ಶುಕ್ರವಾರ, ಆಗಸ್ಟ್ 19, 2022
22 °C
ತಾರಕಕ್ಕೇರಿದ ಸೋದರರ ಸಂಘರ್ಷ

ರಮೇಶನ ಬೆಂಬಲಿಗನಿಗೆ ಹೊಡೆಯುತ್ತೇನೆ: ಸತೀಶ ಜಾರಕಿಹೊಳಿ ವಿಡಿಯೊ ವೈರಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕಾಕ: ಅನರ್ಹ ಶಾಸಕ ರಮೇಶ ಜಾರಕಿಹೊಳಿ ಹಾಗೂ ಸಹೋದರ, ಶಾಸಕ ಸತೀಶ ಅವರ ನಡುವಿನ ತಿಕ್ಕಾಟ ತಾರಕಕ್ಕೇರಿದೆ. ತಮ್ಮ ಬೆಂಬಲಿಗರ ಮೇಲೆ ಹಲ್ಲೆ ಮಾಡಿರುವ, ರಮೇಶ ಅವರ ಬೆಂಬಲಿಗ ರಾಜು ತಳವಾರ ಅವರನ್ನು ಹೊಡೆಯುತ್ತೇನೆ ಎಂದು ಸತೀಶ ಪೊಲೀಸರ ಎದುರೇ ಆವಾಜ್‌ ಹಾಕಿರುವ ವಿಡಿಯೊ ವೈರಲ್‌ ಆಗಿದೆ.

ತಾಲ್ಲೂಕಿನ ಅಂಕಲಗಿಯಲ್ಲಿ ಶುಕ್ರವಾರ ರಾತ್ರಿ ರಮೇಶ ಹಾಗೂ ಅವರ ಅಳಿಯ ಅಂಬಿರಾವ್‌ ಪಾಟೀಲ ಅವರ ಬೆಂಬಲಿಗರ ನಡುವೆ ಘರ್ಷಣೆ ನಡೆದಿತ್ತು ಎನ್ನಲಾಗಿದೆ. ತಮ್ಮ ಬೆಂಬಲಿಗರ ಜೊತೆ ‍ಪೊಲೀಸ್‌ ಠಾಣೆಗೆ ಶನಿವಾರ ಆಗಮಿಸಿದ ಸತೀಶ ಅವರು ರಾಜು ತಳವಾರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

‘ರಮೇಶ ಬೆಂಬಲಿಗ ರಾಜು ತಳವಾರ ನನ್ನ ಬೆಂಬಲಿಗರ ಮೇಲೆ ಹಲ್ಲೆ ಮಾಡಿದ್ದಾನೆ. ಅವನನ್ನು ಬಿಡುವುದಿಲ್ಲ. ರಮೇಶ ಹಾಗೂ ಅಂಬಿರಾವ್‌ ಪಾಟೀಲ ಎದುರೇ ಹೊಡೆಯುತ್ತೇನೆ. ಆ ತಾಕತ್ತು ನನಗಿದೆ. ಅವನನ್ನು ಹೇಗೆ ಸಂಭಾಳಿಸುತ್ತಿರೋ ಸಂಭಾಳಿಸಿ. ಎಸ್ಪಿಗೆ ಹೇಗೆ ಮನವರಿಕೆ ಮಾಡಿಕೊಡುತ್ತೀರೊ ಮಾಡಿ. ಆದರೆ, ನಮ್ಮ ಜನರಿಗೆ ನ್ಯಾಯ ಸಿಗಬೇಕು’ ಎಂದು ಪೊಲೀಸರಿಗೆ ಹೇಳಿದರು.

‘ನಾನೇನು ಇದರ ಬಗ್ಗೆ ದೂರು ನೀಡಲ್ಲ. ನನಗೆ ಗೊತ್ತು ಈ ದೂರುಗಳಿಂದ ಏನೂ ಪ್ರಯೋಜನವಾಗುವುದಿಲ್ಲ. ನೀವು ಅವನನ್ನು ಹೇಗೆ ನಿಯಂತ್ರಿಸುತ್ತಿರೋ ಗೊತ್ತಿಲ್ಲ. ಮತ್ತೆ ಇಂತಹ ಘಟನೆಗಳು ನಡೆದರೆ ಆತ (ರಾಜು ತಳವಾರ) ಮನೆಗೆ ಹೋಗುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಲಖನ್‌ ಜಾರಕಿಹೊಳಿ ಕೂಡ ಅವರ ಜೊತೆ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು