು ಇದ್ದಾರೆ ಎಂದರೆ ಯಾರೂ ಒಪ್ಪುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ‌ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜಿಲ್ಲೆಯ ಜನ ಬಿಜೆಪಿ ಹಾಗೂ ಯಡಿಯೂರಪ್ಪ ಅವರನ್ನು ನೋಡಿ ಮತ ಹಾಕಿದ್ದಾರೆ ಹೊರತು ರಮೇಶ ಮುಖ ನೋಡಿ ಅಲ್ಲ ಎಂದರು.

ರಮೇಶ ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಕೈ ಕೊಟ್ಟು ಹೋದ ಎಲ್ಲರಿಗೂ ಪಶ್ಚಾತ್ತಾಪ ಆಗಿದೆ. ಬಿಜೆಪಿ ರಾಷ್ಟ್ರೀಯ ಪಕ್ಷ. ಪಕ್ಷ ಹೇಳಿದ್ದನ್ನು ಕೇಳಲೇಬೇಕು. ಆದರೆ, ಕೈ ಕೊಟ್ಟು ಹೋದವರು ಅಂದುಕೊಂಡಂತೆ ಎಲ್ಲವೂ ಆಗುವುದಿಲ್ಲ ಎಂದರು.

ಬಿಜೆಪಿಯಲ್ಲಿಯೂ ಸರ್ಕಸ್ ನಡೆದಿದೆ. ಅವರಲ್ಲಿಯೂ ಸಾಕಷ್ಟು ಸಮಸ್ಯೆಗಳು ಇವೆ. ಅವುಗಳನ್ನು ಯಡಿಯೂರಪ್ಪ ನಿಭಾಯಿಸಬೇಕಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು